ಸಿನಿಮಾ ಸುದ್ದಿ

ಬಿಎಂಸಿಯಿಂದ ಕಂಗನಾಗೆ ಮತ್ತೊಂದು ನೊಟೀಸ್! 

ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಕಚೇರಿಯ ಅಕ್ರಮ ನಿರ್ಮಾಣ ಭಾಗವನ್ನು ತೆರವುಗೊಳಿಸಿದ ಕೆಲವೇ ದಿನಗಳಲ್ಲಿ ಬೃಹತ್ ಮುಂಬೈ ಪಾಲಿಕೆ ಮತ್ತೊಂದು ನೊಟೀಸ್ ಜಾರಿಗೊಳಿಸಿದೆ.

ಬಿಎಂಸಿಯಿಂದ ಕಂಗನಾಗೆ ಮತ್ತೊಂದು ನೊಟೀಸ್! 
ಧ್ವಂಸಗೊಂಡ ತಮ್ಮ ಕಚೇರಿ ಪರಿಶೀಲಿಸುತ್ತಿರುವ ನಟಿ ಕಂಗನಾ ರಾನಾವತ್
Published On :

ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಕಚೇರಿಯ ಅಕ್ರಮ ನಿರ್ಮಾಣ ಭಾಗವನ್ನು ತೆರವುಗೊಳಿಸಿದ ಕೆಲವೇ ದಿನಗಳಲ್ಲಿ ಬೃಹತ್ ಮುಂಬೈ ಪಾಲಿಕೆ ಮತ್ತೊಂದು ನೊಟೀಸ್ ಜಾರಿಗೊಳಿಸಿದೆ. 

ಈ ಬಾರಿ ನಟಿಯ ಮನೆಯ ಕೆಲವು ಭಾಗಗಳು ಅಕ್ರಮವಾಗಿ ನಿರ್ಮಾಣಗೊಂಡಿವೆ ಎಂಬ ಕಾರಣ ನೀಡಿ ಬಿಎಂಸಿ ನೊಟೀಸ್ ಜಾರಿಗೊಳಿಸಿದೆ. 

ಬಿಎಂಸಿಯ ಪ್ರಕಾರ ಪಾಲಿ ಹಿಲ್ ನಲ್ಲಿದ್ದ ಕಂಗನಾ ಅವರ ಕಚೇರಿಯಲ್ಲಿನ ಅಕ್ರಮ ನಿರ್ಮಾಣಕ್ಕಿಂತಲೂ ಖರ್ ನಲ್ಲಿರುವ ಅವರ ನಿವಾಸದಲ್ಲಿ ಅಕ್ರಮ ಕಟ್ಟಡ ನಿರ್ಮಾಣದ ಪ್ರಮಾಣ ಹೆಚ್ಚಾಗಿದೆ ಎಂದು ಬಿಎಂಸಿ ಹೇಳಿದೆ. ಖರ್ ವೆಸ್ಟ್ ನಲ್ಲಿರುವ 5 ನೇ ಅಂತಸ್ತಿನಲ್ಲಿರುವ ಬಿಲ್ಡಿಂಗ್ ನಲ್ಲಿ ಕಂಗನಾ ನಿವಾಸವಿದೆ. ಸೆ.09 ರಂದು ಕಂಗನಾ ಕಚೇರಿಯನ್ನು ಬಿಎಂಸಿ ತೆರವುಗೊಳಿಸಿತ್ತು. ಆದರೆ ಹೈ ಕೋರ್ಟ್ ಮುಂದಿನ ಕಾರ್ಯಾಚರಣೆಗೆ ತಡೆ ನೀಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.