Jammu

ಜಮ್ಮು ಐಎಎಫ್ ಕೇಂದ್ರದ ಬಳಿ ಮತ್ತೆ ಡ್ರೋಣ್ ಹಾರಾಟ ಪತ್ತೆ: ಹೆಚ್ಚಿದ ಭದ್ರತೆ
ಜಮ್ಮುವಿನ ವಾಯುನೆಲೆ ಕೇಂದ್ರದಲ್ಲಿ ಮತ್ತೆ ಡ್ರೋಣ್ ಹಾರಾಟ ಪತ್ತೆಯಾಗಿದ್ದು, ಅಲರ್ಟ್ ಆಗಿದ್ದ ಬಿಎಸ್‌ಎಫ್ ಯೋಧರ ಕಣ್ಣಿಗೆ ಡ್ರೋನ್ ಬಿದ್ದೊಡನೆ ಗುಂಡು ಹಾರಿಸಿದ್ದಾರೆ. ನಂತರ ಡ್ರೋಣ್ ವಾಪಸಾಗಿದೆ ಎಂದು ತಿಳಿದುಬಂದಿದೆ.

ಜಮ್ಮು-ಕಾಶ್ಮೀರ: ಅಂತರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಡ್ರೋಣ್ ಹಾರಾಟ, ಸೇನಾಪಡೆಯಿಂದ ಗುಂಡಿನ ದಾಳಿ
ಜಮ್ಮು-ಕಾಶ್ಮೀರ ಅರ್ನಿಯಾ ಸೆಕ್ಟರ್‌ನ ಅಂತರರಾಷ್ಟ್ರೀಯ ಗಡಿ ಬಳಿ ಡ್ರೋಣ್ ಪತ್ತೆಯಾಗಿದೆ. ಮಂಗಳವಾರ ತಡರಾತ್ರಿ ಪತ್ತೆಯಾದ ಡ್ರೋಣ್ ಮೇಲೆ ಬಿಎಸ್ಎಫ್ ಪಡೆಗಳೂ ಗುಂಡಿನ ದಾಳಿ ನಡೆಸಿದ್ದಾರೆಂದು ತಿಳಿದುಬಂದಿದೆ.

ಜಮ್ಮುವಿನ ಅಂತರಾಷ್ಟ್ರೀಯ ಗಡಿಯಲ್ಲಿ ಡ್ರೋಣ್ ಪತ್ತೆ: ಭಾರತೀಯ ಸೇನಾಪಡೆಯಿಂದ ಗುಂಡಿನ ದಾಳಿ!
ಐಎಎಫ್ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ನಡೆದ ಬಾಂಬ್ ದಾಳಿ ಬೆನ್ನಲ್ಲೇ ಜಮ್ಮುವಿನಲ್ಲಿ ಪದೇ ಪದೇ ಡ್ರೋಣ್ ಹಾರಾಟಗಳು ಪತ್ತೆಯಾಗುತ್ತಲೇ ಇವೆ. ಶುಕ್ರವಾರ ಕೂಡ ಜಮ್ಮುವಿನ ಅಂತರಾಷ್ಟ್ರೀಯ ಗಡಿಯಲ್ಲಿ ಡ್ರೋಣ್ ಪತ್ತೆಯಾಗಿದ್ದು, ಭಾರತೀಯ ಸೇನಾಪಡೆ ಗುಂಡಿನ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.

ವಾಯುನೆಲೆಯಲ್ಲಿ ಡ್ರೋಣ್ ಸ್ಫೋಟ ಪ್ರಕರಣ: ಎನ್‌ಎಸ್‌ಜಿಯ ವಿಶೇಷ ಬಾಂಬ್ ತಪಾಸಣಾ ತಂಡದಿಂದ ತನಿಖೆ ಆರಂಭ
ಭಾರತೀಯ ವಾಯುಪಡೆ ಕೇಂದ್ರದ ಮೇಲಿನ ಡ್ರೋಣ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ರಾಷ್ಟ್ರೀಯ ಭದ್ರತಾ ಸಿಬ್ಬಂದಿಯ (ಎನ್ ಎಸ್ ಜಿ) ವಿಶೇಷ ಬಾಂಬ್ ತಪಾಸಣಾ ತಂಡ ತನಿಖೆ ಆರಂಭಿಸಿದೆ ಎಂದು ಮೂಲಗಳಿಂದ ಮಂಗಳವಾರ ತಿಳಿದುಬಂದಿದೆ.

