Indians

ಸಿರಿಯಾದಲ್ಲಿ ಭುಗಿಲೆದ್ದ ಹಿಂಸಾಚಾರ: ಕೂಡಲೇ ದೇಶ ತೊರೆಯಿರಿ; ಭಾರತೀಯರಿಗೆ ವಿದೇಶಾಂಗ ಸಚಿವಾಲಯ ಸೂಚನೆ!
ಸಿರಿಯಾದಲ್ಲಿ ರಷ್ಯಾ ಹಾಗೂ ಇರಾನ್ ಬೆಂಬಲಿತ ಬಶರ್ ಅಲ್ ಅಸ್ಸಾದ್ ನೇತೃತ್ವದ ಸರ್ಕಾರವಿದೆ. ಆದರೆ, ಈ ಸರ್ಕಾರ ವಿರುದ್ಧ ಸ್ಥಳೀಯ ಇಸ್ಲಾಮಿಕ್ ಭಯೋತ್ಪಾದಕ ಗುಂಪು ತಿರುಗಿ ಬಿದ್ದಿದೆ.

ಸ್ವಇಚ್ಛೆಯಿಂದಲೇ ರಷ್ಯಾ ಸೇನೆಗೆ ಭಾರತೀಯರ ಸೇರ್ಪಡೆ : ಭಾರತೀಯ ಮೂಲದ ರಷ್ಯಾ ಶಾಸಕ ಹೇಳಿಕೆ
ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡಿದ ಅಭಯ್ ಕುಮಾರ್ ಸಿಂಗ್ ಬೇರೆ ನೌಕರಿಯಂತೆ ರಷ್ಯಾದ ಸೈನ್ಯಕ್ಕೆ ಸೇರಲು ಬಯಸುವ ಜನರು ಪ್ರಪಂಚದಾದ್ಯಂತ ಇದ್ದಾರೆ ಎಂದು ತಿಳಿಸಿದರು.

ಭಾರತದೊಂದಿಗೆ ಬಾಂಧವ್ಯ ಮತ್ತಷ್ಟು ಬಲಪಡಿಸುತ್ತೇವೆ; ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿ ಖಂಡನೀಯ: ಡೊನಾಲ್ಡ್ ಟ್ರಂಪ್
ಭಾರತೀಯರಿಗೆ ದೀಪಾವಳಿ ಶುಭಾಶಯ ತಿಳಿಸಿದ ಅವರು, ತಮ್ಮ ಉತ್ತಮ ಸ್ನೇಹಿತ ಎಂದು ಕರೆಯುವ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಮುಂದಿನ ದಿನಗಳಲ್ಲಿ ಪಾಲುದಾರಿಕೆಯನ್ನು ಹೆಚ್ಚಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ 10 ಜನರ ಪೈಕಿ ಮೂವರಲ್ಲಿ ನಾನ್-ಆಲ್ಕೋಲಿಕ್ ಫ್ಯಾಟಿ ಲಿವರ್ ಡಿಸೀಸ್: ಸರ್ಕಾರದ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ
ಕೇಂದ್ರ ಸರ್ಕಾರ ಶುಕ್ರವಾರ NAFLD ನ ಪರಿಷ್ಕೃತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಇದು ಜಾಗತಿಕವಾಗಿ ಸಾಮಾನ್ಯ ದೀರ್ಘಕಾಲದ ಪಿತ್ತಜನಕಾಂಗದ ಕಾಯಿಲೆಯಾಗಿದ್ದು, ಪ್ರಪಂಚದಾದ್ಯಂತ ಮೂರನೇ ಒಂದು ಭಾಗದಷ್ಟು ಯುವಕರ ಮೇಲೆ ಪರಿಣಾಮ ಬೀರುತ್ತದೆ ಎಂದು ಅಂದಾಜಿಸಲಾಗಿದೆ.

ಬದಲಾಗುತ್ತಿರುವ ಜಾಗತಿಕ ಜನಸಂಖ್ಯಾ ರಚನೆಯಲ್ಲಿ ಭಾರತೀಯರ ಎದುರಿಗಿರುವ ಭವಿಷ್ಯವೇನು? (ತೆರೆದ ಕಿಟಕಿ)
ಉತ್ತರ ಪ್ರದೇಶ ಮತ್ತು ಬಿಹಾರದಂಥ ರಾಜ್ಯಗಳು ಜನಸಂಖ್ಯೆ ದರ ಹಾಗೆಯೇ ಇಟ್ಟುಕೊಂಡು ಹೆಚ್ಚು-ಹೆಚ್ಚು ‘ಮತದಾರ’ರನ್ನು ಸೃಷ್ಟಿಸುತ್ತ ಹೋದಂತೆಲ್ಲ ನಾವೆಲ್ಲ ಕೇವಲ ಜಿಎಸ್ಟಿ-ಆದಾಯ ತೆರಿಗೆಗಳನ್ನು ಕಟ್ಟಿಕೊಂಡು ಬೇರೆಯವರನ್ನು ಪೊರೆಯುವ ಕೆಲಸವಾಗಿಬಿಡುತ್ತದಲ್ಲವೇ ಎಂಬುದು ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳ ಆತಂಕವಾಗಿದೆ.

