Iran

ಇರಾನ್ ರಾಷ್ಟ್ರ ಮುಂದೆಂದೂ ಪರಮಾಣು ಶಸ್ತ್ರಾಸ್ತ್ರ ಹೊಂದುವುದಿಲ್ಲ: ಡೊನಾಲ್ಡ್ ಟ್ರಂಪ್
ಇರಾನ್ ಹಾಗೂ ಅಮೆರಿಕ ನಡುವಿನ ವೈರತ್ವ ದಿನದಿಂದ ದಿನಕ್ಕೆ ತಾರಕ್ಕೇರಿದ್ದು, ಅಮೆರಿಕಾ ವಿರುದ್ಧ ಪ್ರತಿದಾಳಿ ಮಾಡಲು ಹವಣಿಸುತ್ತಿರುವ ಇರಾನ್ ರಾಷ್ಟ್ರದ ವಿರುದ್ಧ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತೀವ್ರವಾಗಿ ಕಿಡಿಕಾರಿದ್ದಾರೆ.

ಸೊಲೈಮನಿ ಹತ್ಯೆಗೆ ಪ್ರತೀಕಾರ: ಡೊನಾಲ್ಡ್ ಟ್ರಂಪ್ ತಲೆಗೆ 575 ಕೋಟಿ ರೂ. ಬಹುಮಾನ ಘೋಷಿಸಿದ ಇರಾನ್!
ಇರಾನ್ ಜನರಲ್ ಕಮಾಂಡರ್ ಖಾಸಿಮ್ ಸೊಲೈಮನಿ ಹತ್ಯೆಗೆ ಪ್ರತಿಕಾರವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತಲೆ ತೆಗೆಯುವವರಿಗೆ 575 ಕೋಟಿ ರುಪಾಯಿಯನ್ನು ಇರಾನ್ ಸರ್ಕಾರ ಘೋಷಿಸಿದೆ ಎನ್ನಲಾಗಿದೆ.

ಸೇನಾ ದಂಡನಾಯಕ ಖಾಸಿಮ್ ಸುಲೇಮಾನಿ ಪಾರ್ಥಿವ ಶರೀರದೆದುರು ಕಣ್ಣೀರಿಟ್ಟ ಇರಾನ್ ಸರ್ವೋಚ್ಛ ನಾಯಕ!
ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್ ಸೇನಾ ದಂಡನಾಯಕ ಖಾಸಿಮ್ ಸುಲೇಮಾನಿ ಮೃತಪಟ್ಟ ನಂತರ ಇರಾನ್ ಸೇಡು ತೀರಿಸಿಕೊಳ್ಳಲು ಹಪಹಪಿಸುತ್ತಿದೆ. ಈ ನಡುವೆ ಮೃತಪಟ್ಟ ಸುಲೇಮಾನಿ ಪಾರ್ಥಿವ ಶರೀರಕ್ಕೆ ಅಲ್ಲಿನ ನಾಯಕರು ಅಂತಿಮ ನಮನ ಸಲ್ಲಿಸಿದ್ದಾರೆ.

ಅಮೆರಿಕ-ಇರಾನ್ ಸಂಘರ್ಷ; ತೈಲ ಬೆಲೆ ಮತ್ತೆ ಗಗನಕ್ಕೆ
ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿರುವಂತೆಯೇ ಇತ್ತ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆ ಮೇಲೆ ಇದರ ವ್ಯತಿರಿಕ್ತ ಪರಿಣಾಮ ಬೀರಿದ್ದು, ತೈಲ ಬೆಲೆ ಮತ್ತೆ ಗಗನದತ್ತ ಮುಖ ಮಾಡಿವೆ.

ಮಿತ್ರ ದೇಶಗಳ ಸುರಕ್ಷತೆಗೆ ನೆರವು: ಭಾರತಕ್ಕೆ ಅಮೆರಿಕಾ ಭರವಸೆ
ಅಮೆರಿಕಾದ ಜೀವಗಳನ್ನು ಉಳಿಸಲು ಯಾವುದೇ ಕ್ರಮಕ್ಕೂ ಡೋನಾಲ್ಡ್ ಟ್ರಂಪ್ ಆಡಳಿತ ಹಿಂಜರಿಯುವುದಿಲ್ಲ ನಮ್ಮ ಮಿತ್ರ ರಾಷ್ಟ್ರಗಳು, ಸ್ನೇಹಿತರ ಸುರಕ್ಷತೆ ಕಲ್ಪಿಸುವ ಭರವಸೆಯನ್ನು ಅಮೆರಿಕಾ, ಭಾರತಕ್ಕೆ ನೀಡಿದೆ.

