Israel vs Hamas

ಗಾಜಾಪಟ್ಟಿಗೆ ಬೆಂಬಲ: ಇಸ್ರೇಲ್ ಪಠ್ಯಪುಸ್ತಕಗಳಿಂದ ಗ್ರೇಟಾ ಥನ್ಬರ್ಗ್ ಪಠ್ಯಕ್ಕೆ ಗೇಟ್ ಪಾಸ್!
ಹಮಾಸ್ ಉಗ್ರರು ಮತ್ತು ಇಸ್ರೇಲ್ ನಡುವಿನ ಸಂಘರ್ಷ ತಾರಕಕ್ಕೇರಿರುವಂತೆಯೇ ಇತ್ತ ಗಾಜಾಪಟ್ಟಿಗೆ ಬೆಂಬಲ ಘೋಷಣೆ ಮಾಡಿದ್ದ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ನಡೆಯನ್ನು ಖಂಡಿಸಿ ಇಸ್ರೇಲ್ ಶಿಕ್ಷಣ ಸಚಿವಾಲಯ ಆಕೆಯ ಕುರಿತ ಪಠ್ಯವನ್ನು ತನ್ನ ಪಠ್ಯಪುಸ್ತಕಗಳಿಂದ ಕೈಬಿಟ್ಟಿದೆ.

ಹಮಾಸ್-ಇಸ್ರೇಲ್ ಯುದ್ಧದ ದಾಳಿ ಭೀತಿ: ದಕ್ಷಿಣ ಇಸ್ರೇಲ್‌ನಿಂದ ಜೆರುಸಲೆಮ್‌ಗೆ ಪ್ಯಾಲೆಸ್ಟೀನಿಯನ್ನರ ಸ್ಥಳಾಂತರ
ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದ ನಡುವೆಯೇ ಇತ್ತ ದಕ್ಷಿಣ ಇಸ್ರೇಲ್‌ನಲ್ಲಿರುವ ಪ್ಯಾಲೆಸ್ಟೀನಿ ಜನರು ತಮ್ಮ ಮನೆಗಳನ್ನು ತೊರೆದು ಜೆರುಸಲೇಂಗೆ ಸ್ಥಳಾಂತರಗೊಳ್ಳುತ್ತಿದ್ದಾರೆ.

ಇಸ್ರೇಲ್ ವೈಮಾನಿಕ ದಾಳಿ ತೀವ್ರ, ಅಸ್ಥಿಪಂಜರದಂತಾದ ಗಾಜಾ
ಹಮಾಸ್ ಉಗ್ರ ದಾಳಿ ಬಳಿಕ ಗಾಜಾಪಟ್ಟಿಯಲ್ಲಿ ಇಸ್ರೇಲ್ ಸೇನೆ ನಡೆಸುತ್ತಿರುವ ವೈಮಾನಿಕ ದಾಳಿ ತೀವ್ರವಾಗಿದ್ದು, ಜನಸಮೂಹ ಮತ್ತು ಬೃಹತ್ ಕಟ್ಟಡಗಳಿಂದ ತುಂಬಿ ತುಳುಕುತ್ತಿದ್ದ ಗಾಜಾ ನಗರ ಇದೀಗ ಅಸ್ಥಿಪಂಜರದಂತಾಗಿದೆ.

ಹೆಚ್ಚಿನ ಒತ್ತೆಯಾಳುಗಳು ಜೀವಂತ; ಯಾವುದೇ ಕ್ಷಣದಲ್ಲೂ ಗಾಜಾ ಪ್ರವೇಶಕ್ಕೆ ಸಿದ್ಧ: ಇಸ್ರೇಲ್
ಟೆಲ್ ಅವೀವ್: ಹಮಾಸ್ ಉಗ್ರರು ಅಪಹರಿಸಿರುವ ಹೆಚ್ಚಿನ ಒತ್ತೆಯಾಳುಗಳು ಜೀವಂತವಾಗಿದ್ದು, ಯಾವುದೇ ಕ್ಷಣದಲ್ಲೂ ಗಾಜಾ ಪ್ರವೇಶಕ್ಕೆ ತನ್ನ ಸೇನೆ ಸಿದ್ಧ ಎಂದು ಇಸ್ರೇಲ್ ಸೇನೆ ಶುಕ್ರವಾರ ಹೇಳಿದೆ.

