International Yoga Day

ಯೋಗ ದಿನ ಕಾರ್ಯಕ್ರಮಕ್ಕೆ ರಾಜಮಾತೆ ಪ್ರಮೋದಾ ದೇವಿ, ಮಹಾರಾಜ ಯದುವೀರ್ ಒಡೆಯರ್ ಗೆ ಆಹ್ವಾನ: ಪ್ರತಾಪ್ ಸಿಂಹ
ಅರಮನೆ ಹಿಂಭಾಗ ಮತ್ತು ಮುಂಭಾಗ ಸೇರಿ ಪ್ರಾಂಗಣದಲ್ಲಿ 15 ಸಾವಿರ ಜನರಿಗೆ ಯೋಗ ಮಾಡಲು ಅವಕಾಶವಿದೆ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಚಿತ್ರ ಗುಚ್ಛ: ಭಾರತದಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನಾಚರಣೆ
ಭಾರತದ ಪ್ರಾಚೀನ ಯೋಗವಿದ್ಯೆಯನ್ನು ಜಾಗತಿಕ ಮಟ್ಟದಲ್ಲಿ ಆಚರಣೆ ತಂದು ಇಂದಿಗೆ 7 ವರ್ಷಗಳಾಯಿತು. ವಿಶ್ವಸಮುದಾಯ ಜೂ.21 ರಂದು 7 ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಿದ್ದು, ಭಾರತದಾದ್ಯಂತ ನಡೆದ ಯೋಗ ದಿನಾಚರಣೆಯ ಫೋಟೋಗಳು ಹೀಗಿವೆ.

ನಾಳೆ 7ನೇ ಅಂತಾರಾಷ್ಟ್ರೀಯ ಯೋಗ ದಿನ: ಬೆಳಗ್ಗೆ 6.15ರಿಂದ ದೂರದರ್ಶನದಲ್ಲಿ ನೇರ ಪ್ರಸಾರ, ಪ್ರಧಾನಿ ಭಾಷಣ
ನಾಳೆ 7ನೇ ಅಂತಾರಾಷ್ಟ್ರೀಯ ಯೋಗ ದಿನ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ.

87ರ ಇಳಿ ವಯಸ್ಸಿನಲ್ಲಿ ಯೋಗ ಮಾಡುತ್ತಿರುವ ದೇವೇಗೌಡರು, ರಾಜಕೀಯ ನಾಯಕರ ಉತ್ಸಾಹ
87 ವರ್ಷದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಯೋಗ ಮಾಡುತ್ತಿರುವ ವಿಡಿಯೊವನ್ನು ಟ್ವಿಟ್ಟರ್ ನಲ್ಲಿ ಹಾಕಿ ಎಲ್ಲರೂ ಯೋಗ ಮಾಡಿ, ಮನಸ್ಸು ಮತ್ತು ದೇಹದ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದಾಗ ಹಲವರು ಈ ಇಳಿ ವಯಸ್ಸಿನಲ್ಲಿ ಅವರ ಜೀವನೋತ್ಸಾಹ ನೋಡಿ ಹುಬ್ಬೇರಿಸಿದ್ದಂತೂ ಸುಳ್ಳಲ್ಲ.

ಕೊರೋನಾ ಸಾಂಕ್ರಾಮಿಕ ಮಧ್ಯೆ 'ಪ್ರಾಣಾಯಾಮ' ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ:ಪಿಎಂ ಮೋದಿ
ಯೋಗದಲ್ಲಿ ಉಸಿರಾಟವನ್ನು ನಿಯಂತ್ರಿಸುವ ಅಭ್ಯಾಸ ಮಾಡುವ ಪ್ರಾಣಾಯಾಮ ಮಾಡುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅನುಕೂಲವಾಗುತ್ತದೆ. ಪ್ರಸ್ತುತ ದೇಶದಲ್ಲಿ ಕೊರೋನಾ ವೈರಸ್ ಸೋಂಕಿನ ಸಮಸ್ಯೆ ಇರುವ ಸಂದರ್ಭದಲ್ಲಿ ಪ್ರಾಣಾಯಾಮ ಮಾಡುವ ಮೂಲಕ ಕೊರೋನಾ ಬರುವುದನ್ನು ತಡೆಗಟ್ಟಲು ಸಹಾಯವಾಗಬಹುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಧರ್ಮ, ಜಾತಿ, ಲಿಂಗ, ಬಣ್ಣ, ವರ್ಗ ಮೀರಿ ಮಾನವೀಯ ಸಂಬಂಧ, ಏಕತೆ ಸಾರುವ ಶಕ್ತಿ ಯೋಗಕ್ಕಿದೆ:ಪ್ರಧಾನಿ ಮೋದಿ
ಎಲ್ಲರೂ ತಮ್ಮ ಮನೆಯಲ್ಲಿ ಯೋಗದ ಮೂಲಕ ಕುಟುಂಬ ಸಂಬಂಧವನ್ನು ಹೆಚ್ಚಿಸುವ ಸಂದರ್ಭ ಇದಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಕೊರೋನಾ ಎಫೆಕ್ಟ್: ಈ ಬಾರಿ ಡಿಜಿಟಲ್ ಮಾಧ್ಯಮ ವೇದಿಕೆಗಳಲ್ಲಿ ಯೋಗ ದಿನಾಚರಣೆ
ಕೋವಿಡ್ -19 ಸಾಂಕ್ರಾಮಿಕ ಹಾವಳಿಯ ಕಾರಣ ಈ ವರ್ಷದ ಅಂತರರಾಷ್ಟ್ರೀಯ ಯೋಗ ದಿನವನ್ನು ಡಿಜಿಟಲ್ ಮಾಧ್ಯಮ ವೇದಿಕೆಗಳಲ್ಲಿ ಆಚರಿಸಲಾಗುವುದು ಮತ್ತು ಯಾವುದೇ ಸಾಮೂಹಿಕ ಕೂಟಗಳು ಇರುವುದಿಲ್ಲ ಎಂದು ಸರ್ಕಾರ ಹೇಳಿದೆ.

ಯೋಗದಿನಾಚರಣೆ: ಈ ಬಾರಿ ಪ್ರಧಾನಿ ಮೋದಿಗೆ ಆತಿಥ್ಯ ನೀಡಲಿರುವ ನಗರ ಯಾವುದು ಗೊತ್ತೇ?
ಅಂತಾರಾಷ್ಟ್ರೀಯ ಯೋಗದಿನಾಚರಣೆಗೆ ಆಯುಷ್ ಸಚಿವಾಲಯ ತಯಾರಿ ನಡೆಸಿಕೊಳ್ಳುತ್ತಿದ್ದು, ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿರುವ ನಗರವನ್ನೂ ಅಂತಿಮಗೊಳಿಸಲಾಗಿದೆ.

ಮಾಧ್ಯಮ ಸಂಸ್ಥೆಗಳಿಗೆ ಮೊದಲ ಅಂತಾರಾಷ್ಟ್ರೀಯ ಯೋಗ ದಿವಸ್ ಪ್ರಶಸ್ತಿ
ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಮಂಗಳವಾರ 30 ಮಾಧ್ಯಮಗಳಿಗೆ ಮೊದಲ ‘ಅಂತಾರಾಷ್ಟ್ರೀಯ ಯೋಗ ದಿವಸ್ ಮೀಡಿಯಾ ಸಮ್ಮನ್’ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

