infection

ಕೋವಿಡ್-19: ಭಾರತದಲ್ಲಿ 62,939ಕ್ಕೇರಿದ ಸೋಂಕಿತರ ಸಂಖ್ಯೆ, 2,109 ಮಂದಿ ಬಲಿ
ದೇಶದಲ್ಲಿ ಕೊರೋನಾ ಆರ್ಭಟ ಹೆಚ್ಚಾಗುತ್ತಲೇ ಇದ್ದು, ಸೋಂಕಿತರ ಸಂಖ್ಯೆ 62,939ಕ್ಕೆ ಏರಿಕೆಯಾಗಿದೆ. ಅಲ್ಲದೆ, ಮಹಾಮಾರಿ ವೈರಸ್'ಗೆ 2,109 ಮಂದಿ ಬಲಿಯಾಗಿದ್ದಾರೆ.

ರಾಜ್ಯಕ್ಕೆ ಕೊರೋನಾಘಾತ: 24 ಗಂಟೆಗಳಲ್ಲಿ 45 ಹೊಸ ಪ್ರಕರಣ ಪತ್ತೆ, ಸೋಂಕಿತರ ಸಂಖ್ಯೆ 750ಕ್ಕೆ ಏರಿಕೆ
ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆ ಎಂದು ನಿಟ್ಟುಸಿರು ಬಿಡುವಾಗಲೇ ರಾಜ್ಯದಲ್ಲಿ ಒಂದೇ ದಿನ ಏಕಾಏಕಿ 45 ಹೊಸ ಪ್ರಕರಣಗಳು ವರದಿಯಾಗಿದ್ದು, ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ.

ಕೊರೋನಾ ವೈರಸ್: ರಾಜ್ಯದಲ್ಲಿ ಸೋಂಕಿತರಿಗಿಂತಲೂ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚು!
ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಜನತೆಯಲ್ಲಿ ಸಾಕಷ್ಟು ಆತಂಕ ಹುಟ್ಟಿಸಿರುವ ನಡುವಲ್ಲೇ ತುಸು ನೆಮ್ಮದಿಯ ಬೆಳವಣಿಗೆಗಳು ಇದೀಗ ಕಂಡು ಬರುತ್ತಿದೆ.

ಭಾರತಕ್ಕೆ ಕೊರೋನಾಘಾತ: 24 ಗಂಟೆಗಳಲ್ಲಿ 3,900 ಮಂದಿಯಲ್ಲಿ ಸೋಂಕು ಪತ್ತೆ, ಸೋಂಕಿತರ ಸಂಖ್ಯೆ 46,433ಕ್ಕೆ ಏರಿಕೆ
ಭಾರತದಲ್ಲಿ ಕೊರೋನಾ ವೈರಸ್ ರಣಕೇಕೆ ಹಾಕುತ್ತಿದ್ದು, ಕೇವಲ 24 ಗಂಟೆಗಳಲ್ಲಿ 3,900 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ.

ಕೊರೋನಾ: ದೇಶದಲ್ಲಿ 24 ಗಂಟೆಗಳಲ್ಲಿ 2573 ಮಂದಿಯಲ್ಲಿ ವೈರಸ್ ಪತ್ತೆ; ಸೋಂಕಿತರ ಸಂಖ್ಯೆ 43,000ಕ್ಕೆ ಏರಿಕೆ
ದೇಶದಲ್ಲಿ ಕೊರೋನಾ ವೈರಸ್ ಆರ್ಭಟ ಹೆಚ್ಚಾಗುತ್ತಲೇ ಇದ್ದು, ಕೇವಲ 24 ಗಂಟೆಗಳಲ್ಲಿ 2,573 ಮಂದಿಯಲ್ಲಿ ಹೊಸದಾಗಿ ವೈರಸ್ ದೃಢಪಟ್ಟಿದೆ. ಇದರಂತೆ ಸೋಂಕಿತರ ಸಂಖ್ಯೆ 43,000ಕ್ಕೇ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಕೊರೋನಾ ಎಚ್ಚರ ತಪ್ಪಿದರೆ ಅಪಾಯ, ಮುಂದಿದೆ ಮತ್ತಷ್ಟು ಕಠಿಣ ದಿನಗಳು: ಆರೋಗ್ಯಾಧಿಕಾರಿಗಳಿಂದ ಎಚ್ಚರಿಕೆ
ಕೊರೋನಾ ವೈರಸ್ ವ್ಯಾಪಕವಾಗಿ ಹರಡುವುದನ್ನು ತಡೆಯುವ ಸಲುವಾಗಿ ಹಲವು ದಿನಗಳಿಂದ ಘೋಷಣೆ ಮಾಡಿಲಾಗಿದ್ದ ಲಾಕ್'ಡೌನ್ ನಿನ್ನೆಯಷ್ಟೇ ಸಡಿಲಗೊಂಡಿದ್ದು, ಕೊರೋನಾ ಭಯವಿಲ್ಲದೆ ಇದೀಗ ಜನರು ಭಾರೀ ಸಂಖ್ಯೆಯಲ್ಲಿ ಬೀದಿಗಿಳಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳು ಸಾಕಷ್ಟು ಕಠಿಣವಾಗಿರಲಿದ್ದು, ಬಹಳ ಎಚ್ಚರದಿಂದಿರಬೇಕೆಂದು ಅರೋಗ್ಯಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ

