infection

ದೇಶದಲ್ಲಿ ಕೊರೋನಾ ರಣಕೇಕೆ: ಒಂದೇ ದಿನ 9,971 ಮಂದಿಯಲ್ಲಿ ವೈರಸ್ ಪತ್ತೆ, 2.46 ಲಕ್ಷಕ್ಕೇರಿದ ಸೋಂಕಿತರ ಸಂಖ್ಯೆ, 7 ಸಾವಿರ ಗಡಿಯತ್ತ ಸಾವಿನ ಸಂಖ್ಯೆ
ಕೊರೋನಾ ವೈರಸ್ ಅಟ್ಟಹಾಸ ದೇಶದಲ್ಲಿ ಮುಂದುವರೆದಿದ್ದು, ಒಂದೇ ದಿನ 9,971 ಮಂದಿಯಲ್ಲಿ ವೈರಸ್ ದೃಢಪಟ್ಟಿದ್ದು, ಇದರೊಂದಿಗೆ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 2.46 ಲಕ್ಷಕ್ಕೇರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾನುವಾರ ಮಾಹಿತಿ ನೀಡಿದೆ.

ಕೊರೋನಾ: ರಾಜ್ಯದಲ್ಲಿ ಒಂದೇ ದಿನ 4 ಮಂದಿ ಸಾವು
ರಾಜ್ಯದಲ್ಲಿ ಕೊರೋನಾ ರಣಕೇಕೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಇದೇ ಮೊದಲ ಬಾರಿಗೆ ಒಂದೇ ದಿನ ನಾಲ್ವರು ಸೋಂಕಿತರು ಸಾವಿಗೀಡಾಗಿದ ವರದಿಯಾಗಿದೆ.

ದೇಶದಲ್ಲಿ ಒಂದೇ ದಿನ ದಾಖಲೆಯ 9,304 ಮಂದಿಗೆ ಕೊರೋನಾ, ಸೋಂಕಿತರ ಸಂಖ್ಯೆ 2.16 ಲಕ್ಷಕ್ಕೆ ಏರಿಕೆ
ದೇಶದಲ್ಲಿ ಕೊರೋನಾ ಆರ್ಭಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಒಂದೇ ದಿನ ದಾಖಲೆಯ 9,304 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2.16 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಗುರುವಾರ ಮಾಹಿತಿ ನೀಡಿದೆ.

ಕೇವಲ 7 ದಿನಗಳಲ್ಲಿ ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೋನಾ, ರಾಜ್ಯದಲ್ಲೀಗ 3,221 ಮಂದಿಗೆ ಸೋಂಕು
ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಮುಂದುವರೆಯುತ್ತಲೇ ಇದ್ದು, ಕೇವಲ 7 ದಿನಗಳಲ್ಲಿ ಬರೋಬ್ಬರಿ 1,000ಕ್ಕೂ ಹೆಚ್ಚು ಮಂದಿ ಸೋಂಕಿಗೊಳಗಾಗಿರುವ ಆತಂಕಕಾರಿ ಬೆಳವಣಿಗೆಗಳು ಕಂಡು ಬಂದಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3000 ಗಟಿ ದಾಟಿದ್ದು, 3,221ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ ಒಂದೇ ದಿನ 8,380 ಮಂದಿಗೆ ಕೊರೋನಾ ವೈರಸ್ ದೃಢ, ಸೋಂಕಿತರ ಸಂಖ್ಯೆ 1.90 ಲಕ್ಷಕ್ಕೆ ಏರಿಕೆ, 5,394 ಮಂದಿ ಸಾವು
ದೇಶದಲ್ಲಿ ಕೊರೋನಾ ರಣಕೇಕೆ ಹೆಚ್ಚಾಗುತ್ತಲೇ ಇದ್ದು, ಒಂದೇ ದಿನ ಬರೋಬ್ಬರಿ 8,380 ಮಂದಿಯಲ್ಲಿ ವೈರಸ್ ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 1.90 ಲಕ್ಷಕ್ಕೇರಿದೆ, ಅಲ್ಲದೆ, ಸಾವಿನ ಸಂಖ್ಯೆ 5,394ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೋಮವಾರ ಮಾಹಿತಿ ನೀಡಿದೆ.

