infection

ಕೋವಿಡ್-19: ಭಾರತದಲ್ಲಿಂದು 63,371 ಕೇಸ್ ಪತ್ತೆ, ಒಟ್ಟು ಸೋಂಕಿತರ ಸಂಖ್ಯೆ 73 ಲಕ್ಷ
ಭಾರತದಲ್ಲಿ ಶುಕ್ರವಾರ 63,371 ಕೊರೋನಾ ಸೋಂಕಿತರು ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 73,70,469ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಕೋವಿಡ್-19: ಭಾರತದಲ್ಲಿ ಒಂದೇ ದಿನ 63,509 ಕೇಸ್ ಪತ್ತೆ, ಸೋಂಕಿತರ ಸಂಖ್ಯೆ 72 ಲಕ್ಷ, 1,10,586 ಮಂದಿ ಸಾವು
ದೇಶದಲ್ಲಿ ಒಂದೇ ದಿನ 63,509 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 72 ಲಕ್ಷ ಗಡಿದಾಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರ ಮಾಹಿತಿ ನೀಡಿದೆ.

ವಿಶ್ವದಾದ್ಯಂತ ಕೊರೋನಾ ಅಬ್ಬರ: ಜಾಗತಿಕ ಕೊವಿಡ್ ಪ್ರಕರಣಗಳ ಸಂಖ್ಯೆ 3 ಕೋಟಿ 80 ಲಕ್ಷ
ಜಾಗತಿಕ ಕೊವಿಡ್ ಪ್ರಕರಣಗಳ ಸಂಖ್ಯೆ 3 ಕೋಟಿ 780 ಲಕ್ಷ ದಾಟಿದ್ದು, ಸಾವಿನ ಸಂಖ್ಯೆ 1,084,888 ಕ್ಕೆ ಏರಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವರದಿ ತಿಳಿಸಿದೆ.

ಭಾರತದಲ್ಲಿ ಇಳಿಯುತ್ತಿದೆ ಕೊರೋನಾ ಅಲೆ: 24 ಗಂಟೆಗಳಲ್ಲಿ 55,342 ಕೇಸ್ ಪತ್ತೆ, ಸೋಂಕಿತರ ಸಂಖ್ಯೆ 71 ಲಕ್ಷ
ಭಾರತಕ್ಕೆ ಕೊರೋನಾ ಕಾಲಿಟ್ಟು ಅನಾಮತ್ತು 7 ತಿಂಗಳ ಬಳಿಕ ಇದೇ ಮೊದಲ ಬಾರಿ ವೈರಸ್ ಸೋಂಕು ಇಳಿಮುಖವಾಗುತ್ತಿರುವ ಬೆಳವಣಿಗೆಗಳು ಕಂಡು ಬರುತ್ತಿದೆ. ದೇಶದಲ್ಲಿ ಮಂಗಳವಾರ ಹಲವು ತಿಂಗಳುಗಳ ಬಳಿಕ ಕನಿಷ್ಟ ಕೊರೋನಾ ಪ್ರಕರಣಗಳು ವರದಿಯಾಗಿವೆ.

ಕೋವಿಡ್-19: ದೇಶಾದ್ಯಂತ 24 ಗಂಟೆಗಳಲ್ಲಿ 66,732 ಕೇಸ್ ಪತ್ತೆ, ಸೋಂಕಿತರ ಸಂಖ್ಯೆ 71 ಲಕ್ಷ
ದೇಶದಲ್ಲಿ ಕೊರೋನಾ ಅಬ್ಬರ ದಿನದಿಂದ ದಿನಕ್ಕೆ ಇಳಿಯುತ್ತಿರುವ ಬೆಳವಣಿಗೆಗಳು ಕಂಡು ಬರುತ್ತಿವೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 66,732 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 71 ಲಕ್ಷ ಗಡಿದಾಟಿದೆ.

ಜಾಗತಿಕ ಕೋವಿಡ್-19 ಪ್ರಕರಣಗಳ ಸಂಖ್ಯೆ 3 ಕೋಟಿ 77 ಲಕ್ಷ!
ಜಾಗತಿಕವಾಗಿ ಕೊವಿಡ್ ನ ಪ್ರಕರಣಗಳ ಸಂಖ್ಯೆ ಸೋಮವಾರದ ವೇಳೆಗೆ 3 ಕೋಟಿ 77 ಲಕ್ಷ ತಲುಪಿದ್ದುದ್ದು ಸಾವಿನ ಸಂಖ್ಯೆ 1,081,453ಕ್ಕೆ ಏರಿಕೆಯಾಗಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವರದಿ ತಿಳಿಸಿದೆ.

ದೇಶದಲ್ಲಿ ಉತ್ತುಂಗದಿಂದ ಇಳಿಯುತ್ತಿರುವ ಕೊರೋನಾ; 24 ಗಂಟೆಗಳಲ್ಲಿ 74,383 ಕೇಸ್ ಪತ್ತೆ, 70 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ
ದೇಶದಲ್ಲಿ ಮತ್ತೊಮ್ಮೆ ದೈನಂದಿನ ಕೊರೋನಾ ವೈರಸ್ ಪ್ರಕರಣಗಳಿಗಿಂತಲೂ ಹೆಚ್ಚಿನ ಚೇತರಿಕೆ ಪ್ರಮಾಣ ದಾಖಲಾಗಿದೆ. ದೇಶದಲ್ಲಿ ಒಂದೇ ದಿನ 74,383 ಹೊಸ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 70,53,807ಕ್ಕೆ ಏರಿಕೆಯಾಗಿದೆ ಎಂದು ಭಾನುವಾರ ತಿಳಿದುಬಂದಿದೆ.

ಕೋವಿಡ್-19: ದೇಶಾದ್ಯಂತ 24 ಗಂಟೆಗಳಲ್ಲಿ 73,272 ಕೇಸ್ ಪತ್ತೆ, ಸೋಂಕಿತರ ಸಂಖ್ಯೆ 69.79 ಲಕ್ಷ
ದೇಶದಲ್ಲಿ ಶನಿವಾರ 73,272 ಕೊರೋನಾ ವೈರಸ್ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 69,79,424ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ದೇಶದಲ್ಲಿ ತಗ್ಗುತಿರುವ ಕೊರೋನಾ ಅಲೆ: 24 ಗಂಟೆಗಳಲ್ಲಿ 70,496 ಕೇಸ್ ಪತ್ತೆ, ಸಕ್ರಿಯ ಪ್ರಕರಣ 8.93 ಲಕ್ಷಕ್ಕೆ ಇಳಿಕೆ
ಭಾರತದಲ್ಲಿ ಕೊರೋನಾ ವೈರಸ್'ನ ಮೊದಲ ಅಲೆ ತಗ್ಗಿದೆ ಎನ್ನುವುದಕ್ಕೆ ಇಂಬು ನೀಡುವಂತಹ ಬೆಳವಣಿಗೆ ಕಂಡುಬಂದಿದೆ. ಶುಕ್ರವಾರ 70,496 ಜನರಲ್ಲಿ ಮಾತ್ರ ಸೋಂಕು ಕಂಡು ಬಂದಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 69,06,152ಕ್ಕೆ ಏರಿಕೆಯಾಗಿದೆ.