ವಿಶ್ವದೆಲ್ಲೆಡೆ ಕೊರೋನಾ ಆರ್ಭಟ: ಸೋಂಕಿತರ ಸಂಖ್ಯೆ 35 ಲಕ್ಷಕ್ಕೆ ಏರಿಕೆ, 2.46 ಲಕ್ಷ ಮಂದಿ ಸಾವು
ವಿಶ್ವದೆಲ್ಲೆಡೆ ಕೊರೋನಾ ರಣಕೇಕೆ ಹಾಕುತ್ತಿದ್ದು, 35, 00,000 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಅಲ್ಲದೆ, ಮಹಾಮಾರಿ ವೈರಸ್'ಗೆ 2,46,000 ಮಂದಿ ಬಲಿಯಾಗಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.

ವಿಶ್ವದೆಲ್ಲೆಡೆ ಕೊರೋನಾ ವೈರಸ್ ಗೆ 2.25 ಲಕ್ಷ ಮಂದಿ ಸಾವು, ಸೋಂಕಿತರ ಸಂಖ್ಯೆ 31.8 ಲಕ್ಷಕ್ಕೆ ಏರಿಕೆ
ವಿಶ್ವದೆಲ್ಲೆಡೆ ಕೊರೋನಾ ವೈರಸ್ ರಣಕೇಕೆ ಹಾಕುತ್ತಿದ್ದು, ಮಹಾಮಾರಿಗೆ ವಿವಿಧ ರಾಷ್ಟ್ರಗಳಲ್ಲಿ 2.25 ಲಕ್ಷ ಮಂದಿ ಬಲಿಯಾಗಿದ್ದಾರೆ. ಅಲ್ಲದೆ, 31.8 ಲಕ್ಷ ಮಂದಿ ಸೋಂಕಿಗೊಳಗಾಗಿದ್ದಾರೆ.

ಕಲಬುರಗಿಯಲ್ಲಿ ಮುಂದುವರೆದ ಕೊರೋನಾ ಆರ್ಭಟ: ಒಂದೇ ದಿನ 8 ಪಾಸಿಟಿವ್ ಪ್ರಕರಣ ಪತ್ತೆ
ಕಲಬುರಗಿಯಲ್ಲಿ ಕೊರೋನಾ ಆಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಬುಧವಾರ ಒಂದೇ ದಿನ ನಾಲ್ಕೂವರೆ ವರ್ಷದ ಹೆಣ್ಣುಮಗು ಸೇರಿದಂತೆ ಎಂಟು ಜನರಿಗೆ ಹೊಸದಾಗಿ ಸೋಂಕು ಇರುವುದು ಪತ್ತೆಯಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯಾಬಲ 52ಕ್ಕೇರಿದ್ದು, ಹೆಮ್ಮಾರಿ ಕೊನೆಗೂ ಕಲಬುರಗಿಯಲ್ಲಿ ಅರ್ಧಶತಕ ದಾಟಿದಂತಾಗಿದೆ.

