Indian Army

ಮಣಿಪುರ: ಮಯನ್ಮಾರ್ ಗೆ ಪಲಾಯನ ಮಾಡಿದ್ದ 200ಕ್ಕೂ ಹೆಚ್ಚು ಮೆಯ್ಟೀ ಸಮುದಾಯದವರು ಮರಳಿ ರಾಜ್ಯಕ್ಕೆ- ಸಿಎಂ ಬಿರೇನ್ ಸಿಂಗ್
ಮಣಿಪುರ ಜನಾಂಗೀಯ ಹಿಂಸಾಚಾರದಿಂದ ಜೀವ ಉಳಿಸಿಕೊಳ್ಳಲು ನೆರೆಯ ಮಯನ್ಮಾರ್ ದೇಶಕ್ಕೆ ಪಲಾಯನ ಮಾಡಿದ್ದ 200ಕ್ಕೂ ಅಧಿಕ ಮೆಯ್ಟೀ ಸಮುದಾಯದವರು ಮರಳಿ ರಾಜ್ಯಕ್ಕೆ ಸುರಕ್ಷಿತವಾಗಿ ಆಗಮಿಸಿದ್ದಾರೆ ಎಂದು ಸಿಎಂ ಬಿರೇನ್ ಸಿಂಗ್ ಹೇಳಿದ್ದಾರೆ.

ಮಲೆನಾಡಿನ ಹೆಬ್ಬಾಗಿಲಿಗೊಂದು ಕಿರೀಟ; ಶಿವಮೊಗ್ಗಕ್ಕೆ ಬಂತು ಭಾರತೀಯ ಸೇನಾ ಯುದ್ಧ ಟ್ಯಾಂಕರ್
ರಾಜ್ಯದ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ನಗರಕ್ಕೆ ಮತ್ತೊಂದು ಹೆಮ್ಮೆಯಗರಿ ಮೂಡಿದ್ದು, 2 ಯುದ್ಧಗಳಲ್ಲಿ ಭಾರತೀಯ ಸೇನೆಯಲ್ಲಿ ಯುದ್ಧ ಮಾಡಿದ್ದ ಸೇನಾ ಟ್ಯಾಂಕರ್ ಅನ್ನು ಜಿಲ್ಲೆಗೆ ತರಲಾಗಿದೆ.

ಜಮ್ಮು ಮತ್ತು ಕಾಶ್ಮೀರ: ಅಮರನಾಥ್ ಯಾತ್ರೆ ತಾತ್ಕಾಲಿಕ ಸ್ಥಗಿತ, ಪೋಶನಾ ನದಿಯಲ್ಲಿ ಕೊಚ್ಚಿಹೋದ ಇಬ್ಬರು ಸೈನಿಕರು
ಜಮ್ಮು ಮತ್ತು ಕಾಶ್ಮೀರದಲ್ಲಿ ಮಳೆ ಅವಾಂತರ ಮುಂದುವರೆದಿದ್ದು, ಭಾರಿ ಮಳೆ ಮತ್ತು ಪ್ರತೀಕೂಲ ಹವಾಮಾನದಿಂದಾಗಿ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಕರ್ತವ್ಯ ನಿರ್ವಹಣೆ ವೇಳೆ ಪೋಶನಾ ನದಿಯಲ್ಲಿ ಕೊಚ್ಚಿ ಹೋಗಿ ಭಾರತೀಯ ಸೇನೆಯ ಇಬ್ಬರು ಸೈನಿಕರು ಸಾವನ್ನಪ್ಪಿದ್ದಾರೆ.

ನಟ ರವಿ ಕಿಶನ್ ಪುತ್ರಿ ಅಗ್ನಿಪಥ್ ಯೋಜನೆಯಡಿ ಭಾರತೀಯ ಸೇನೆಗೆ ಸೇರ್ಪಡೆ; ಮಾದರಿಯಾದ ‘ಹೆಬ್ಬುಲಿ’ ವಿಲನ್
ದಕ್ಷಿಣ ಭಾರತದ ಖ್ಯಾತ ನಟ, ‘ಹೆಬ್ಬುಲಿ’ ಚಿತ್ರದ ವಿಲನ್ ಖ್ಯಾತಿಯ ನಟ ರವಿ ಕಿಶನ್ ಪುತ್ರಿ ಅಗ್ನಿಪಥ್ ಯೋಜನೆಯಡಿ ಭಾರತೀಯ ಸೇನೆ ಸೇರಿದ್ದಾರೆ.

