Kangana Ranaut

ತುಮಕೂರು: ರೈತರ ವಿರುದ್ಧ ಟ್ವೀಟ್ ಮಾಡಿದ್ದ ಕಂಗನಾ ವಿರುದ್ಧ ಪ್ರಕರಣ ದಾಖಲಿಸಲು ನ್ಯಾಯಾಲಯ ಆದೇಶ
ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿದ ಕೃಷಿ ಸಂಬಂಧಿತ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸಿದ ರೈತರನ್ನು ಗುರಿಯಾಗಿಸಿ ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ್ದ ಬಾಲಿವುಡ್ ನಟಿ ಕಂಗನಾ ರಾಣಾವತ್ ವಿರುದ್ಧ ಪ್ರಕರಣ ದಾಖಲಿಸುವಂತೆ ಕರ್ನಾಟಕದ ತುಮಕೂರು ಸ್ಥಳೀಯ ನ್ಯಾಯಾಲಯವೊಂದು ಶುಕ್ರವಾರ ಪೊಲೀಸರಿಗೆ ನಿರ್ದೇಶನ ನೀಡಿದೆ.

ಹತ್ರಾಸ್ ಗ್ಯಾಂಗ್ ರೇಪ್: ಸಿಎಂ ಯೋಗಿ ಮೇಲೆ ನಂಬಿಕೆ ಇದೆ, ಹೈದರಾಬಾದ್ ಎನ್ಕೌಂಟರ್ ನೆನಪಿಸಿದ ಕಂಗನಾ!
2012ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯ ಗ್ಯಾಂಗ್ರೇಪ್ ಮಾದರಿಯಲ್ಲೇ ಉತ್ತರ ಪ್ರದೇಶದ ಹತ್ರಾಸ್ನಲ್ಲಿ ನಡೆದಿದ್ದು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ನಟಿ ಕಂಗನಾ ರಣಾವತ್ ಸಿಎಂ ಯೋಗಿ ಮೇಲೆ ನಂಬಿಕೆ ಇದೆ. ಅನ್ಯಾಯವಾಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಹಿಂದೆ ಡ್ರಗ್ಸ್ ಸೇವಿಸುತ್ತಿದ್ದೆ ಎಂದು ‘ಸ್ವಯಂ’ ಒಪ್ಪಿಕೊಂಡಿರುವ ಕಂಗನಾಗೆ ಸಮೆನ್ಸ್ ಏಕಿಲ್ಲ?: ಎನ್ ಸಿಬಿಗೆ ನಗ್ಮಾ ಪ್ರಶ್ನೆ
ಈ ಹಿಂದೆ ಡ್ರಗ್ಸ್ ಸೇವಿಸುತ್ತಿದ್ದೆ ಎಂದು ಸ್ವಯಂ ಒಪ್ಪಿಕೊಂಡಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಅವರಿಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್ ಸಿ ಬಿ) ಏಕೆ ಸಮನ್ಸ್ ಜಾರಿಗೊಳಿಸಿಲ್ಲ ಎಂದು ಬಾಲಿವುಡ್ ಮತ್ತೊಬ್ಬ ಹಿರಿಯ ನಟಿ, ಕಾಂಗ್ರೆಸ್ ನಾಯಕಿ ನಗ್ಮಾ ಪ್ರಶ್ನಿಸಿದ್ದಾರೆ.

ಬಂಗಲೆ ಹಾನಿ: ಬಿಎಂಸಿಯಿಂದ 2 ಕೋಟಿ ರೂ. ಪರಿಹಾರ ಕೇಳಿದ ಕಂಗನಾ
ತಮ್ಮ ಮುಂಬೈ ಬಂಗಲೆ ತೆರವು ಕಾರ್ಯಾಚರಣೆ "ಅಕ್ರಮ" ಎಂದಿರುವ ಬಾಲಿವುಡ್ ನಟಿ ಕಂಗನಾ ರನೌತ್ ಅವರು, ಕಟ್ಟಡ ಹಾನಿಗೊಳಿಸಿದ ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) 2 ಕೋಟಿ ರೂ.ಪರಿಹಾರ ನೀಡಬೇಕು ಎಂದು ಕೋರಿ ಬಾಂಬೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

