Islamabad

ಇಸ್ಲಾಮಾಬಾದ್‌ನಲ್ಲಿ ಕೋರ್ಟ್ ವಿಚಾರಣೆ ವೇಳೆ ಲಾಹೋರ್ ನಿವಾಸಕ್ಕೆ ನುಗ್ಗಿದ ಪೊಲೀಸರು: ಇಮ್ರಾನ್ ಖಾನ್ ಅಳಲು
ಭ್ರಷ್ಟಾಚಾರ ಪ್ರಕರಣದ ವಿಚಾರಣೆಗೆ ಹಾಜರಾಗಲು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಇಸ್ಲಾಮಾಬಾದ್‌ನಲ್ಲಿ ಇರುವಾಗಲೇ ಲಾಹೋರ್ ನಲ್ಲಿರುವ ಅವರ ನಿವಾಸದ ಮೇಲೆ 10,000ಕ್ಕೂ ಹೆಚ್ಚು ಪೊಲೀಸರು ದಾಳಿ ಮಾಡಿದ್ದು, ಡಜನ್ ಗಟ್ಟಲೇ ಅವರ ಪಕ್ಷದ ಕಾರ್ಯಕರ್ತರನ್ನು ಬಂಧಿಸಿದ್ದಾರೆ.

ತೋಷಖಾನಾ ಪ್ರಕರಣ: ವಿಚಾರಣೆಗೆ ತೆರಳುತ್ತಿದ್ದಾಗ ಪಲ್ಟಿ ಹೊಡೆದ ಇಮ್ರಾನ್ ಖಾನ್ ಬೆಂಗಾವಲು ವಾಹನ!
ತೋಷಖಾನಾ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರು ಇಸ್ಲಾಮಾಬಾದ್‌ಗೆ ತೆರಳುತ್ತಿದ್ದ ವೇಳೆ ಅವರ ಬೆಂಗಾವಲು ವಾಹನ ಪಲ್ಟಿ ಹೊಡೆದ ಘಟನೆ ಶನಿವಾರ ನಡೆದಿದೆ.

ಪಾಕಿಸ್ತಾನಕ್ಕೆ ತಾಲಿಬಾನ್ ಸವಾಲು: ಶೀಘ್ರದಲ್ಲೇ ಪಾಕ್ ನಲ್ಲಿ ಹೊಸ ಕ್ಯಾಬಿನೆಟ್‌ನೊಂದಿಗೆ ಸರ್ಕಾರ ರಚನೆ!!
ಪಾಕಿಸ್ತಾನ ಸರ್ಕಾರ ತಾಲಿಬಾನ್ ಹೊಸ ಸವಾಲೆಸೆದಿದ್ದು, ಶೀಘ್ರದಲ್ಲೇ ಪಾಕ್ ನಲ್ಲಿ ಹೊಸ ಕ್ಯಾಬಿನೆಟ್‌ನೊಂದಿಗೆ ಸರ್ಕಾರ ರಚಿಸುವುದಾಗಿ ತೆಹ್ರೀಕ್-ಎ-ತಾಲಿಬಾನ್ (TTP) ಸಂಘಟನೆ ಘೋಷಣೆ ಮಾಡಿದೆ.

ಪಾಕಿಸ್ತಾನ “ಮಾವಿನ ಹಣ್ಣು" ರಾಯಭಾರಕ್ಕೆ ಅಮೆರಿಕಾ, ಚೀನಾ ಕಹಿ ಪ್ರತಿಕ್ರಿಯೆ..!
ಪಾಕಿಸ್ತಾನ ಸ್ನೇಹಪೂರ್ವಕವಾಗಿ ಕಳುಹಿಸಿದ್ದ ಮಾವಿನ ಹಣ್ಣುಗಳನ್ನು ಅಮೆರಿಕಾ, ಚೀನಾ ಮತ್ತಿತರ ದೇಶಗಳು ತಿರಸ್ಕರಿಸಿವೆ. ಕೊರೊನಾ ಕ್ವಾರಂಟೈನ್ ನಿಬಂಧನೆಗಳ ನೆಪವೊಡ್ಡಿ ಈ ಹಣ್ಣುಗಳನ್ನು ಸ್ವೀಕರಿಸಲು ಈ ದೇಶಗಳು ನಿರಾಕರಿಸಿವೆ ಎಂದು ವರದಿಯಾಗಿದೆ.

ತನಗಿಂತ 13 ವರ್ಷ ಚಿಕ್ಕವನ ವರಿಸಿದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮಾಜಿ ಪತ್ನಿ ರೆಹಮ್, ಆತನಿಗಿದು 3ನೇ ಮದುವೆ!
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಮಾಜಿ ಪತ್ನಿ ರೆಹಮ್ ಖಾನ್ ಶುಕ್ರವಾರ ಅಮೆರಿಕದಲ್ಲಿ ನಡೆದ ಸಮಾರಂಭದಲ್ಲಿ ಮಾಡೆಲ್ ಮತ್ತು ನಟ ಮಿರ್ಜಾ ಬಿಲಾಲ್ ಬೇಗ್ ಅವರನ್ನು ವಿವಾಹವಾದರು.

