Kannada film industry

ರಾಜಕೀಯ ವಿಡಂಬನೆಯ 'Politics ಕಲ್ಯಾಣ' ಡಿಸೆಂಬರ್‌ನಲ್ಲಿ ತೆರೆಗೆ ಬರಲು ಸಿದ್ಧ!
ಕನ್ನಡ ಚಲನಚಿತ್ರೋದ್ಯಮವು ಸದ್ಯ ವೈವಿಧ್ಯಮಯ ಸಿನಿಮಾ ಪ್ರಕಾರಗಳಿಗೆ ಸಾಕ್ಷಿಯಾಗುತ್ತಿದೆ. ಹೊಸಬರು ವಿವಿಧ ಸಿನಿಮಾಗಳೊಂದಿಗೆ ಸ್ಯಾಂಡಲ್‌ವುಡ್‌ನಲ್ಲಿ ನೆಲೆಕಂಡುಕೊಳ್ಳಲು ಯತ್ನಿಸುತ್ತಿದ್ದಾರೆ. ಈ ನಡುವೆ 'Politics ಕಲ್ಯಾಣ' ಸದ್ದಿಲ್ಲದೆ ಚಿತ್ರೀಕರಣ ಮುಗಿಸಿ, ಬಿಡುಗಡೆಗೆ ಸಜ್ಜಾಗಿದೆ.

7 ವರ್ಷಗಳ ನಂತರ ನಿರ್ದೇಶನಕ್ಕೆ ಮರಳಿದ ಚಕ್ರವರ್ತಿ ಚಂದ್ರಚೂಡ್; ಮಿಲಿಂದ್ ಗೌತಮ್ ನಾಯಕ
ಕನ್ನಡದಲ್ಲಿ ಜನ್ಮ ಮತ್ತು ತಮಿಳಿನಲ್ಲಿ ತಂಬಿ ಊರುಕ್ಕು ಪುದುಸು ಮುಂತಾದ ಸಿನಿಮಾಗಳಿಗೆ ಹೆಸರುವಾಸಿಯಾದ ನಿರ್ದೇಶಕ ಮತ್ತು ಬಿಗ್ ಬಾಸ್ ಕನ್ನಡ 8ರ ಮಾಜಿ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಏಳು ವರ್ಷಗಳ ವಿರಾಮದ ನಂತರ ನಿರ್ದೇಶನಕ್ಕೆ ಮರಳುತ್ತಿದ್ದಾರೆ.

ಗಣೇಶ್-ಶ್ರೀನಿವಾಸ್ ರಾಜು ಮುಂಬರುವ ಚಿತ್ರದ ಮೂಲಕ ಮಾಳವಿಕಾ ನಾಯರ್ ಕನ್ನಡಕ್ಕೆ ಪದಾರ್ಪಣೆ!
ಈಗಾಗಲೇ ತೆಲುಗು, ಮಲಯಾಳಂ, ತಮಿಳಿನಲ್ಲಿ ಛಾಪು ಮೂಡಿಸಿರುವ ನಟಿ ಮಾಳವಿಕಾ ನಾಯರ್ ಕನ್ನಡಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಬಹುಭಾಷಾ ನಟಿ, ಉಸ್ತಾದ್ ಹೋಟೆಲ್‌ನಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರು.

ಖ್ಯಾತ ನಟ, ನಿರ್ದೇಶಕ ಸಿವಿ ಶಿವಶಂಕರ್ ಹೃದಯಾಘಾತದಿಂದ ನಿಧನ
ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಮತ್ತು ಸಾಹಿತಿಯೂ ಆಗಿದ್ದ ಸಿ.ವಿ. ಶಿವಶಂಕರ್ ಅವರು ಮಂಗಳವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ಟೋಬಿ ಬಿಡುಗಡೆ ದಿನಾಂಕ ಫಿಕ್ಸ್; ಯಾವುದೇ ಕ್ರಾಂತಿ ಬರಹಗಾರನ ಸ್ಫೂರ್ತಿ ಎಂದ ರಾಜ್ ಬಿ ಶೆಟ್ಟಿ
ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ 'ಸ್ವಾತಿ ಮುತ್ತಿನ ಮಳೆ ಹನಿಯೇ' ಚಿತ್ರೀಕರಣವನ್ನು ರಾಜ್ ಬಿ ಶೆಟ್ಟಿ ಅವರು ಪೂರ್ಣಗೊಳಿಸಿದ್ದು, ಏಕಕಾಲದಲ್ಲಿ ಟೋಬಿ ಎಂಬ ಮತ್ತೊಂದು ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅದು ಈಗ ಬಿಡುಗಡೆಗೆ ಸಿದ್ಧವಾಗಿದೆ.

