IPL 2024, Eliminator 1: ಸ್ಲೋ ಪಿಚ್ ನಲ್ಲಿ ಮಂಕಾದ RCB ಬ್ಯಾಟಿಂಗ್, ರಾಜಸ್ತಾನಕ್ಕೆ ಗೆಲ್ಲಲು 173 ರನ್ ಗುರಿ!
ರಾಜಸ್ತಾನ ತಂಡದ ಬೌಲರ್ ಗಳ ಶಿಸ್ತುಬದ್ದ ದಾಳಿ ಎಂದು ಮಂಕಾದ ಆರ್ ಸಿಬಿ ಬ್ಯಾಟರ್ ಗಳು RRಗೆ ಗೆಲ್ಲಲು 173 ರನ್ ಗಳ ಸಾಧಾರಣ ಗುರಿ ನೀಡಿದ್ದಾರೆ.

ಅಹ್ಮದಾಬಾದ್: ರಾಜಸ್ತಾನ ತಂಡದ ಬೌಲರ್ ಗಳ ಶಿಸ್ತುಬದ್ದ ದಾಳಿ ಎಂದು ಮಂಕಾದ ಆರ್ ಸಿಬಿ ಬ್ಯಾಟರ್ ಗಳು RRಗೆ ಗೆಲ್ಲಲು 173 ರನ್ ಗಳ ಸಾಧಾರಣ ಗುರಿ ನೀಡಿದ್ದಾರೆ.
ಇಂದು ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎಲಿಮಿನೇಟರ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಗಧಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 172 ರನ್ ಗಳನ್ನು ಕಲೆಹಾಕಿತು.
ಆರ್ ಸಿಬಿ ಪರ ವಿರಾಟ್ ಕೊಹ್ಲಿ 33ರನ್, ನಾಯಕ ಫಾಫ್ ಡುಪ್ಲೆಸಿಸ್ 17ರನ್, ಕ್ಯಾಮೆರಾನ್ ಗ್ರೀನ್ 27 ರನ್ ಗಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ರಜತ್ ಪಾಟಿದಾರ್ (34) ಕೊಂಚ ಪ್ರತಿರೋಧ ತೋರಿದರೂ ಬಳಿಕ ಬಂದ ಮ್ಯಾಕ್ಸ್ ವೆಲ್ ಶೂನ್ಯಕ್ಕೆ ಔಟಾಗಿದ್ದು ತಂಡಕ್ಕೆ ದುಬಾರಿಯಾಯಿತು.
ಮಹಿಪಾಲ್ ಲಾಮ್ರೋರ್ 32 ರನ್ ಗಳಿಸಿದರೆ, ದಿನೇಶ್ ಕಾರ್ತಿಕ್ 11 ರನ್ ಗಳಿಸಿದರು. ಅಂತಿಮವಾಗಿ ಆರ್ ಸಿಬಿ ತಂಡ ನಿಗಧಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 172 ರನ್ ಗಳನ್ನು ಕಲೆಹಾಕಿ, ರಾಜಸ್ತಾನಕ್ಕೆ ಗೆಲ್ಲಲು 173 ರನ್ ಗುರಿ ನೀಡಿತು.
ರಾಜಸ್ತಾನ ಶಿಸ್ತುಬದ್ಧ ಬೌಲಿಂಗ್ ದಾಳಿ
ಇನ್ನು ಆರ್ ಸಿಬಿ ವಿರುದ್ಧ ಶಿಸ್ತುಬದ್ಧ ಬೌಲಿಂಗ್ ದಾಳಿ ಪ್ರದರ್ಶಿಸಿದ ರಾಜಸ್ತಾನ ಪರ ಆವೇಶ್ ಖಾನ್ 3 ವಿಕೆಟ್ ಪಡೆದರೆ, ಆರ್ ಅಶ್ವಿನ್ 2 ವಿಕೆಟ್ ಪಡೆದರು. ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ ಮತ್ತು ಚಹಲ್ ತಲಾ ಒಂದು ವಿಕೆಟ್ ಪಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