ದೇಶದಲ್ಲಿ ಅಟ್ಟಹಾಸ ಮೇರೆ ಮೀರಿದ ಕೊರೋನಾ: ಒಂದೇ ದಿನ 8,380 ಮಂದಿಯಲ್ಲಿ ವೈರಸ್ ಪತ್ತೆ, 1.82 ಲಕ್ಷಕ್ಕೇರಿದ ಸೋಂಕಿತರ ಸಂಖ್ಯೆ
ದೇಶದಲ್ಲಿ ಮಹಾಮಾರಿ ಕೊರೋನಾ ವೈರಸ್ ಅಟ್ಟಹಾಸ ಮೇರೆ ಮೀರಿದ್ದು, ಒಂದೇ ದಿನ 8,000 ಮಂದಿಯಲ್ಲಿ ಸೋಂಕು ಪತ್ತೆ ಪತ್ತೆಯಾಗಿದೆ. ಅಲ್ಲದೆ. 193 ಮಂದಿ ಬಲಿಯಾಗಿದ್ದಾರೆ. ಒಂದೇ ದಿನ ಇಷ್ಟೊಂದು ಸಂಖ್ಯೆಯಲ್ಲಿ ಜನರಲ್ಲಿ ಸೋಂಕು ಪತ್ತೆಯಾಗಿರುವುದು ಇದೇ ಮೊದಲಾಗಿದ್ದು, ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1.82 ಲಕ್ಷಕ್ಕೆ ಏರಿಕೆಯಾಗಿದೆ...

ದೇಶದಲ್ಲಿ ಒಂದೇ ದಿನ 7,466 ಮಂದಿಯಲ್ಲಿ ಕೊರೋನಾ ವೈರಸ್ ದೃಢ, ಸೋಂಕಿತರ ಸಂಖ್ಯೆ 1.65 ಲಕ್ಷಕ್ಕೆ ಏರಿಕೆ
ಭಾರತದಲ್ಲಿ ಕೊರೋನಾ ಆರ್ಭಟ ಹೆಚ್ಚುತ್ತಲೇ ಇದ್ದು, ಒಂದೇ ದಿನ ಬರೋಬ್ಬರಿ 7,466 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 1.65 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶುಕ್ರವಾರ ಮಾಹಿತಿ ನೀಡಿದೆ.

ಕೊರೋನಾ ವಜ್ರಮುಷ್ಠಿಯಲ್ಲಿ ಭಾರತ: ಒಂದೇ ದಿನ 6,566 ಮಂದಿಯಲ್ಲಿ ವೈರಸ್ ದೃಢ, ಸೋಂಕಿತರ ಸಂಖ್ಯೆ 1.58 ಲಕ್ಷಕ್ಕೆ ಏರಿಕೆ
ಡೆಡ್ಲಿ ಕೊರೋನಾ ವೈರಸ್ ದಾಳಿ ಭಾರತದಲ್ಲಿ ಮುಂದುವರೆದಿದ್ದು, ಒಂದೇ ದಿನ 6,566 ಮಂದಿಯಲ್ಲಿ ವೈರಸ್ ದೃಢಪಟ್ಟಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 1.58 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಗುರುವಾರ ಮಾಹಿತಿ ನೀಡಿದೆ.

ಕೊರೋನಾ ವಜ್ರಮುಷ್ಠಿಯಲ್ಲಿ ಇಡೀ ವಿಶ್ವ: 55 ಲಕ್ಷ ಗಡಿಯತ್ತ ಸೋಂಕಿತರ ಸಂಖ್ಯೆ, 3.43 ಲಕ್ಷ ಮಂದಿ ಸಾವು
ಡೆಡ್ಲಿ ಕೊರೋನಾ ವೈರಸ್ ದಾಳಿಗೆ ಇಡೀ ವಿಶ್ವವೇ ನಲುಗಿ ಹೋಗಿದ್ದು, ಸುಮಾರು 250ಕ್ಕೂ ಹೆಚ್ಚು ರಾಷ್ಟ್ರಗಳು ಮಹಾಮಾರಿಯ ವಜ್ರಮುಷ್ಟಿಯಲ್ಲಿ ನಲುಗುತ್ತಿವೆ. ಈ ವರೆಗೆ ವಿಶ್ವದಾದ್ಯಂತ 3.43 ಲಕ್ಷ ಜನರು ಹೆಮ್ಮಾರಿ ವೈರಸ್'ಗೆ ಬಲಿಯಾಗಿದ್ದು, ಸೋಂಕಿತರ ಸಂಖ್ಯೆ 55 ಲಕ್ಷ ಗಡಿಯತ್ತ ಸಾಗುತ್ತಿದೆ.

