IPL 2024

IPL 2024: ಟೂರ್ನಿಯಿಂದ ಹೊರಬಿದ್ದ RCB, ಈ ಸಲ ಕಪ್ ನಮ್ದೆ ಎಂದಿದ್ದ ಎಬಿ ಡಿವಿಲಿಯರ್ಸ್ ಹೇಳಿದ್ದೇನು?
ಈ ಆವೃತ್ತಿಯ ಆರಂಭದಲ್ಲಿ ಆಡಿದ್ದ 8 ಪಂದ್ಯಗಳಲ್ಲಿ 7ರಲ್ಲಿ ಸೋಲು ಕಂಡಿದ್ದ ಆರ್‌ಸಿಬಿ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿತ್ತು. ಬಳಿಕ ಆಡಿದ 6 ಪಂದ್ಯಗಳಲ್ಲಿ ಸತತ ಗೆಲುವು ಕಾಣುವ ಮೂಲಕ ಐಪಿಎಲ್ 2024 ನೇ ಆವೃತ್ತಿಯ ಪ್ಲೇಆಫ್‌ಗೆ ಅರ್ಹತೆ ಪಡೆಯಿತು.

ಐಪಿಎಲ್‌ಗೆ ವಿದಾಯ: RCB ಸ್ಟಾರ್ ಬ್ಯಾಟರ್ ದಿನೇಶ್ ಕಾರ್ತಿಕ್ ನಿವೃತ್ತಿಯನ್ನು ಖಚಿತಪಡಿಸಿದ ಜಿಯೋ ಸಿನಿಮಾ!
ಈ ಐಪಿಎಲ್ ತನ್ನ ಕೊನೆಯ ಆವೃತ್ತಿ ಎಂದು ಈಗಾಗಲೇ ಸುಳಿವು ನೀಡಿದ್ದ ಕಾರ್ತಿಕ್, ಅಹಮದಾಬಾದ್‌ನಲ್ಲಿ ಪಂದ್ಯದ ಮುಕ್ತಾಯದ ನಂತರ ಸಹ ಆಟಗಾರರಿಂದ ಗಾರ್ಡ್ ಆಫ್ ಹಾನರ್ ಪಡೆದರು.

IPL 2024: ಸೋಲಿನ ಬೆನ್ನಲ್ಲೇ ಐಪಿಎಲ್ ಇತಿಹಾಸದಲ್ಲಿ ಕೆಟ್ಟ ದಾಖಲೆ ಬರೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು!
ಗುರುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2024ನೇ ಆವೃತ್ತಿಯ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ (RR) ವಿರುದ್ಧ ಸೋತ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಐಪಿಎಲ್ ಇತಿಹಾಸದಲ್ಲಿಯೇ ಕೆಟ್ಟ ದಾಖಲೆ ಬರೆದ ತಂಡವಾಗಿದೆ.

IPL 2024: ಅಭಿಮಾನಿಗಳ ಕನಸು ಭಗ್ನ; RCB ವಿರುದ್ಧ ರಾಜಸ್ಥಾನಕ್ಕೆ 4 ವಿಕೆಟ್ ಜಯ, ಕ್ವಾಲಿಫೈಯರ್ ನಲ್ಲಿ ಹೈದರಾಬಾದ್ ವಿರುದ್ಧ ಸೆಣಸು!
ಅಭಿಮಾನಿಗಳ ಕನಸು ಕೊನೆಗೂ ಭಗ್ನವಾಗಿದ್ದು, ಹಾಲಿ ಐಪಿಎಲ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಣಿಸಿ 2ನೇ ಕ್ವಾಲಿಫೈಯರ್ ಗೆ ಪ್ರವೇಶ ಪಡೆದಿದೆ.

IPL 2024, Eliminator 1: ಸ್ಲೋ ಪಿಚ್ ನಲ್ಲಿ ಮಂಕಾದ RCB ಬ್ಯಾಟಿಂಗ್, ರಾಜಸ್ತಾನಕ್ಕೆ ಗೆಲ್ಲಲು 173 ರನ್ ಗುರಿ!
ರಾಜಸ್ತಾನ ತಂಡದ ಬೌಲರ್ ಗಳ ಶಿಸ್ತುಬದ್ದ ದಾಳಿ ಎಂದು ಮಂಕಾದ ಆರ್ ಸಿಬಿ ಬ್ಯಾಟರ್ ಗಳು RRಗೆ ಗೆಲ್ಲಲು 173 ರನ್ ಗಳ ಸಾಧಾರಣ ಗುರಿ ನೀಡಿದ್ದಾರೆ.

IPL 2024: Glenn Maxwell ಡಕೌಟ್, ದಿನೇಶ್ ಕಾರ್ತಿಕ್ ಕಳಪೆ ದಾಖಲೆ ಸರಿಗಟ್ಟಿದ RCB ಬ್ಯಾಟರ್!
ಹಾಲಿ ಐಪಿಎಲ್ ಟೂರ್ನಿಯ ಇಂದಿನ ಎಲಿಮಿನೇಟರ್ ಪಂದ್ಯದಲ್ಲಿ ಆರ್ ಸಿಬಿ ಬ್ಯಾಟರ್ ಗ್ಲೇನ್ ಮ್ಯಾಕ್ಸ್ ವೆಲ್ ಹೀನಾಯ ದಾಖಲೆಯೊಂದನ್ನು ಬರೆದಿದ್ದಾರೆ.

IPL 2024: Virat Kohli ಮತ್ತೊಂದು ದಾಖಲೆ, ಐಪಿಎಲ್ ನಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ!
ಹಾಲಿ ಐಪಿಎಲ್ ಟೂರ್ನಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ವಿರಾಟ್ ಕೊಹ್ಲಿ ಮತ್ತೊಂದು ಸಾಧನೆ ಮಾಡಿದ್ದು, ಐಪಿಎಲ್ ನಲ್ಲಿ 8 ಸಾವಿರ ರನ್ ಗಳಿಸಿದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

IPL 2024 Eliminator 1: ಟಾಸ್ ಗೆದ್ದ ರಾಜಸ್ತಾನ ಬೌಲಿಂಗ್ ಆಯ್ಕೆ, RCB ಮೊದಲು ಬ್ಯಾಟಿಂಗ್!
ಹಾಲಿ ಐಪಿಎಲ್ ಟೂರ್ನಿಯ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ವಿರಾಟ್ ಕೊಹ್ಲಿ ಭದ್ರತೆಗೆ ಬೆದರಿಕೆ: ಆರ್‌ಸಿಬಿಯ ಅಭ್ಯಾಸ, ಸುದ್ದಿಗೋಷ್ಠಿ ರದ್ದು!
ವಿರಾಟ್ ಕೊಹ್ಲಿಗೆ ಭದ್ರತೆ ಬೆದರಿಕೆ ಕಾರಣದಿಂದ ಆರ್ ಸಿಬಿ ಅಭ್ಯಾಸವನ್ನು ರದ್ದುಗೊಳಿಸಿದ್ದು, ಉಭಯ ತಂಡಗಳು ಸುದ್ದಿಗೋಷ್ಠಿ ನಡೆಸಲಿಲ್ಲ ಎಂಬುದಾಗಿ ಗುಜರಾತ್ ಪೊಲೀಸ್ ಅಧಿಕಾರಿಗಳು ಹೇಳಿರುವುದಾಗಿ ಬಂಗಾಳಿ ದೈನಿಕ ಆನಂದಬಜಾರ್ ಪತ್ರಿಕೆ ವರದಿ ಮಾಡಿದೆ.