23 ವರ್ಷಗಳ ನಂತರ ನಿರ್ದೇಶನಕ್ಕಿಳಿದ ಸಂಗೀತ ಸಂಯೋಜಕ ವಿ ಮನೋಹರ್; 'ದರ್ಬಾರ್' ಬಗ್ಗೆ ಹೇಳಿದ್ದೇನು?
ಸಂಗೀತ ಸಂಯೋಜಕ ವಿ ಮನೋಹರ್ ಅವರು ಓ ಮಲ್ಲಿಗೆ (1997) ಮೂಲಕ ನಿರ್ದೇಶಕರಾದರು. ನಂತರ ಅವರು 'ಇಂದ್ರಧನುಷ್' (2000) ಸಿನಿಮಾ ನಿರ್ದೇಶಿಸಿದರು. ಇದೀಗ 23 ವರ್ಷಗಳ ನಂತರ, ಮನೋಹರ್ ಅವರು ತಮ್ಮ ಮೂರನೇ ಸಿನಿಮಾ 'ದರ್ಬಾರ್' ಅನ್ನು ನಿರ್ದೇಶಿಸುತ್ತಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಹಿಂದಿಯ ಖ್ಯಾತ ನಟ ಅಧ್ಯಯನ್ ಸುಮನ್ ಪದಾರ್ಪಣೆ, ಜೋಡಿಯಾಗಿ ರಾಗಿಣಿ ದ್ವಿವೇದಿ!
ಆರ್ಯನ್ ಅವರ ಚೊಚ್ಚಲ ನಿರ್ದೇಶನದ ಸಿನಿಮಾ ಮೂಲಕ ಅಧ್ಯಯನ್ ಸುಮನ್ ದಕ್ಷಿಣ ಭಾರತದ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ. ರಾಝ್- ದಿ ಮಿಸ್ಟರಿ ಕಂಟಿನ್ಯೂಸ್ ಮತ್ತು ಆಶ್ರಮ್ ವೆಬ್ ಸರಣಿ, ಹಾಗೆಯೇ ಮ್ಯೂಸಿಕಲ್ ವಿಡಿಯೋಗಳಿಗೆ ಹೆಸರುವಾಸಿಯಾದ ಹಿಂದಿ ನಟ, ಇದೀಗ ಥ್ರಿಲ್ಲಿಂಗ್ ಬಹುಭಾಷಾ ಕ್ರೈಮ್ ಸಿನಿಮಾದಲ್ಲಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕಾಂತಾರ, ಕೆಜಿಎಫ್ ಬಳಿಕ ಭಾರಿ ಯಶಸ್ಸಿನ ನಿರೀಕ್ಷೆಯಲ್ಲಿ 'ಕಬ್ಜ'; ಮುಂಗಡ ಬುಕ್ಕಿಂಗ್ ಆರಂಭ
'ಕೆಜಿಎಫ್: ಚಾಪ್ಟರ್ 1' ಮತ್ತು 'ಕೆಜಿಎಫ್: ಚಾಪ್ಟರ್-2', '777 ಚಾರ್ಲಿ' ಮತ್ತು 'ಕಾಂತಾರ' ಯಶಸ್ಸಿನ ನಂತರ, ಕನ್ನಡ ಚಿತ್ರರಂಗವು ಈ ವಾರಾಂತ್ಯದಲ್ಲಿ 'ಕಬ್ಜಾ' ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿದೆ.

'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ನಮ್ಮ ಇಂಡಸ್ಟ್ರಿ ಹೆಮ್ಮೆ ಪಡುವಂತೆ ಮಾಡುತ್ತದೆ: ರಕ್ಷಿತ್ ಶೆಟ್ಟಿ
ನಿತಿನ್ ಕೃಷ್ಣಮೂರ್ತಿ ಅವರ ಚೊಚ್ಚಲ ನಿರ್ದೇಶನದ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ತನ್ನ ಶೀರ್ಷಿಕೆ ಕಾರಣದಿಂದಲೇ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಚಿತ್ರವು ನಟ-ನಿರ್ದೇಶಕ ರಕ್ಷಿತ್ ಶೆಟ್ಟಿ ಅವರ ಗಮನ ಸೆಳೆದಿದೆ. ಅವರು ತಮ್ಮ ಪರಂವಃ ಸ್ಟುಡಿಯೋಸ್‌ನಡಿ ಚಿತ್ರವನ್ನು ಪ್ರಸ್ತುತಪಡಿಸಲು ಸಿದ್ಧರಾಗಿದ್ದಾರೆ.