ಗಾಜಾ ಯುದ್ಧ: ಇಸ್ರೇಲ್ ಪೊಲೀಸರಿಗೆ ಸಮವಸ್ತ್ರ ಮಾರಾಟ ನಿಲ್ಲಿಸಿದ ಭಾರತೀಯ ಸಂಸ್ಥೆ
ಹಮಾಸ್ ಉಗ್ರರ ದಾಳಿ ಹಿನ್ನಲೆಯಲ್ಲಿ ಗಾಜಾ ಪಟ್ಟಿಯಲ್ಲಿ ಸೇನಾದಾಳಿ ನಡೆಸುತ್ತಿರುವ ಇಸ್ರೇಲ್ ನಡೆಯನ್ನು ಖಂಡಿಸಿ ಭಾರತ ಮೂಲದ ಬಟ್ಟೆತಯಾರಿಕಾ ಸಂಸ್ಥೆಯೊಂದು ಇಸ್ರೇಲ್ ಪೊಲೀಸರಿಗೆ ಸಮವಸ್ತ್ರ ಮಾರಾಟವನ್ನೇ ನಿಲ್ಲಿಸಿದೆ.

ನಿರಾಶ್ರಿತರ ಶಿಬಿರದಲ್ಲಿ ಇಸ್ರೇಲ್ ಕಾರ್ಯಾಚರಣೆ: ಭಾರೀ ಸಂಘರ್ಷ, ಶಸ್ತ್ರಸಜ್ಜಿತ ಹಮಾಸ್ ಉಗ್ರರಿಂದ ಗುಂಡಿನ ಚಕಮಕಿ
ಗಾಜಾಪಟ್ಟಿ ನಿರಾಶ್ರಿತರ ಶಿಬಿರದಲ್ಲಿ ಇಸ್ರೇಲ್ ಸೇನೆ ಕಾರ್ಯಾಚರಣೆಯ ಸಂದರ್ಭದಲ್ಲಿ ಭಾರೀ ಸಂಘರ್ಷ ಸಂಭವಿಸಿದ್ದು, ಶಸ್ತ್ರಸಜ್ಜಿತ ಹಮಾಸ್ ಉಗ್ರರು ಇಸ್ರೇಲ್ ಸೇನೆಯ ವಿರುದ್ಧ ಗುಂಡಿನ ಸಂಘರ್ಷ ನಡೆಸಿದ್ದಾರೆ.

ಇಸ್ರೇಲ್ ಮೇಲೆ ಹಮಾಸ್ ದಾಳಿ, ನಾಗರಿಕರ ವಿರುದ್ಧದ ಎಲ್ಲಾ ಹಿಂಸಾಚಾರ ಖಂಡಿಸುವ ವಿಶ್ವಸಂಸ್ಥೆ ನಿರ್ಣಯಕ್ಕೆ ಅಮೆರಿಕ ವೀಟೋ
ಇಸ್ರೇಲ್ ಮೇಲಿನ ಹಮಾಸ್ ಉಗ್ರ ಸಂಘಟನೆಯ ದಾಳಿ ಮತ್ತು ನಾಗರಿಕರ ವಿರುದ್ಧದ ಎಲ್ಲಾ ಹಿಂಸಾಚಾರ ಖಂಡಿಸುವ ವಿಶ್ವಸಂಸ್ಥೆ ನಿರ್ಣಯಕ್ಕೆ ಅಮೆರಿಕ ತನ್ನ ವೀಟೋ ಅಧಿಕಾರ ಪ್ರಯೋಗಿಸಿದೆ.

ಗಾಜಾ ನಾಗರಿಕರನ್ನು ಇಸ್ರೇಲ್‌ಗೆ ಸ್ಥಳಾಂತರಿಸಬಹುದು: ಈಜಿಪ್ಟ್
ಇಸ್ರೇಲ್-ಹಮಾಸ್ ಉಗ್ರರ ನಡುವಿನ ಯುದ್ಧದಲ್ಲಿ ಸಂಕಷ್ಟಕ್ಕೀಡಾಗಿರುವ ಗಾಜಾ ನಾಗರೀಕರನ್ನು ಇಸ್ರೇಲ್ ಗೆ ಸ್ಥಳಾಂತರಿಸಬಹುದು ಎಂದು ಈಜಿಪ್ಟ್ ಹೇಳಿದೆ.

ಇಸ್ರೇಲ್-ಲೆಬನಾನ್ ಗಡಿಯಲ್ಲಿ 900 ಭಾರತೀಯ ಸೈನಿಕರ ನಿಯೋಜನೆ!; ಗಾಜಾ ಆಸ್ಪತ್ರೆ ಮೇಲೆ ವೈಮಾನಿಕ ದಾಳಿ, 200 ಸಾವು
ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷ ತಾರಕಕ್ಕೇರಿರುವಂತೆಯೇ ಇತ್ತ ಇಸ್ರೇಲ್ ಮತ್ತು ಲೆಬನಾನ್ ಗಡಿಯಲ್ಲಿ 900 ಭಾರತೀಯ ಸೈನಿಕರನ್ನು ನಿಯೋಜನೆ ಮಾಡಲಾಗಿದೆ.

