infection

ರಾಜ್ಯದಲ್ಲಿ 1 ಲಕ್ಷದ ಸನಿಹಕ್ಕೆ ಸಕ್ರಿಯ ಕೊರೋನಾ ಪ್ರಕರಣ
ರಾಜ್ಯ

ರಾಜ್ಯದಲ್ಲಿ 1 ಲಕ್ಷದ ಸನಿಹಕ್ಕೆ ಸಕ್ರಿಯ ಕೊರೋನಾ ಪ್ರಕರಣ

ರಾಜ್ಯದಲ್ಲಿ ಶುಕ್ರವಾರ 9280 ಕೊರೋನಾ ಪ್ರಕರಣಗಳು ದೃಢಪಡುವುದರೊಂದಿಗೆ ಸಕ್ರಿಯ ಸೋಂಕಿತರ ಸಂಖ್ಯೆ 99,101ಕ್ಕೆ ತಲುಪಿದೆ. ಇದೇ ವೇಳೆ 116 ಮಂದಿ ಸಾವನ್ನಪ್ಪುವುದರೊಂದಿಗೆ ಒಟ್ಟು ಸಾವಿನ ಸಂಖ್ಯೆ 6170ಕ್ಕೆ ತಲುಪಿದೆ. 

ಭಾರತದಲ್ಲಿ ಕೊರೋನಾ ಅಬ್ಬರ: ಒಂದೇ ದಿನ ಸಾರ್ವಕಾಲಿಕ ದಾಖಲೆಯ 86,432 ಕೇಸ್ ಪತ್ತೆ, 40 ಲಕ್ಷ ಗಡಿದಾಟಿದ ಸೋಂಕಿತರ ಸಂಖ್ಯೆ
ದೇಶ

ಭಾರತದಲ್ಲಿ ಕೊರೋನಾ ಅಬ್ಬರ: ಒಂದೇ ದಿನ ಸಾರ್ವಕಾಲಿಕ ದಾಖಲೆಯ 86,432 ಕೇಸ್ ಪತ್ತೆ, 40 ಲಕ್ಷ ಗಡಿದಾಟಿದ ಸೋಂಕಿತರ ಸಂಖ್ಯೆ

ದೇಶದಲ್ಲಿ ದಿನೇದಿನೇ ಕೊರೋನಾ ಸೋಂಕು ಹೆಚ್ಚಳವಾಗುತ್ತಿದ್ದು, ಶನಿವಾರ ಸಾರ್ವಕಾಲಿಕ ದಾಖಲೆಯ 86,432 ಸೋಂಕಿತರು ಪತ್ತೆಯಾಗಿದ್ದಾರೆ. ಇದು ಕೊರೋನಾ ತವರು ಚೀನಾದಲ್ಲಿ ಕಳೆದ 10 ತಿಂಗಳ ಅವಧಿಯಲ್ಲಿ ದಾಖಲಾದ (85, 102) ಪ್ರಕರಣಗಳಿಂತಲೂ ಹೆಚ್ಚು ಎನ್ನುವುದು ಗಮನಾರ್ಹ ವಿಚಾರವಾಗಿದೆ. 

ಬ್ರೆಜಿಲ್'ನಲ್ಲಿ ಕೊರೋನಾ ಅಬ್ಬರ: 40 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ
ವಿದೇಶ

ಬ್ರೆಜಿಲ್'ನಲ್ಲಿ ಕೊರೋನಾ ಅಬ್ಬರ: 40 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ

ಮಹಾಮಾರಿ ಕೊರೋನಾ ವೈರಸ್ ಬ್ರೆಜಿಲ್ ನಲ್ಲಿ ತನ್ನ ರೌದ್ರನರ್ತನವನ್ನು ಮುಂದುವರೆಸಿದ್ದು, ಸೋಂಕಿತರ ಸಂಖ್ಯೆ 40 ಲಕ್ಷ ಗಡಿ ದಾಟಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ದೇಶದಲ್ಲಿ ಮತ್ತೆ ಕೊರೋನಾ ಸ್ಫೋಟ: ಒಂದೇ ದಿನ 83,341 ಕೇಸ್ ಪತ್ತೆ, ಬ್ರೆಜಿಲ್ ಹಿಂದಿಕ್ಕಿ 2ನೇ ಸ್ಥಾನಕ್ಕೇರುವತ್ತ ಭಾರತ ಹೆಜ್ಜೆ
ದೇಶ