ಬಾಲಿವುಡ್ ನಟಿ ಕಂಗನಾ ರಣಾವತ್ ಕಾಲೆಳೆದು ಟ್ರೋಲ್ ಗೆ ಗುರಿಯಾದ ನಟ ಪ್ರಕಾಶ್ ರಾಜ್!
ಬಾಲಿವುಡ್ ನಟಿ ಕಂಗನಾ ರಣಾವತ್ ಕಳೆದ ಕೆಲ ದಿನಗಳಿಂದ ಭಾರೀ ಸುದ್ದಿಯಲ್ಲಿದ್ದಾರೆ. ಮಹಾರಾಷ್ಟ್ರ ಸರ್ಕಾರ ಹಾಗೂ ಕಂಗನಾ ನಡುವೆ ವಾಕ್ ಸಮರ ಶುರುವಾಗಿದೆ. ಇದರ ಮಧ್ಯೆ ನಟ ಪ್ರಕಾಶ್ ರೈ ಟ್ವೀಟ್ ಮೂಲಕ ನಟಿಯ ಕಾಲೆಳೆದಿದ್ದಾರೆ.

ಬಿಎಂಸಿಯಿಂದ ಕಂಗನಾಗೆ ಮತ್ತೊಂದು ನೊಟೀಸ್!
ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಕಚೇರಿಯ ಅಕ್ರಮ ನಿರ್ಮಾಣ ಭಾಗವನ್ನು ತೆರವುಗೊಳಿಸಿದ ಕೆಲವೇ ದಿನಗಳಲ್ಲಿ ಬೃಹತ್ ಮುಂಬೈ ಪಾಲಿಕೆ ಮತ್ತೊಂದು ನೊಟೀಸ್ ಜಾರಿಗೊಳಿಸಿದೆ.

ಬಾಳಾ ಸಾಬ್ ಠಾಕ್ರೆಗೆ ಶಿವಸೇನೆ ಕಾಂಗ್ರೆಸ್ ಆಗಿ ಪರಿವರ್ತನೆಯಾಗುವ ಭೀತಿ ಇತ್ತು... ಆದರೆ ಅದು ಇಂದು ನಿಜವಾಗಿದೆ: ಕಂಗನಾ ರಣಾವತ್
ತಮ್ಮ ಪಕ್ಷದ ಇಂದಿನ ಪರಿಸ್ಥಿತಿಯನ್ನು ಬಾಳ ಸಾಹೇಬ್ ಠಾಕ್ರೆಯವರು ನೋಡಿದ್ದರೆ, ಅವರ ಮನಸ್ಸು ಏನಾಗುತ್ತಿತ್ತು ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಶುಕ್ರವಾರ ಪ್ರಶ್ನಿಸಿದ್ದಾರೆ.

ಶಿವಸೇನೆ 'ಸೋನಿಯಾ ಸೇನೆ'ಯಾಗಿ ಮಾರ್ಪಟ್ಟಿದೆ: ನಟಿ ಕಂಗನಾ ರಣಾವತ್
ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಹಾಗೂ ಬಾಲಿವುಡ್ ಡ್ರಗ್ ಮಾಫಿಯಾ ಬಗ್ಗೆ ದೊಡ್ಡದಾಗಿ ದನಿಯೆತ್ತಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ತಿರುಗಿಬಿದ್ದಿರುವ ಖ್ಯಾತ ಬಾಲಿವುಡ್ ನಟಿ ಕಂಗನಾ ರಣಾವತ್ ಅವರು, ಆಡಳಿತಾರೂಢ ಶಿವಸೇನೆ ವಿರುದ್ಧ ಗುರುವಾರ ತೀವ್ರವಾಗಿ ಗುಡುಗಿದ್ದಾರೆ.

ನಟಿ ಕಂಗನಾ ಹೇಳಿಕೆ ಸಾಮಾನ್ಯ ಜನರಿಗೆ ಅಪ್ರಸ್ತುತ: ಶರದ್ ಪವಾರ್
ಬಾಲಿವುಡ್ ನಟಿ ಕಂಗನಾ ರನೌತ್ ಅವರ ಇತ್ತೀಚಿನ ಟೀಕೆಗಳ ತೀವ್ರತೆಯನ್ನು ಕಡಿಮೆ ಮಾಡಲು ಯತ್ನಿಸಿದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು, ಇಂತಹ ಹೇಳಿಕೆಗಳು ಸಾಮಾನ್ಯ ಜನರಿಗೆ ಅಪ್ರಸ್ತುತವಾಗುತ್ತವೆ ಎಂದು ಬುಧವಾರ ಹೇಳಿದ್ದಾರೆ.