ಸೇನಾಧಿಕಾರಿ ಹತ್ಯೆ: ರಕ್ತಪಾತ ಸಹಿತ ಪ್ರತೀಕಾರಕ್ಕೆ ಸಜ್ಜು, ಮಸೀದಿ ಮೇಲೆ ಕೆಂಪು ಬಾವುಟ ಹಾರಿಸಿದ ಇರಾನ್
ಇರಾನ್ ಸೇನೆಯ ಪ್ರಮುಖ ಕಮಾಂಡರ್ ಸುಲೈಮಾನಿ ಅವರನ್ನು ಅಮೆರಿಕಾ ಹತ್ಯೆ ಮಾಡಿದ ಬೆನ್ನಲ್ಲೇ ಉಭಯ ದೇಶಗಳ ನಡುವಿನ ಸಂಘರ್ಷ ಮತ್ತಷ್ಟು ವಿಕೋಪಕ್ಕೆ ತಿರುಗಿದ್ದು, ಅಮೆರಿಕಾ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಇರಾನ್ ತುದಿಗಾಲಲ್ಲಿ ನಿಂತಿದೆ.

ಅಮೆರಿಕಾ ವಿರುದ್ಧ ಸಮರ ಶುರು: ಇರಾನ್ ಹ್ಯಾಕರ್ ಗಳಿಂದ ಅಮೆರಿಕಾ ವೆಬ್'ಸೈಟ್ ಹ್ಯಾಕ್
ಸೇನಾ ಕಮಾಂಡರ್ ಖಾಸಿಂ ಸುಲೈಮಾನಿ ಅವರನ್ನು ಹತ್ಯೆ ಮಾಡಿದ ಅಮೆರಿಕಾ ವಿರುದ್ಧ ಸೈಬರ್ ಸಮರ ಸೇರಿ ವಿವಿಧ ರೀತಿಯ ದಾಳಿಗಳನ್ನು ಇರಾನ್ ನಡೆಸಬಹುದು ಎಂಬ ಊಹೆ ಇದೀಗ ನಿಜವಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಅಮೆರಿಕಾ ಸರ್ಕಾರ ಕಾರ್ಯನಿರ್ವಹಿಸುತ್ತಿದ್ದ ವೆಬ್ ಸೈಟ್ ವೊಂದನ್ನು ಇರಾನ್ ಹ್ಯಾಕ್ ಮಾಡಿರುವ ಘಟನೆ ವರದಿಯಾಗಿದೆ.

ಅಮೆರಿಕಾ-ಇರಾನ್ ನಡುವಣ ಪ್ರಕ್ಷುಬ್ಧ ಪರಿಸ್ಥಿತಿ: ಭಾರತ ತೀವ್ರ ಕಳವಳ
ಇರಾನಿನ ಸೇನಾ ಕಮಾಂಡರ್ ಖಾಸಿಂ ಸುಲೈಮಾನಿಯನ್ನು ಅಮೆರಿಕಾ ಹತ್ಯೆ ಗೈದ ಬಳಿಕ ಉಭಯ ರಾಷ್ಟ್ರಗಳ ನಡುವಣ ಪ್ರಕ್ಷುಬ್ದ ಪರಿಸ್ಥಿತಿ ಬಿಗಡಾಯಿಸಿದ್ದು, ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ.

ನಮ್ಮ ಮೇಲೆ ದಾಳಿ ನಡೆಸಿದರೆ ಇರಾನ್ ರಾಷ್ಟ್ರದ 52 ತಾಣಗಳು ಕ್ಷಣಾರ್ಧದಲ್ಲಿ ಧ್ವಂಸ: ಟ್ರಂಪ್ ಎಚ್ಚರಿಕೆ
ನಮ್ಮ ಮೇಲೆ ಪ್ರತಿ ದಾಳಿ ನಡೆಸಿದ್ದೇ ಆದರೆ, ಇರಾನ್ ರಾಷ್ಟ್ರದ 52 ತಾಣಗಳು ಹಾಗೂ ಸಾಂಸ್ಕೃತಿಕ ಪ್ರದೇಶಗಳು ಕ್ಷಣಾರ್ಧದಲ್ಲಿ ಧ್ವಂಸಗೊಳ್ಳುತ್ತದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಮೂಲಕ ಪ್ರತಿದಾಳಿಗೆ ಸಂಚು ರೂಪಿಸುತ್ತಿರುವ ಇರಾನ್ ರಾಷ್ಟ್ರಕ್ಕೆ ಎಚ್ಚರಿಕೆ ನೀಡಿದ್ದಾರೆ.

