87ರ ಇಳಿ ವಯಸ್ಸಿನಲ್ಲಿ ಯೋಗ ಮಾಡುತ್ತಿರುವ ದೇವೇಗೌಡರು, ರಾಜಕೀಯ ನಾಯಕರ ಉತ್ಸಾಹ
87 ವರ್ಷದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಯೋಗ ಮಾಡುತ್ತಿರುವ ವಿಡಿಯೊವನ್ನು ಟ್ವಿಟ್ಟರ್ ನಲ್ಲಿ ಹಾಕಿ ಎಲ್ಲರೂ ಯೋಗ ಮಾಡಿ, ಮನಸ್ಸು ಮತ್ತು ದೇಹದ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದಾಗ ಹಲವರು ಈ ಇಳಿ ವಯಸ್ಸಿನಲ್ಲಿ ಅವರ ಜೀವನೋತ್ಸಾಹ ನೋಡಿ ಹುಬ್ಬೇರಿಸಿದ್ದಂತೂ ಸುಳ್ಳಲ್ಲ.

ಬೆಂಗಳೂರು: 87 ವರ್ಷದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಯೋಗ ಮಾಡುತ್ತಿರುವ ವಿಡಿಯೊವನ್ನು ಟ್ವಿಟ್ಟರ್ ನಲ್ಲಿ ಹಾಕಿ ಎಲ್ಲರೂ ಯೋಗ ಮಾಡಿ, ಮನಸ್ಸು ಮತ್ತು ದೇಹದ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದಾಗ ಹಲವರು ಈ ಇಳಿ ವಯಸ್ಸಿನಲ್ಲಿ ಅವರ ಜೀವನೋತ್ಸಾಹ ನೋಡಿ ಹುಬ್ಬೇರಿಸಿದ್ದಂತೂ ಸುಳ್ಳಲ್ಲ.
ಈ ಬಾರಿ ಕೊರೋನಾ ವೈರಸ್ ಮಧ್ಯೆ ನಿನ್ನೆ ಅಂತಾರಾಷ್ಟ್ರೀಯ ಯೋಗ ದಿನ ಸಾರ್ವಜನಿಕ ಸಮಾರಂಭಗಳಿಲ್ಲದಿದ್ದರೂ ಕೂಡ ಹಲವು ರಾಜಕೀಯ ನಾಯಕರು ತಮ್ಮ ಮನೆಗಳಲ್ಲಿ, ಕಚೇರಿಗಳಲ್ಲಿ, ತಾವಿರುವಲ್ಲಿ ಯೋಗ ಮಾಡಿ ಖುಷಿಪಟ್ಟರು. ರಾಜ್ಯಪಾಲ ವಜುಭಾಯಿ ವಾಲಾ ಮತ್ತು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಹ ಜನರು ಪ್ರತಿದಿನ ಯೋಗ ಮಾಡಬೇಕು ಎಂದು ಸಾರಿ ಹೇಳಿದರು.
ಪ್ರತಿವರ್ಷ ಯೋಗ ದಿನಾಚರಣೆಯಂದು ತುಂಬಿರುತ್ತಿದ್ದ ಸ್ಟೇಡಿಯಂ, ಕ್ಲಬ್, ಪಾರ್ಕ್, ಶಾಲಾ, ಕಾಲೇಜುಗಳು, ಪರೇಡ್ ಮೈದಾನಗಳಲ್ಲಿ ನಿನ್ನೆ ನೀರವ ವಾತಾವರಣ ಕಂಡುಬಂತು. ರಾಜಕೀಯ ನಾಯಕರು ಬೆಳಗ್ಗೆಯೇ ಯೋಗ ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಹಾಕಿ ಅಭಿಮಾನಿಗಳ ಜೊತೆ ದಿನಾಚರಣೆ ಸಂತೋಷ ಹಂಚಿಕೊಂಡರು.
ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳೀನ್ ಕುಮಾರ್ ಕಟೀಲ್ ಬಿಜೆಪಿ ಕೇಂದ್ರ ಕಚೇರಿಯಲ್ಲಿ ತಮ್ಮ ಪದಾಧಿಕಾರಿಗಳ ಜೊತೆ ಯೋಗ ಮಾಡಿದರು. ಸಚಿವರುಗಳಾದ ಬಿ ಸಿ ಪಾಟೀಲ್, ಎಸ್ ಟಿ ಸೋಮಶೇಖರ್ ಒಟ್ಟಿಗೆ ತೋಟದ ಮಧ್ಯೆ ಕುಳಿತು ಯೋಗ ಮಾಡಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೀಗೆ ಬಹುತೇಕ ನಾಯಕರು ಯೋಗ ಮಾಡುವುದರ ಪ್ರಾಮುಖ್ಯತೆ ತಿಳಿಸಿ ತಾವು ಮಾಡುತ್ತಿರುವ ಯೋಗಭ್ಯಾಸದ ಫೋಟೋಗಳನ್ನು ಹಂಚಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