ಪ್ರಜಾಪ್ರಭುತ್ವ ಮತ್ತು ಬಹುತ್ವಕ್ಕೆ ಪರಸ್ಪರ ಬದ್ಧತೆಯಿಂದ ಭಾರತ-ಪೋಲೆಂಡ್ ಸಂಬಂಧ ವೃದ್ಧಿ: ವಾರ್ಸಾದಲ್ಲಿ ಪ್ರಧಾನಿ ಮೋದಿ ಮಾತು
ರಷ್ಯಾ ಮತ್ತು ಉಕ್ರೇನ್ ಎರಡು ವರ್ಷಗಳ ಕಾಲ ಯುದ್ಧದಲ್ಲಿ ತೊಡಗಿದ್ದರೂ ಸಹ, ರಷ್ಯಾ ಮತ್ತು ಪಾಶ್ಚಾತ್ಯ ದೇಶಗಳೊಂದಿಗೆ ಭಾರತ ನಿಕಟ ಸಂಪರ್ಕ ಹೊಂದಿದೆ ಎಂದಿದ್ದಾರೆ.

ತುರ್ತು ಪರಿಸ್ಥಿತಿ ಕಾಲದಿಂದಲೂ ಜನಸಂಖ್ಯಾ ನಿಯಂತ್ರಣದತ್ತ ಗಮನ ಹರಿಸದ ಭಾರತೀಯರು- ನಾರಾಯಣ ಮೂರ್ತಿ
'ಭಾರತವು ಜನಸಂಖ್ಯೆ, ತಲಾ ಭೂಮಿ ಲಭ್ಯತೆ ಮತ್ತು ಆರೋಗ್ಯ ಸೌಲಭ್ಯಗಳಿಗೆ ಸಂಬಂಧಿಸಿದ ಮಹತ್ವದ ಸವಾಲುಗಳನ್ನು ಎದುರಿಸುತ್ತಿದೆ'

ಜಾಗರೂಕರಾಗಿರಿ, ಮನೆಯ ಹತ್ತಿರವೇ ಇರಿ: ಇಸ್ರೇಲ್ ನಲ್ಲಿರುವ ಭಾರತೀಯರಿಗೆ ಭಾರತ ಸಲಹೆ
ಭಾರತೀಯ ಪ್ರಜೆಗಳಿಗೆ ಲೆಬನಾನ್‌ಗೆ ಪ್ರಯಾಣಿಸದಂತೆ ಮತ್ತು ಲೆಬನಾನ್‌ನಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳು ತಕ್ಷಣವೇ ಅಲ್ಲಿಂದ ಹೊರಡಲು ಸಲಹೆ ನೀಡಲಾಗಿದೆ" ಎಂದು ಬೈರುತ್‌ನಲ್ಲಿರುವ ಕಚೇರಿ ಪ್ರಕಟಣೆ ತಿಳಿಸಿದೆ.

ರಷ್ಯಾ ಸೇನೆಯಲ್ಲಿರುವ 50 ಭಾರತೀಯರು ಶೀಘ್ರದಲ್ಲಿಯೇ ಬಿಡುಗಡೆ: MEA
ರಷ್ಯಾ ಸೇನೆಯಿಂದ ಬಿಡುಗಡೆಯಾಗಲು ಬಯಸುವ 50 ಭಾರತೀಯ ಪ್ರಜೆಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಅವರ ಕುಟುಂಬಸ್ಥರು ಕೂಡಾ ನಮ್ಮನ್ನು ಭೇಟಿಯಾಗಿದ್ದಾರೆ. ಈ ನಿರ್ದಿಷ್ಟ ಸಮಸ್ಯೆಯನ್ನು ನಾಯಕತ್ವದ ಮಟ್ಟ ಸೇರಿದಂತೆ ಎಲ್ಲಾ ಹಂತಗಳಲ್ಲಿ ಎತ್ತಿದ್ದೇವೆ ಎಂದು ಅವರು ಹೇಳಿದರು.