'ಟಾರ್ಗೆಟ್ ಶುಕ್ರವಾರ' ಇಸ್ಲಾಮಾಬಾದ್‌ನಲ್ಲಿ ಕಾರ್ ಬಾಂಬ್ ಸ್ಫೋಟದಲ್ಲಿ ಇಬ್ಬರು ಶಂಕಿತ ಉಗ್ರರು, ಓರ್ವ ಪೊಲೀಸ್ ಸಾವು
ಶುಕ್ರವಾರ ಬಂತೆಂದರೆ ಪಾಕಿಸ್ತಾನದಲ್ಲಿ ಭಯೋತ್ಪಾದಕ ದಾಳಿಗಳು ನಡೆಯುತ್ತಿದ್ದು ಪಾಕ್ ಕಂಗೆಡುವಂತೆ ಮಾಡಿದೆ. ಇಂದು ಇಸ್ಲಾಮಾಬಾದ್ ನ ವಸತಿ ಪ್ರದೇಶದಲ್ಲಿ ಪ್ರಬಲ ಕಾರ್ ಬಾಂಬ್ ಸ್ಫೋಟ ಸಂಭವಿಸಿದ್ದು ಇಬ್ಬರು ಶಂಕಿತ ಭಯೋತ್ಪಾದಕರು ಮತ್ತು ಒಬ್ಬ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದಾರೆ.

"ಪಶ್ತೂನ್ ಮಹಿಳೆಯರನ್ನು ಲೈಂಗಿಕ ಗುಲಾಮರನ್ನಾಗಿಸಿಕೊಂಡಿರುವ ಪಾಕ್ ಸೇನೆ"!
ಪ್ರಮುಖ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನಿ ಸೈನಿಕರು ಪಶ್ತೂನ್ ಮಹಿಳೆಯರನ್ನು ಲೈಂಗಿಕ ಗುಲಾಮರನ್ನಾಗಿಸಿಕೊಂಡಿದ್ದಾರೆ ಎಂದು ಪ್ರತ್ಯೇಕತಾವಾದಿ ಮುಖಂಡ ಉಮರ್ ದೌದ್ ಖಟ್ಟಕ್ ಗಂಭೀರ ಆರೋಪ ಮಾಡಿದ್ದಾರೆ.

'ನಮ್ಮಲ್ಲಿ ಅಣುಬಾಂಬ್ ಇದೆ ಎಂಬುದನ್ನು ಮರೆಯಬಾರದು'; ಭಾರತಕ್ಕೆ ಪರಮಾಣು ಬಾಂಬ್ ಎಚ್ಚರಿಕೆ ನೀಡಿದ ಪಾಕಿಸ್ತಾನ ಸಚಿವೆ
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಿಸುವ ಭರದಲ್ಲಿ ನಾಲಿಗೆ ಹರಿಬಿಟ್ಟಿರುವ ಪಾಕ್ ಸಚಿನ ಬಿಲಾವಲ್ ಭುಟ್ಟೋ-ಜರ್ದಾರಿ ವಿರುದ್ಧ ಭಾರತದಲ್ಲಿ ವ್ಯಾಪಕ ಆಕ್ರೋಶ ಮತ್ತು ಪ್ರತಿಭಟನೆ ಮುಂದುವರೆದಿರುವಂತೆಯೇ ಇತ್ತ ಮತ್ತೋರ್ವ ಪಾಕ್ ಸಚಿವೆ ಭಾರತಕ್ಕೆ ಅಣುಬಾಂಬ್ ಎಚ್ಚರಿಕೆ ನೀಡಿದ್ದಾರೆ.

ಸುದೀರ್ಘ ಯಾತ್ರೆ ಕೈಬಿಡುವ ವದಂತಿಗಳನ್ನು ತಳ್ಳಿಹಾಕಿದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್
ಬಿಕ್ಕಟ್ಟಿನಲ್ಲಿರುವ ಸರ್ಕಾರದ ಮೇಲೆ ಒತ್ತಡ ಹೇರಿ, ಸಾರ್ವತ್ರಿಕ ಚುನಾವಣೆಗೆ ಒತ್ತಾಯಿಸಲು ಆರಂಭಿಸಿದ್ದ ಸುದೀರ್ಘ ಯಾತ್ರೆಯನ್ನು ಕೈಬಿಡುತ್ತಿದ್ದಾರೆ ಎಂಬ ವದಂತಿಗಳನ್ನು ತಳ್ಳಿಹಾಕಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಅಧಿಕಾರಿಗಳು ಕ್ಷಿಪ್ರ ಚುನಾವಣಾ ದಿನಾಂಕವನ್ನು ಘೋಷಿಸುವವರೆಗೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ಹೇಳಿದ್ದಾರೆ.