15 ದಿನಗಳಲ್ಲಿ 11 ವಿದೇಶಿ ಉಗ್ರರ ಎನ್ಕೌಂಟರ್, ಅಪಾರ ಪ್ರಮಾಣದ ಮಾದಕ ದ್ರವ್ಯ, ಶಸ್ತ್ರಾಸ್ತ್ರ ಪತ್ತೆಗೆ ಗುಪ್ತಚರ ಮಾಹಿತಿ ನೆರವು: ಭಾರತೀಯ ಸೇನೆ
ಕಳೆದ 15 ದಿನಗಳಲ್ಲಿ 11 ವಿದೇಶಿ ಉಗ್ರರ ಎನ್ಕೌಂಟರ್ ಮಾಡಲಾಗಿದ್ದು, ಅಪಾರ ಪ್ರಮಾಣದ ಮಾದಕ ದ್ರವ್ಯ, ಶಸ್ತ್ರಾಸ್ತ್ರ ಪತ್ತೆ ಕಾರ್ಯಾಚರಣೆಯಲ್ಲಿ ಗುಪ್ತಚರ ಮಾಹಿತಿ ನೆರವು ನೀಡಿದೆ ಎಂದು ಭಾರತೀಯ ಸೇನೆ ಹೇಳಿದೆ.

ಮಸೀದಿಗೆ ಪ್ರವೇಶಿಸಿದ ಸೇನೆಯ ವ್ಯಕ್ತಿಗಳು, 'ಜೈ ಶ್ರೀರಾಮ್' ಘೋಷಣೆ ಕೂಗುವಂತೆ ಮುಸ್ಲಿಮರಿಗೆ ಒತ್ತಾಯ: ಮೆಹಬೂಬಾ ಮುಫ್ತಿ
ಶನಿವಾರ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಮಸೀದಿಯೊಂದಕ್ಕೆ ಭಾರತೀಯ ಸೇನೆಯ ಕೆಲವು ವ್ಯಕ್ತಿಗಳು ನುಗ್ಗಿ ಮುಸ್ಲಿಮರನ್ನು 'ಜೈ ಶ್ರೀ ರಾಮ್' ಎಂದು ಕೂಗುವಂತೆ ಒತ್ತಾಯಿಸಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ.

'ಸ್ವಾವಲಂಬನೆ ಎಂಬುದು ಆಯ್ಕೆಯಲ್ಲ.. ಅದು ಅಗತ್ಯ': ಕೇಂದ್ರ ಸಚಿವ ರಾಜನಾಥ್ ಸಿಂಗ್
ಸ್ವಾವಲಂಬನೆ ಎಂಬುದು ಆಯ್ಕೆಯಲ್ಲ.. ಅದು ಅಗತ್ಯ.. ವೇಗವಾಗಿ ಬದಲಾಗುತ್ತಿರುವ ಜಾಗತಿಕ ಸನ್ನಿವೇಶದಲ್ಲಿ ಇದು ಒಂದು ಆಯ್ಕೆಯಲ್ಲ ಆದರೆ ಅನಿವಾರ್ಯವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಅಮೆರಿಕದ 30 ಪ್ರಿಡೇಟರ್ ಡ್ರೋನ್ ಖರೀದಿಸಲು ರಕ್ಷಣಾ ಸಚಿವಾಲಯ ಅಸ್ತು: ಚೀನಾದ ಮೇಲೆ ಕಣ್ಗಾವಲು!
ಪ್ರಧಾನಿ ನರೇಂದ್ರ ಮೋದಿ ಅವರ ವಾಷಿಂಗ್ಟನ್ ಭೇಟಿಗೆ ಕೆಲವು ದಿನಗಳ ಮುನ್ನ ಅಮೇರಿಕದ MQ-9B ಪ್ರಿಡೇಟರ್ ಡ್ರೋನ್‌ಗಳನ್ನು ಖರೀದಿಸಲು ರಕ್ಷಣಾ ಇಲಾಖೆ ಮುಂದಾಗಿದ್ದು ಇದು ಭಾರತೀಯ ಸೇನೆಯ ಬಲವನ್ನು ಮತ್ತಷ್ಟು ಹೆಚ್ಚಿಸಲಿದೆ.

ಮಣಿಪುರ: ಸಚಿವರ ಅಧಿಕೃತ ನಿವಾಸಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಮಣಿಪುರದಲ್ಲಿ ಹಿಂಸಾಚಾರ ಮುಂದುವರಿದಿದ್ದು ಇತ್ತೀಚಿನ ಬೆಳವಣಿಗೆಯಲ್ಲಿ ಮಣಿಪುರದ ಏಕೈಕ ಮಹಿಳಾ ಸಚಿವೆ ನೆಮ್ಚಾ ಕಿಪ್‌ಗೆನ್ ಅವರ ಅಧಿಕೃತ ನಿವಾಸಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.

