Injury

ಸಿಲಿಂಡರ್ ಸ್ಫೋಟ: ಇಬ್ಬರು ಮಕ್ಕಳು ಸೇರಿ ನಾಲ್ವರಿಗೆ ಗಂಭೀರ ಗಾಯ
ಅಡುಗೆ ಮನೆಯಲ್ಲಿದ್ದ ಅಡುಗೆ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಇಬ್ಬರು ಮಕ್ಕಳು ಸೇರಿ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿಯ ಗಾಂಧಿನಗರ ಪ್ರದೇಶದ ಸುಭಾಷ್ ಗಲ್ಲಿಯಲ್ಲಿ ಶನಿವಾರ ನಡೆದಿದೆ.

ಮಹಾರಾಷ್ಟ್ರ: ಚಲಿಸುತ್ತಿದ್ದ ಬಸ್'ಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡು 25 ಮಂದಿ ದುರ್ಮರಣ, 8 ಪ್ರಯಾಣಿಕರಿಗೆ ಗಾಯ
ಚಲಿಸುತ್ತಿದ್ದ ಬಸ್'ವೊಂದಕ್ಕೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡ ಪರಿಣಾಮ 25 ಮಂದಿ ಸಜೀವ ದಹನವಾಗಿ, 8 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರ ಸಮೃದ್ಧಿ ಮಹಾಮಾರ್ಗ್ ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ಶನಿವಾರ ನಡೆದಿದೆ.

ಹೊಸೂರು ರಸ್ತೆಯಲ್ಲಿ ಭೀಕರ ಅಪಘಾತ: ಉರುಳಿಬಿದ್ದ ಟ್ರಕ್; ಚಾಲಕ, ಕ್ಲೀನರ್ ದುರ್ಮರಣ
ವೇಗವಾಗಿ ಸಾಗುತ್ತಿದ್ದ ಹಾಲು ಸರಬರಾಜು ಮಾಡುವ ಟ್ರಕ್ ವೊಂದು ಉರುಳಿಬಿದ್ದ ಪರಿಣಾಮ ಟ್ರಕ್'ನ ಚಾಲಕ ಮತ್ತು ಕ್ಲೀನರ್ ಸಾವನ್ನಪ್ಪಿರುವ ಘಟನೆ ಹೊಸೂರು ರಸ್ತೆ (ಎನ್ಎಚ್-7) ಸರ್ವಿಸ್ ಲೇನ್ನಲ್ಲಿ ಬುಧವಾರ ನಡೆದಿದೆ.

ಮಧ್ಯ ಪ್ರದೇಶ: ನದಿಗೆ ಉರುಳಿ ಬಿದ್ದ ಟ್ರಕ್, ಐವರ ದುರ್ಮರಣ
ಮದುವೆ ಮನೆಯವರನ್ನು ಹೊತ್ತೊಯುತ್ತಿದ್ದ ಟ್ರಕ್'ವೊಂದು ನದಿಗೆ ಉರುಳಿ ಬಿದ್ದ ಪರಿಣಾಮ ಐವರು ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ಘಟನೆ ಮಧ್ಯ ಪ್ರದೇಶದ ದತಿಯಾ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.

ಹಿಮಾಚಲ ಪ್ರದೇಶ: ಮೇಘಸ್ಫೋಟದಿಂದ ಹಠಾತ್ ಪ್ರವಾಹ, ಭೂಸಿತ, 9 ಮಂದಿ ಸಾವು
ಮೇಘಸ್ಫೋಟ, ಹಠಾತ್ ಪ್ರವಾಹ ಮತ್ತು ಭೂಕುಸಿತದಿಂದ ಹಿಮಾಚಲ ಪ್ರದೇಶದಲ್ಲಿ ಕಳೆದ ಮೂರು ದಿನಗಳಲ್ಲಿ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿ, 14 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಒಡಿಶಾದಲ್ಲಿ ಭೀಕರ ರಸ್ತೆ ಅಪಘಾತ: ಎರಡು ಬಸ್'ಗಳ ನಡುವೆ ಡಿಕ್ಕಿ, 10 ಮಂದಿ ಪ್ರಯಾಣಿಕರ ದುರ್ಮರಣ
ಒಡಿಶಾದ ಗಂಜಾಂನಲ್ಲಿ ಒಎಸ್ಆರ್ಟಿಸಿ ಬಸ್ ಮತ್ತು ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಪರಿಣಾಮ 10 ಜನ ಪ್ರಯಾಣಿಕರು ಸಾವನ್ನಪ್ಪಿರುವ ದುರ್ಘಟನೆ ಭಾನುವಾರ ತಡರಾತ್ರಿ ನಡೆದಿದೆ.

ವರುಣನ ಅವಾಂತರ: ಥಾಣೆಯಲ್ಲಿ ಭಾರಿ ಮಳೆಗೆ ರೆಸ್ಟೋರೆಂಟ್ ಛಾವಣಿ ಕುಸಿತ; ಮೂವರಿಗೆ ಗಾಯ
ಭಾರಿ ಮಳೆಯ ನಂತರ ಮಹಾರಾಷ್ಟ್ರದ ಥಾಣೆ ನಗರದಲ್ಲಿ ರೆಸ್ಟೋರೆಂಟ್ನ ಛಾವಣಿ ಕುಸಿದು ಮೂವರು ಗಾಯಗೊಂಡಿದ್ದಾರೆ ಎಂದು ನಾಗರಿಕ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಮಣಿಪುರ: ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಯೋಧನಿಗೆ ಗಾಯ; ಮೂರು ಮನೆಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು
ಭಾನುವಾರ ರಾತ್ರಿ 11.45ರ ಸುಮಾರಿಗೆ ಮಣಿಪುರದ ಇಂಫಾಲ್ ಪಶ್ಚಿಮ ಜಿಲ್ಲೆಯಲ್ಲಿ ದುಷ್ಕರ್ಮಿಗಳು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಗುಂಡೇಟಿನಿಂದ ಸೇನಾ ಯೋಧನ ಎಡಗಾಲಿಗೆ ಗಾಯವಾಗಿದೆ.

ತಮಿಳುನಾಡಿನಲ್ಲಿ ಭೀಕರ ಅಪಘಾತ: ಎರಡು ಬಸ್'ಗಳು ಮುಖಾಮುಖಿ ಡಿಕ್ಕಿ, ಇಬ್ಬರ ಸಾವು, 30 ಮಂದಿಗೆ ಗಾಯ
ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ಎರಡು ಖಾಸಗಿ ಬಸ್ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಕನಿಷ್ಠ 30 ಮಂದಿ ಗಾಯಗೊಂಡಿರುವ ಘಟನೆ ಸೋಮವಾರ ನಡೆದಿದೆ.

