Kamala Harris

ಕಮಲಾ ಹ್ಯಾರಿಸ್ ತೀವ್ರ ಎಡಪಂಥೀಯ ಮನಸ್ಥಿತಿಯವರು, ಅವರು ಅಮೆರಿಕ ಅಧ್ಯಕ್ಷರಾಗಲು ಅನರ್ಹರು: ಡೊನಾಲ್ಡ್ ಟ್ರಂಪ್
ಈ ವರ್ಷಾಂತ್ಯಕ್ಕೆ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದು ಕಮಲಾ ಹ್ಯಾರಿಸ್ ಅವರು ನಮ್ಮ ಪಕ್ಷದ ಅಭ್ಯರ್ಥಿ ಎಂದು ಜೋ ಬೈಡನ್ ಅವರು ಘೋಷಣೆ ಮಾಡಿದ ನಂತರ 78 ವರ್ಷದ ಡೊನಾಲ್ಡ್ ಟ್ರಂಪ್ ಕಮಲಾ ಹ್ಯಾರಿಸ್ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.

'ಯುವ ಧ್ವನಿ'ಗಳಿಗೆ ಅವಕಾಶ ನೀಡುವ ಸಮಯವಿದು, ದೇಶ ಒಗ್ಗೂಡಿಸಲು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ: ಜೋ ಬೈಡನ್
ಈ ವರ್ಷಾಂತ್ಯಕ್ಕೆ ನಡೆಯಲಿರುವ ಅಧ್ಯಕ್ಷ ಚುನಾವಣೆಯಿಂದ ಜೋ ಬೈಡನ್ ಹಿಂದೆ ಸರಿದಿರುವುದರಿಂದ ಉಪಾಧ್ಯಕ್ಷೆ 59 ವರ್ಷದ ಕಮಲಾ ಹ್ಯಾರಿಸ್ ಅವರು ಹೊಸ ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿಯಾಗಲಿದ್ದಾರೆ.

ಕಮಲಾ ಹ್ಯಾರಿಸ್ ಅಮೆರಿಕ ಅಧ್ಯಕ್ಷರಾಗಲು ಅರ್ಹರು: ಜೋ ಬೈಡನ್
81 ವರ್ಷ ವರ್ಷದ ಜೋ ಬೈಡನ್ ಅವರ ದೈಹಿಕ ಹಾಗೂ ಮಾನಸಿಕ ಸ್ಥಿರತೆ ಕುರಿತಾಗಿ ಹಲವು ಪ್ರಶ್ನೆಗಳು ಎದ್ದಿರುವ ಹೊತ್ತಲ್ಲೇ ಅಮೆರಿಕ ಅಧ್ಯಕ್ಷರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಇಸ್ರೇಲ್ ಅಥವಾ ಗಾಜಾಕ್ಕೆ ಅಮೆರಿಕ ಪಡೆ ಕಳುಹಿಸುವುದಿಲ್ಲ: ಕಮಲಾ ಹ್ಯಾರಿಸ್
ಸಂಘರ್ಷದ ಮಧ್ಯೆ ಇಸ್ರೇಲ್ ಅಥವಾ ಗಾಜಾಕ್ಕೆ ಸೇನಾಪಡೆ ಕಳುಹಿಸುವ ಯಾವುದೇ ಉದ್ದೇಶವಿಲ್ಲ ಎಂದು ಅಮೆರಿಕ ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಹೇಳಿದ್ದಾರೆ.

