infection

ಕೋವಿಡ್-19: ದೇಶದಲ್ಲಿ ಒಂದೇ ದಿನ 52,972 ಕೇಸ್ ಪತ್ತೆ; ಸೋಂಕಿತರ ಸಂಖ್ಯೆ 18 ಲಕ್ಷ, 38,135 ಮಂದಿ ಸಾವು
ಭಾರತದಲ್ಲಿ ಕೊರೋನಾ ಆರ್ಭಟ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 52,972 ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೋಮವಾರ ಮಾಹಿತಿ ನೀಡಿದೆ.

ದೇಶಾದ್ಯಂತ 24 ಗಂಟೆಗಳಲ್ಲಿ 4,63,172 ಕೋವಿಡ್ ಪರೀಕ್ಷೆ, ಒಟ್ಟಾರೆ 1,98,21,831 ಸ್ಯಾಂಪಲ್ ಪರೀಕ್ಷೆ: ಐಸಿಎಂಆರ್
ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದೇಶದಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿರುವಂತೆಯೇ ಇತ್ತ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ 24 ಗಂಟೆಗಳಲ್ಲಿ ದೇಶಾದ್ಯಂತ 4,63,172 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಮಾಹಿತಿ ನೀಡಿದೆ.

ಭಾರತದಲ್ಲಿ ಮುಂದುವರೆದ ಕೊರೋನಾ ಆರ್ಭಟ: ಒಂದೇ ದಿನ 54,736 ಕೇಸ್ ಪತ್ತೆ, 17.5 ಲಕ್ಷಕ್ಕೇರಿದ ಸೋಂಕಿತರ ಸಂಖ್ಯೆ, 37,364 ಮಂದಿ ಬಲಿ
ಭಾರತದಲ್ಲಿ ಕೊರೋನಾ ಆರ್ಭಟ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 54,736 ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾನುವಾರ ಮಾಹಿತಿ ನೀಡಿದೆ.

ರಾಜ್ಯದಲ್ಲಿ ಏರುತ್ತಲೇ ಇದೆ ಕೊರೋನಾ ಆರ್ಭಟ: 1.29 ಲಕ್ಷಕ್ಕೇರಿದ ಸೋಂಕಿತರ ಸಂಖ್ಯೆ
ರಾಜ್ಯದಲ್ಲಿ ಕೊರೋನಾ ವೈರಸ್ ಆರ್ಭಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಜುಲೈ ಒಂದೇ ತಿಂಗಳಿನಲ್ಲಿ 1 ಲಕ್ಷ ಕೊರೋನಾ ಕೇಸ್ ದಾಖಲಾಗಿದೆ. ಈ ನಡುವೆ ಆಗಸ್ಟ್ ತಿಂಗಳಿನಲ್ಲಿಯೂ ಕೊರೋನಾ ಸ್ಫೋಟಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.

ದೇಶಾದ್ಯಂತ ಒಂದೇ ದಿನ 57,117 ಮಂದಿಯಲ್ಲಿ ಕೊರೋನಾ ವೈರಸ್ ಪತ್ತೆ, ಸೋಂಕಿತರ ಸಂಖ್ಯೆ 16.9 ಲಕ್ಷ
ಹೊಸ ಕೊರೋನಾ ಕೇಸುಗಳ ಪ್ರಮಾಣದಲ್ಲಿ ಶನಿವಾರ ಮತ್ತೊಂದು ದಾಖಲೆ ನಿರ್ಮಾಣವಾಗಿದೆ. ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 57,117 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, ಇದು ಈವರೆಗಿನ ದೈನಂದಿನ ದಾಖಲೆಯಾಗಿದೆ.

ದೇಶದಲ್ಲಿ ಒಂದೇ ದಿನ 52,123 ಕೊರೋನಾ ಕೇಸ್; ಸೋಂಕಿತರ ಸಂಖ್ಯೆ 15.8 ಲಕ್ಷ, 10 ಲಕ್ಷಕ್ಕೂ ಹೆಚ್ಚು ಮಂದಿ ಗುಣಮುಖ
ದೇಶದಲ್ಲಿ ಕೊರೋನಾ ಸ್ಫೋಟಗೊಂಡಿದ್ದು, ಮತ್ತೊಮ್ಮೆ ದಾಖಲೆಯ ಜಿಗಿತಕಂಡಿದೆ. ಗುರುವಾರ ಬರೋಬ್ಬರಿ 52,123 ಮಂದಿಯಲ್ಲಿ ಸೊಂಕು ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 15,83,792ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ವಿಶ್ವದಲ್ಲೆಡೆ ಕೊರೋನಾ ರೌದ್ರನರ್ತನ: ಸೋಂಕು ಪೀಡಿತರ ಸಂಖ್ಯೆ 1.71 ಕೋಟಿಗೆ ಏರಿಕೆ
ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ವಿಶ್ವಾದ್ಯಂತ 1.71 ಕೋಟಿ ಮೀರಿದೆ. ಈ ಕಾಯಿಲೆಯಿಂದ 669,235 ಕ್ಕೂ ಹೆಚ್ಚು ಸಾವುಗಳು ದಾಖಲಾಗಿವೆ ಎಂದು ವಲ್ಡೋಮೀಟರ್ ಡೇಟಾ ವರದಿಗಳು ತಿಳಿಸಿವೆ.

ಕೋವಿಡ್-19: ಪ್ರತಿದಿನ ತನ್ನ ದಾಖಲೆಯನ್ನು ತಾನೇ ಮುರಿಯುತ್ತಿರುವ ಕರ್ನಾಟಕ, ಕೊರೋನಾ ಪಾಸಿಟಿವ್ ದುಪ್ಪಟ್ಟು!
ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ಹೆಚ್ಚಾಗುತ್ತಲೇ ಇದ್ದು, ಪ್ರತೀನಿತ್ಯ ಕರ್ನಾಟಕ ತನ್ನ ದಾಖಲೆಯನ್ನು ತಾನೇ ಮುರಿಯುತ್ತಿದೆ. ರಾಜ್ಯದಲ್ಲಿ ಸೋಂಕಿನ ಸರಾಸರಿ ಪಾಸಿಟಿವಿಟಿ ಪ್ರಮಾಣ ದುಪ್ಪಟ್ಟಾಗಿದೆ.

ದೇಶಾದ್ಯಂತ ಒಂದೇ ದಿನ 48,513 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆ; ಸೋಂಕಿತರ ಸಂಖ್ಯೆ 15 ಲಕ್ಷ, 34,193 ಮಂದಿ ಸಾವು
ಭಾರತದಲ್ಲಿ ಕೊರೋನಾ ವೈರಸ್ ತನ್ನ ಆರ್ಭಟವನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತಲೇ ಇದ್ದು, ಒಂದೇ ದಿನ 48,513 ಮಂದಿಯಲ್ಲಿ ಸೋಂಕು ಪತ್ತೆಯಾಗುವುದರೊಂದಿದೆ, ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 15 ಲಕ್ಷ ಗಡಿ ದಾಟಿದೆ.