ಜಮ್ಮುವಿನಲ್ಲಿ ಮುಂದುವರೆದ ಉಗ್ರರ ಸಂಚು: ಮತ್ತೆ ಡ್ರೋಣ್ ಹಾರಾಟ ಪತ್ತೆ!
ಜಮ್ಮು-ಕಾಶ್ಮೀರದಲ್ಲಿ ದಾಳಿ ನಡೆಸಲು ಉಗ್ರರು ಸತತ ಯತ್ನಗಳನ್ನು ನಡೆಸುತ್ತಲೇ ಇದ್ದಾರೆ. ಸೋಮವಾರ ತಡರಾತ್ರಿ ಮತ್ತೆ ಜಮ್ಮುವಿನ ರತ್ನುಚಕ್-ಕಾಲೂಚಕ್ ಸೇನಾ ಕೇಂದ್ರದ ಡ್ರೋಣ್ ಹಾರಾಟ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.

ಉಗ್ರರ ಮತ್ತೊಂದು ಸಂಚು ವಿಫಲ: ಸೇನಾ ಕೇಂದ್ರದ ಬಳಿ ಡ್ರೋಣ್ ಪತ್ತೆ, ಭದ್ರತಾ ಪಡೆಗಳಿಂದ ಗುಂಡಿನ ದಾಳಿ
ಮತ್ತೊಮ್ಮೆ ಡ್ರೋಣ್ ದಾಳಿಗೆ ಮುಂದಾಗಿದ್ದ ಉಗ್ರರ ಸಂಚನ್ನು ಭಾರತೀಯ ಸೇನಾಪಡೆ ಸೋಮವಾರ ವಿಫಲಗೊಳ್ಳುವಂತೆ ಮಾಡಿದೆ. ಸೇನಾ ಕೇಂದ್ರದ ಬಳಿ ಪತ್ತೆಯಾದ ಡ್ರೋಣ್'ವೊಂದರ ಮೇಲೆ ಭಾರತೀಯ ಸೇನಾಪಡೆ ಗುಂಡಿನ ದಾಳಿ ನಡೆಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಡ್ರೋಣ್ ದಾಳಿ, ಪೊಲೀಸ್ ಅಧಿಕಾರಿ ಹತ್ಯೆ ಪ್ರಕರಣ: ಪಾಕ್ ವಿರುದ್ಧ ಜಮ್ಮುವಿನಲ್ಲಿ ಭುಗಿಲೆದ್ದ ಪ್ರತಿಭಟನೆ
ಜಮ್ಮುವಿನ ವಿಮಾನ ನಿಲ್ದಾಣದಲ್ಲಿ ನಡೆದ ಡ್ರೋಣ್ ದಾಳಿ ಹಾಗೂ ಪೊಲೀಸ್ ಅಧಿಕಾರಿಯನ್ನು ಉಗ್ರರು ಹತ್ಯೆ ಮಾಡಿದ ಎರಡೂ ಘಟನೆ ಇದೀಗ ಅಲ್ಲಿನ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.

ಜಮ್ಮು-ಕಾಶ್ಮೀರ: ನರ್ವಾಲ್ ಪ್ರದೇಶದಿಂದ ಉಗ್ರನ ಬಂಧನ, 5 ಕೆಜಿ ಐಇಡಿ ವಶ
ಕಣಿವೆ ಪ್ರದೇಶ ಕಾಶ್ಮೀರದಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ಗುಂಡಿನ ಮೊರೆತ ಕೇಳಿಬಂದಿದೆ. ಜಮ್ಮು-ಕಾಶ್ಮೀರದ ನರ್ವಾಲ್ ಪ್ರದೇಶದಲ್ಲಿ ಓರ್ವ ಉಗ್ರನನ್ನು ಬಂಧಿಸಿರುವ ಭದ್ರತಾ ಪಡೆ ಪೊಲೀಸರು 5 ಕೆಜಿ ಐಇಡಿಯನ್ನು ವಶಪಡಿಸಿಕೊಂಡಿದ್ದಾರೆ.

ಜಮ್ಮು: ವೈಷ್ಣೋದೇವಿ ದೇಗುಲ ಕಾಂಪ್ಲೆಕ್ಸ್ ನಲ್ಲಿ ಅಗ್ನಿ ಅವಘಡ, ನಗದು-ದಾಖಲೆ ಭಸ್ಮ
ಜಮ್ಮುವಿನ ಪ್ರಸಿದ್ಧ ಯಾತ್ರಾತಾಣ ವೈಷ್ಣೋದೇವಿ ದೇವಾಲಯದ ಸಂಕೀರ್ಣದೊಳಗಿನ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭಸಿದ್ದು, ಸಾಕಷ್ಟು ಪ್ರಮಾಣದ ನಗದು ಮತ್ತು ದಾಖಲೆಗಳು ಬೆಂಕಿಗಾಹುತಿಯಾಗಿದೆ ಎಂದು ತಿಳಿದುಬಂದಿದೆ.