ಅಧ್ಯಕ್ಷ ಬೈಡನ್ ಗೆ ಅನಾರೋಗ್ಯ: ಅಮೆರಿಕ ಇತಿಹಾಸದಲ್ಲಿ ಮೊದಲ ಬಾರಿ ಅಲ್ಪ ಹೊತ್ತಿಗೆ ಅಧ್ಯಕ್ಷ ಹುದ್ದೆ ಅಲಂಕರಿಸುತ್ತಿರುವ ಮಹಿಳೆ ಕಮಲಾ ಹ್ಯಾರಿಸ್!
ಅನಾರೋಗ್ಯ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಜೊ ಬೈಡನ್ ಅವರು ಶ್ವೇತಭವನ ವೈದ್ಯರಿಂದ ಸಮಗ್ರವಾಗಿ ವಾಡಿಕೆಯ ತಪಾಸಣೆಗೆ ಒಳಗಾದರು. ಈ ಸಮಯದಲ್ಲಿ ಅವರ ಅಧಿಕಾರವನ್ನು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ವರ್ಗಾಯಿಸಲಾಯಿತು.

ಬೈಡನ್- ಕಮಲಾ ಹ್ಯಾರಿಸ್ ಭಿನ್ನಾಭಿಪ್ರಾಯ? ಹುದ್ದೆ ತ್ಯಜಿಸಲಿರುವ ಸಂವಹನ ನಿರ್ದೇಶಕಿ!
ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಸಂವಹನ ನಿರ್ದೇಶಕಿ ಆಶೆಲಿ ಎಟಿಯೆನ್ ಅವರು ಡಿಸೆಂಬರ್‌ನಲ್ಲಿ ಬೈಡನ್ ಆಡಳಿತದಲ್ಲಿನ ತಮ್ಮ ಹುದ್ದೆ ತ್ಯಜಿಸಲಿದ್ದಾರೆ ಎಂದು ಶ್ವೇತಭವನದ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಸಿಎನ್‌ಎನ್ ವರದಿ ಮಾಡಿದೆ.

ಶ್ವೇತ ಭವನದಲ್ಲಿ ದೀಪ ಬೆಳಗುವ ಮೂಲಕ ದೀಪಾವಳಿ ಶುಭಾಶಯ ಕೋರಿದ ಅಮೆರಿಕ ಅಧ್ಯಕ್ಷ ಜೋ ಬೈಡನ್
ಕೊರೊನಾದಿಂದ ನಲುಗಿರುವ ಜಗತ್ತಿಗೆ ಈ ದೀಪಾವಳಿ ದುಷ್ಟಶಕ್ತಿಗಳ ವಿರುದ್ಧದ ಹೋರಾಟಕ್ಕೆ ಶಕ್ತಿತುಂಬಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಮೆರಿಕ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ: ಚಿತ್ರಗುಚ್ಛ
ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ ಅಧ್ಯಕ್ಷ ಜೊ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದ ಹಲವು ಚಿತ್ರಗಳು ಇಲ್ಲಿವೆ.

ಭಯೋತ್ಪಾದಕರಿಗೆ ಪಾಕಿಸ್ತಾನ ಆಶ್ರಯ, ಬೆಂಬಲ; ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು: ಪ್ರಧಾನಿ ಮೋದಿ ಜೊತೆ ಕಮಲಾ ಹ್ಯಾರಿಸ್ ಉಲ್ಲೇಖ
ಭಯೋತ್ಪಾದನೆಯಲ್ಲಿ ಪಾಕಿಸ್ತಾನದ ಪಾತ್ರವನ್ನು ನೇರವಾಗಿ, ಸ್ವಯಂಪ್ರೇರಿತವಾಗಿ ಪ್ರಸ್ತಾಪಿಸಿದ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಭಯೋತ್ಪಾದನೆಗೆ ಪಾಕಿಸ್ತಾನ ನೀಡುತ್ತಿರುವ ಬೆಂಬಲ ಬಗ್ಗೆ ಸೂಕ್ಷ್ಮವಾಗಿ ಪರಿಸ್ಥಿತಿ ಮತ್ತು ಆಗುಹೋಗುಗಳನ್ನು ಗಮನಿಸಬೇಕು ಎಂದು ಪ್ರಧಾನಿ ಮೋದಿ ಭೇಟಿ ಸಂದರ್ಭದಲ್ಲಿ ಆದ ಮಾತುಕತೆ ವೇಳೆ ಹೇಳಿದ್ದಾರೆ.

