IPL 2024

IPL 2024: ಕಮೆಂಟರಿ ಬಾಕ್ಸ್ ಗೆ ನವಜೋತ್ ಸಿಂಗ್ ಸಿಧು ವಾಪಸ್, ವೀಕ್ಷಕ ವಿವರಣೆಗೆ 'Sidhuism' ಟಚ್!
ಐಪಿಎಲ್ 2024ರ ಟೂರ್ನಿಗೆ ದಿನಗಣನೆ ಆರಂಭವಾಗಿದ್ದು, ಈ ಹಿಂದೆ ರಾಜಕೀಯ ಕಾರಣದಿಂದಾಗಿ ಕ್ರಿಕೆಟ್ ನಿಂದ ದೂರ ಉಳಿದಿದ್ದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಇದೀಗ ಮತ್ತೆ ವೀಕ್ಷಕ ವಿವರಣೆಗೆ ಮರಳಿದ್ದಾರೆ.

ಲೋಕಸಭೆ ಚುನಾವಣೆ ಇದ್ದರೂ IPL 2024 ಭಾರತದಲ್ಲೇ ನಡೆಯುತ್ತದೆ - ಜಯ್ ಶಾ ಘೋಷಣೆ
2024 ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಅನ್ನು ವಿದೇಶದಲ್ಲಿ ಆಯೋಜಿಸುವುದಿಲ್ಲ ಎಂದು ಬಿಸಿಸಿಐ ಇಂದು ಪ್ರಕಟಿಸಿದೆ.

IPL ಮೂಲಕ ಟಿ20 ವಿಶ್ವಕಪ್ ಆಯ್ಕೆಗೆ ಕನಸು ಕಾಣುತ್ತಿದ್ದ ಆಟಗಾರರಿಗೆ BCCI ಬಿಗ್ ಶಾಕ್!
ಮುಂಬರುವ T20 ವಿಶ್ವಕಪ್‌ನ ತಂಡದ ಆಯ್ಕೆಯಲ್ಲಿ IPL 2024 ಅನ್ನು ಪ್ರಮುಖ ಮಾನದಂಡವಾಗಿ ನೋಡಲಾಗುತ್ತಿದೆ. ಆದರೆ ಇದಕ್ಕೆ BCCI ವಿಭಿನ್ನ ನಿಲುವು ತೆಗೆದುಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ.

IPL 2024: ಶೀಘ್ರದಲ್ಲೇ RCB ಅಭ್ಯಾಸ ಶಿಬಿರಕ್ಕೆ ಕಿಂಗ್ ಕೊಹ್ಲಿ!
ಮಾರ್ಚ್ 22 ರಂದು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಐಪಿಎಲ್ 2024ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಆಡಲು ರಾಯಲ್ ಚಾಲೆಂಜರ್ಸ್ ತಂಡವು ಸಜ್ಜಾಗುತ್ತಿದ್ದು, ಅದಕ್ಕೂ ಮುನ್ನ ಆರ್‌ಸಿಬಿ ಪ್ರಮುಖ ಆಟಗಾರರು ತಂಡವನ್ನು ಸೇರಿಕೊಳ್ಳುತ್ತಿದ್ದಾರೆ. ಮಂಗಳವಾರ ಸಂಜೆ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಶಿಬಿರವನ್ನು ಸೇರಿಕೊಂಡಿದ್ದಾರೆ.

RCB ಹೆಸರು ಬದಲಾವಣೆ: ರಿಷಬ್ ಶೆಟ್ಟಿ ಬಳಿಕ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೇಳಿದ್ದೇನು?
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಾರ್ಚ್ 22ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ ಐಪಿಎಲ್ 2024ರ ಆವೃತ್ತಿಯ ಆರಂಭಿಕ ಪಂದ್ಯವನ್ನು ಆಡಲಿದ್ದು, ಅದಕ್ಕೂ ಮೊದಲು ಫ್ರಾಂಚೈಸಿ ತನ್ನ ಹೆಸರನ್ನು ಬದಲಾಯಿಸಲು ಸಿದ್ಧವಾಗಿದೆ.

ಅಭಿಮಾನಿಗಳ ಪ್ರೀತಿಗೆ ಸೋತ RCB; ರಿಷಬ್ ಶೆಟ್ಟಿ ಮೂಲಕ ಹೆಸರು ಬದಲಾವಣೆ ಸುಳಿವು ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು
2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 17ನೇ ಆವೃತ್ತಿಗೆ ಕೆಲವೇ ಕೆಲವು ದಿನಗಳು ಬಾಕಿ ಉಳಿದಿದ್ದು, ಅಭಿಮಾನಿಗಳ ನೆಚ್ಚಿನ ಫ್ರಾಂಚೈಸಿ ಆಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದೀಗ ಹೆಸರು ಬದಲಾವಣೆಯ ಸೂಚನೆ ನೀಡಿದೆ. ಈ ಮೂಲಕ ಅಭಿಮಾನಿಗಳ ಕೂಗಿಗೆ ಕೊನೆಗೂ ಆರ್‌ಸಿಬಿ ಮಣಿದಿದೆ.

IPL 2024: ಕೀಪರ್-ಬ್ಯಾಟರ್ ರಿಷಬ್ ಪಂತ್ ಫಿಟ್; ಮೊಹಮ್ಮದ್ ಶಮಿ, ಪ್ರಸಿದ್ಧ್ ಕೃಷ್ಣ ಔಟ್!
ಭಾರತದ ವೇಗಿ ಮೊಹಮ್ಮದ್ ಶಮಿ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರಿಂದ ಹೊರಗುಳಿಯಲಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಂಗಳವಾರ ದೃಢಪಡಿಸಿದೆ.

2024 ಐಪಿಎಲ್ ಆವೃತ್ತಿ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಆರ್‌ಸಿಬಿ ಸ್ಟಾರ್ ಆಟಗಾರ ವಿದಾಯ!
ಭಾರತದ ವಿಕೆಟ್‌ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಮಾರ್ಚ್ 22 ರಿಂದ ಪ್ರಾರಂಭವಾಗುವ 2024ರ ಐಪಿಎಲ್ ಆವೃತ್ತಿಯಲ್ಲಿ ತಮ್ಮ ಕೊನೆಯ ಪ್ರದರ್ಶನ ನೀಡಲು ಸಿದ್ಧರಾಗಿದ್ದಾರೆ. ಈ ಟಿ20 ಲೀಗ್‌ನ ನಂತರ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೂ ವಿದಾಯ ಹೇಳುವ ಸಾಧ್ಯತೆ ಇದೆ ಎನ್ನಲಾಗಿದೆ.

'ಹೊಸ ಸೀಸನ್, ಹೊಸ ಪಾತ್ರ'; ಧೋನಿ ವಿದಾಯ?.. ಐಪಿಎಲ್ ಗೆ ಕ್ಷಣಗಣನೆ... ಕುತೂಹಲ ಕೆರಳಿಸಿದ ಮಾಹಿ ಪೋಸ್ಟ್!
2024ರ ಐಪಿಎಲ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅಚ್ಚರಿ ಪೋಸ್ಟ್ ಮಾಡಿದ್ದು, ಈ ಪೋಸ್ಟ್ ಅವರ ವಿದಾಯದ ಮುನ್ಸೂಚನೆಯೇ ಎಂಬ ಚರ್ಚೆಗೆ ಗ್ರಾಸವಾಗಿದೆ.