ದೇಶದಲ್ಲಿ ಮತ್ತೆ ಕೊರೋನಾ ಸ್ಫೋಟ: ಒಂದೇ ದಿನ 83,341 ಕೇಸ್ ಪತ್ತೆ, ಬ್ರೆಜಿಲ್ ಹಿಂದಿಕ್ಕಿ 2ನೇ ಸ್ಥಾನಕ್ಕೇರುವತ್ತ ಭಾರತ ಹೆಜ್ಜೆ

ದೇಶದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಮತ್ತೊಮ್ಮೆ ದಾಖಲೆಯ ಏರಿಕೆ ಕಂಡಿವೆ. ಶುಕ್ರವಾರ ಒಂದೇ ದಿನ 83,341 ಸೋಂಕಿತರು ಪತ್ತೆಯಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಕೊರೋನಾಪೀಡಿತರ ಸಂಖ್ಯೆ 39 ಲಕ್ಷ ಗಡಿದಾಟಿದೆ. ಈ ಮೂಲಕ ಭಾರತ ಅತೀ ಹೆಚ್ಚು ಕೊರೋನಾ ಪ್ರಕರಣ ದಾಖಲಾದ ದೇಶಗಳ ಪೈಕಿ 2ನೇ ಸ್ಥಾನದಲ್ಲಿರುವ ಬ್ರೆಜಿಲ್ (40.01ಲಕ್ಷ ಕೇಸ್) ಅನ್ನು ಹಿಂದಿಕ್ಕುವ ಸನಿಹದಲ್ಲಿದೆ.

ದೇಶದಲ್ಲಿ ಮುಂದುವರೆದ ಕೊರೋನಾ ಅಟ್ಟಹಾಸ: ಅಮೆರಿಕಾವನ್ನು ಹಿಂದಿಕ್ಕಿದ ಭಾರತ, ಒಂದೇ ದಿನ ದಾಖಲೆಯ 83,883 ಮಂದಿಯಲ್ಲಿ ಸೋಂಕು ಪತ್ತೆ!
ದೇಶ

ದೇಶದಲ್ಲಿ ಮುಂದುವರೆದ ಕೊರೋನಾ ಅಟ್ಟಹಾಸ: ಅಮೆರಿಕಾವನ್ನು ಹಿಂದಿಕ್ಕಿದ ಭಾರತ, ಒಂದೇ ದಿನ ದಾಖಲೆಯ 83,883 ಮಂದಿಯಲ್ಲಿ ಸೋಂಕು ಪತ್ತೆ!

ಮಾರಕ ಕೊರೋನಾ ವೈರಸ್‌ ಹೆಮ್ಮಾರಿ ಭಾರತದಲ್ಲಿ ತನ್ನ ರೌದ್ರನರ್ತನವನ್ನು ಮುಂದುವರಿಸಿದ್ದು, ಗುರುವಾರ ವಿಶ್ವ ದಾಖಲೆ ಬರೆದಿದೆ. ಒಂದೇ ದಿನ ದೇಶದಲ್ಲಿ ದಾಖಲೆಯ 83,883 ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ. ಇದು ಕೊರೋನಾ ವೈರಸ್‌ ಆರಂಭವಾದ ಬಳಿಕ ಜಗತ್ತಿನ ಯಾವುದೇ ದೇಶದಲ್ಲಿ ದಾಖಲಾದ ದೈನಂದಿನ ಅತಿ ಗರಿಷ್ಠ ಸಂಖ್ಯೆಯ ಸೋಂಕು ಎನಿಸಿಕೊಂಡಿದೆ.

ಭಾರತದಲ್ಲಿ ಮುಂದುವರೆದ ಕೊರೋನಾ ಆರ್ಭಟ: ಒಂದೇ ದಿನ 78,357 ಕೇಸ್, 1045 ಸಾವು
ದೇಶ

ಭಾರತದಲ್ಲಿ ಮುಂದುವರೆದ ಕೊರೋನಾ ಆರ್ಭಟ: ಒಂದೇ ದಿನ 78,357 ಕೇಸ್, 1045 ಸಾವು

ಕೊರೋನಾ ವೈರಸ್ ಪ್ರಕರಣಗಳ ಏರುಗತಿ ಮುಂದುವರೆದಿದ್ದು, ಬುಧವಾರ ಒಂದೇ ದಿನ 78,357 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಈ ಮೂಲಕ ಕೊರೋನಾ ಸೋಂಕಿತರ ಸಂಖ್ಯೆ 37,69,524ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ. 

