January

ಜನವರಿಯಲ್ಲಿ ಮುಖ್ಯ ಕಾರ್ಯದರ್ಶಿಗಳ 2ನೇ ರಾಷ್ಟ್ರೀಯ ಸಮಾವೇಶ; ಪ್ರಧಾನಿ ಮೋದಿ ಅಧ್ಯಕ್ಷತೆ
2023-24ರ ಕೇಂದ್ರ ಬಜೆಟ್‌ಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ತಿಂಗಳು ರಾಷ್ಟ್ರ ರಾಜಧಾನಿಯಲ್ಲಿ ಎಲ್ಲಾ ರಾಜ್ಯ ಸರ್ಕಾರಗಳ 'ಮುಖ್ಯ ಕಾರ್ಯದರ್ಶಿಗಳ ಎರಡನೇ ರಾಷ್ಟ್ರೀಯ ಸಮಾವೇಶ'ದ ಅಧ್ಯಕ್ಷತೆ...

ಜನವರಿ 1 ರಿಂದ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಕುಚಲಕ್ಕಿ ವಿತರಣೆ: ಕೋಟ ಶ್ರೀನಿವಾಸ ಪೂಜಾರಿ
ರಾಜ್ಯ ಸರ್ಕಾರವು ಜನವರಿ 1ರಿಂದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಪಡಿತರ ಚೀಟಿದಾರರಿಗೆ ಕುಚಲಕ್ಕಿಯನ್ನು ನೀಡಲಿದೆ.

ಜ.1ರಿಂದ ಶಾಲೆಗಳು ಆರಂಭ: ವಿದ್ಯಾರ್ಥಿಗಳಿಗಿದು ನಿರ್ಣಾಯಕ ಸಮಯ- ಸಚಿವ ಸುರೇಶ್ ಕುಮಾರ್
ಜನವರಿ 1 ರಿಂದ ಶಾಲೆಗಳು ಪುನರಾರಂಭಗೊಳ್ಳುತ್ತಿದ್ದು, ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರಿಗಿದು ನಿರ್ಣಾಯಕ ಸಮಯವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಹೇಳಿದ್ದಾರೆ.

ಬಾಕಿ ಉಳಿದ ಮಸೂದೆಗಳ ಅಂಗೀಕಾರಕ್ಕೆ ಜನವರಿ ಮಧ್ಯಭಾಗದಲ್ಲಿ ವಿಧಾನಸಭೆ ಅಧಿವೇಶನ!
ಜನವರಿ ಮಧ್ಯಭಾಗದಲ್ಲಿ ವಿಧಾನಸಭೆ ಅಧಿವೇಶನ ನಡೆಸುವ ಸಾಧ್ಯತೆಯಿದ್ದು, ಸೋಮವಾರ ನಡೆದ ಸಂಪುಟ ಸಭೆಯಲ್ಲಿ ಈ ಸಂಬಂಧ ಚರ್ಚೆ ನಡೆದಿದೆ.

ಜನವರಿಯಲ್ಲಿ ಭಾರತಕ್ಕೆ ಬರಲಿವೆ ಇನ್ನೂ 3 ರಫೇಲ್ ಯುದ್ಧ ವಿಮಾನಗಳು
ಫ್ರಾನ್ಸ್ ನಿಂದ ಮತ್ತೆ ಮೂರು ರಫೇಲ್ ಯುದ್ಧ ವಿಮಾನಗಳು ಜನವರಿ ತಿಂಗಳಿನಲ್ಲಿ ಭಾರತಕ್ಕೆ ಆಗಮಿಸಲಿವೆ. ಈ ಮೂಲಕ ವಾಯುಪಡೆಯಲ್ಲಿ ರಫೇಲ್ ಸಂಖ್ಯೆ 11ಕ್ಕೆ ಏರಿಕೆಯಾಗಲಿದೆ. ಇದರಿಂದಾಗಿ ಲಡಾಖ್ ನಲ್ಲಿ ಚೀನಾವನ್ನು ಎದುರಿಸಲು ಭಾರತಕ್ಕೆ ಮತ್ತಷ್ಟು ಬಲ ದೊರೆಯಲಿದೆ.

ಜನವರಿಯಲ್ಲಿ ಹುಬ್ಬಳ್ಳಿಯಿಂದ ದೇಶದ ವಿವಿಧೆಡೆಗೆ ವಿಮಾನ ಸೇವೆ ಪುನರ್ ಆರಂಭ!
ಹೊಸ ವರ್ಷದಿಂದ ಹುಬ್ಬಳ್ಳಿಯಿಂದ ಅಹಮದಾಬಾದ್, ತಿರುಪತಿ, ಬೆಂಗಳೂರು, ಕೊಚ್ಚಿ, ಗೋವಾ, ಹೈದರಾಬಾದ್ ಮತ್ತು ನವದೆಹಲಿಗೆ ವಿಮಾನ ಸೇವೆ ಪ್ರಾರಂಭವಾಗಲಿದೆ.

ಜನವರಿಯಿಂದ ಶಾಲೆಗಳು ಆರಂಭವಾದರೂ ಹಿಂದಿನಂತೆ ಮಕ್ಕಳಿಗಿಲ್ಲ ಬಿಸಿಯೂಟ!
ರಾಜ್ಯದಲ್ಲಿ ಕೊರೋನಾ ಅಬ್ಬರ ಇಳಿಕೆಯಾಗುತ್ತಿದ್ದು ಈ ನಡುವಲ್ಲೇ ಜನವರಿ 1 ರಿಂದ ಶಾಲೆಗಳನ್ನು ಪುನರಾರಂಭಿಸಲು ಸರ್ಕಾರ ಸಿದ್ಧತೆಗಳನ್ನು ನಡೆಸುತ್ತಿದೆ. ಆದರೆ, ಶಾಲೆಗಳು ಪುನರಾರಂಭವಾದರೂ ಹಿಂದಿನಂತೆಯೇ ಮಕ್ಕಳಿಗೆ ಬಿಸಿಯೂಟ ಇರುವುದಿಲ್ಲ ಎಂದು ಹೇಳಲಾಗುತ್ತಿದೆ.

ಜನವರಿಯಲ್ಲಿ ಸರ್ಕಾರದ ಸಪ್ತಪದಿ ಯೋಜನೆ ಜಾರಿ
ರಾಜ್ಯ ಸರ್ಕಾರ ಮುಜರಾಯಿ ಇಲಾಖೆ ವತಿಯಿಂದ ನಡೆಸಲು ತೀರ್ಮಾನಿಸಿರುವ ಸಪ್ತಪದಿ ಯೋಜನೆಯನ್ನು ಹೊಸ ವರ್ಷದಲ್ಲಿ ಆರಂಭಿಸಲು ನಿರ್ಧರಿಸಲಾಗಿದೆ.

ಹೊಸ ವರ್ಷಕ್ಕೆ ದುನಿಯಾ ವಿಜಯ್ ನಿರ್ದೇಶನದ ಸಲಗ ಟೈಟಲ್ ಟ್ರ್ಯಾಕ್ ಬಿಡುಗಡೆ
ಕೆಪಿ ಶ್ರೀಕಾಂತ್ ನಿರ್ಮಿಸುತ್ತಿರುವ ಸಲಗ ಸಿನಿಮಾ ಟೈಟಲ್ ಸಾಂಗ್ ಗೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ಮಲೇಶಿಯಾದ ಹಿಪ್ ಹಾಪ್ ರ್ಯಾಪರ್ ಯೋಗಿ.ಬಿ ಹಿನ್ನೆಲೆ ಗಾಯನ ನೀಡಿದ್ದಾರೆ.