ಕೋವಿಡ್-19: ಭಾರತದಲ್ಲಿ 24 ಗಂಟೆಗಳಲ್ಲಿ 69,921 ಜನರಿಗೆ ಸೋಂಕು, 819 ಮಂದಿ ಬಲಿ, 65 ಸಾವಿರ ಗಡಿ ದಾಟಿದ ಸಾವಿನ ಸಂಖ್ಯೆ
ದೇಶ

ಕೋವಿಡ್-19: ಭಾರತದಲ್ಲಿ 24 ಗಂಟೆಗಳಲ್ಲಿ 69,921 ಜನರಿಗೆ ಸೋಂಕು, 819 ಮಂದಿ ಬಲಿ, 65 ಸಾವಿರ ಗಡಿ ದಾಟಿದ ಸಾವಿನ ಸಂಖ್ಯೆ

ಕಳೆದ ಕೆಲವು ದಿನಗಳಿಂದ ದಾಖಲೆಯ ಪ್ರಮಾಣದಲ್ಲಿ ಏರಿಕೆ ದಾಖಲಿಸಿದ್ದ ಕೊರೋನಾ ವೈರಸ್ ಪ್ರಕರಣಗಳು ಕೊಂಚ ಇಳಿಕೆ ಕಂಡಿದೆ. ಮಂಗಳವಾರ 69,921 ಮಂದಿಯಲ್ಲಿ ಸೋಂಕು ಕಂಡುಬಂದಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 36,91,167ಕ್ಕೆ ಏರಿಕೆಯಾಗಿದೆ. 

ಕರ್ನಾಟಕದಲ್ಲಿ ಟ್ರಾವೆಲ್ ಹಿಸ್ಟರಿ, ಸೋಂಕಿತರ ಸಂಪರ್ಕವೇ ಇಲ್ಲದ 1 ಲಕ್ಷ ಮಂದಿಗೆ ಕೊರೋನಾ ಸೋಂಕು!
ರಾಜ್ಯ

ಕರ್ನಾಟಕದಲ್ಲಿ ಟ್ರಾವೆಲ್ ಹಿಸ್ಟರಿ, ಸೋಂಕಿತರ ಸಂಪರ್ಕವೇ ಇಲ್ಲದ 1 ಲಕ್ಷ ಮಂದಿಗೆ ಕೊರೋನಾ ಸೋಂಕು!

ರಾಜ್ಯದಲ್ಲಿ ಕೊರೋನಾ ರಣಕೇಕೆ ಹಾಕುತ್ತಿದ್ದು, ಒಂದೇ ದಿನ 8,852 ಮಂದಿಯಲ್ಲಿ ಸೋಂಕು ಪ್ರಕರಣಗಳು ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,35,928ಕ್ಕೆ ಏರಿಕೆಯಾಗಿದ್ದು, ಇದರಲ್ಲಿ ಟ್ರಾವೆಲ್ ಹಿಸ್ಟರಿ, ಸೋಂಕಿತರ ಸಂಪರ್ಕವೇ ಇಲ್ಲದ 1 ಲಕ್ಷ ಮಂದಿಯಲ್ಲಿ ಕೊರೋನಾ ಕಾಣಿಸಿಕೊಂಡಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ದೇಶದಲ್ಲಿ ಮುಂದುವರೆದ ಕೊರೋನಾ ಸ್ಫೋಟ: ಒಂದೇ ದಿನ 78,512 ಕೇಸ್ ಪತ್ತೆ, 36 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ
ದೇಶ

ದೇಶದಲ್ಲಿ ಮುಂದುವರೆದ ಕೊರೋನಾ ಸ್ಫೋಟ: ಒಂದೇ ದಿನ 78,512 ಕೇಸ್ ಪತ್ತೆ, 36 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ

ದಾಖಲೆ ಪ್ರಮಾಣದಲ್ಲಿ ನಡೆಯುತ್ತಿರುವ ಪರೀಕ್ಷೆ ಹಾಗೂ ಜನಜೀವನ ಸಹಜ ಸ್ಥಿತಿಯತ್ತ ದಾಪುಗಾಲು ಹಾಕುತ್ತಿರುವ ಹಿನ್ನೆಲೆಯಲ್ಲಿ ಕೊರೋನಾ ವೈರಸ್ ಪೀಡಿತರ ಸಂಖ್ಯೆ ದೇಶದಲ್ಲಿ ಹೊಸ ದಾಖಲೆಯತ್ತ ಸಾಗುತ್ತಿದೆ. ಸೋಮವಾರ ಒಂದೇ ದಿನ ದೇಶದಲ್ಲಿ ಬರೋಬ್ಬರಿ 78,512 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.