Indian Army

ಯೋಧನ ಕಾಲಿಗೆ ನಮಸ್ಕರಿಸಿದ ಪುಟ್ಟ ಕಂದಮ್ಮ: ನೆಟ್ಟಿಗರ ಮನಸನ್ನು ಕಲುಕಿದ ದೃಶ್ಯ, ವಿಡಿಯೋ ವೈರಲ್!
ದೇಶ ಸೇವೆಯೇ ಉಸಿರೆಂದು ಬದುಕುತ್ತಿರುವ ಯೋಧರನ್ನು ಕಂಡಾಗ ನಮ್ಮಲ್ಲಿ ಒಂದು ಗೌರವ ಹುಟ್ಟುತ್ತದೆ. ಕೆಲವರು ಅವರನ್ನು ಕಂಡೊಡನೆ ಕೈ ಕುಲುಕುವುದು, ಅಭಿನಂದಿಸುವುದು ಮಾಡುತ್ತೇವೆ. ಆದರೆ ಇಲ್ಲೊಂದು ಮಗು ನಿಂತಿದ್ದ ಯೋಧರ ಬಳಿ ಹೋಗಿ ಅವರ ಕಾಲು ಮುಟ್ಟಿ ನಮಸ್ಕರಿಸಿದೆ.

ಶ್ರೀನಗರ: ಭಯೋತ್ಪಾದಕರ ಗುಂಡಿನ ದಾಳಿ; ಓರ್ವ ಪೊಲೀಸ್ ಅಧಿಕಾರಿ ಹುತಾತ್ಮ, ಇಬ್ಬರಿಗೆ ಗಾಯ!
ಶ್ರೀನಗರದ ಡೌನ್ ಟೌನ್ ಪ್ರದೇಶದಲ್ಲಿನ ಪೊಲೀಸ್ ಚೆಕ್ ಪೋಸ್ಟ್ ಮೇಲೆ ಭಯೋತ್ಪಾದಕರ ದಾಳಿ ವೇಳೆ ಓರ್ವ ಪೊಲೀಸ್ ಸಾವನ್ನಪ್ಪಿದ್ದು ಇಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಮೇಘಸ್ಫೋಟ: ಬಾಲ್ಟಾಲ್ ಮಾರ್ಗದಲ್ಲಿ ಅಮರನಾಥ ಯಾತ್ರೆ ಪುನರಾರಂಭ
ಮೇಘಸ್ಫೋಟ ಮತ್ತು ತೀವ್ರ ಪ್ರವಾಹದಿಂದಾಗಿ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಮಂಗಳವಾರ ಮತ್ತೆ ಪುನಾರಂಭಗೊಂಡಿದೆ.

ಆವಂತಿಪೋರಾ ಎನ್ಕೌಂಟರ್: ಇಬ್ಬರು ಉಗ್ರರ ಹೊಡೆದುರುಳಿಸಿದ ಸೇನೆ, ಕಾರ್ಯಾಚರಣೆ ಮುಂದುವರಿಕೆ!
ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಆವಂತಿಪೋರಾದಲ್ಲಿ ನಡೆಯುತ್ತಿರುವ ಎನ್ಕೌಂಟರ್ ನಲ್ಲಿ ಮತ್ತೋರ್ವ ಉಗ್ರನನ್ನು ಹೊಡೆದುರುಳಿಸಲಾಗಿದ್ದು, ಆ ಮೂಲಕ ಈ ಎನ್ಕೌಂಟರ್ ನಲ್ಲಿ ಹತರಾದ ಉಗ್ರರ ಸಂಖ್ಯೆ 2ಕ್ಕೇರಿದೆ.

ಅಮರನಾಥ ಪ್ರವಾಹ: ರಕ್ಷಣಾ ಕಾರ್ಯಾಚರಣೆಗೆ ಭಾರತೀಯ ಸೇನೆಯಿಂದ ಅತ್ಯಾಧುನಿಕ ಯಂತ್ರೋಪಕರಣಗಳ ಬಳಕೆ
ಮೇಘಸ್ಫೋಟ ಹಿನ್ನಲೆಯಲ್ಲಿ ಖ್ಯಾತ ಪವಿತ್ರ ಯಾತ್ರಾತಾಣ ಅಮರನಾಥ್ ಗುಹೆ ಸಮೀಪ ಸಂಭವಿಸಿದ ಪ್ರವಾಹದಿಂದಾಗಿ ಅಪಾಯಕ್ಕೆ ಸಿಲುಕಿರುವ ಯಾತ್ರಾರ್ಥಿಗಳ ರಕ್ಷಣೆಗೆ ಭಾರತೀಯ ಸೇನೆ ಅತ್ಯಾಧುನಿಕ ಯಂತ್ರೋಪಕರಣಗಳ ಬಳಕೆ ಮಾಡುತ್ತಿದೆ.

ಅಮರನಾಥ ಗುಹಾ ದೇಗುಲದ ಬಳಿ ಹಠಾತ್ ಪ್ರವಾಹದಿಂದ ದುರಂತ: ರಕ್ಷಣಾ ಕಾರ್ಯಾಚರಣೆಯ ಚಿತ್ರಗಳು
ಹಿಂದೂಗಳ ತೀರ್ಥಯಾತ್ರಾ ಕ್ಷೇತ್ರವಾದ ಅಮರನಾಥ ಗುಹಾ ದೇಗುಲದ ಬಳಿ ಜುಲೈ 8ರಂದು ಮಧ್ಯಾಹ್ನ ಭಾರೀ ಮಳೆಯಿಂದಾಗಿ ಹಠಾತ್ ಪ್ರವಾಹ ಉಂಟಾಗಿದ್ದು ಇದರಲ್ಲಿ ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ.

ಚಿತ್ರದುರ್ಗ: ATR ನಿಂದ ಹೊಸ UAV ಯಶಸ್ವೀ ಪರೀಕ್ಷೆ ನಡೆಸಿದ DRDO
ರಕ್ಷಣಾ ವಿಭಾಗದಲ್ಲಿ ಸ್ವಾವಲಂಬನೆಯತ್ತ ಮಹತ್ವದ ಹೆಜ್ಜೆಯನ್ನಿಟ್ಟಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಚಿತ್ರದುರ್ಗದ ಎಟಿಆರ್ (ಏರೋನಾಟಿಕಲ್ ಟೆಸ್ಟ್ ರೇಂಜ್) ನಿಂದ ಮೊದಲ ಚಾಲಕ ರಹಿತ ವಿಮಾನದ ಯಶಸ್ವಿ ಹಾರಾಟ ನಡೆಸಿದೆ.

ಅಗ್ನಿಪಥ್ ಯೋಜನೆ: ವಾಯುಸೇನೆಗೆ 6 ದಿನಗಳಲ್ಲಿ 1.83 ಲಕ್ಷ ಅರ್ಜಿ
ಭಾರತೀಯ ಸೇನೆಯ ನೂತನ ನೇಮಕಾತಿ ಯೋಜನೆ ಅಗ್ನಿಪಥ್ ಆರಂಭವಾಗಿ ಕೇವಲ 6 ದಿನಗಳಲ್ಲಿಯೇ ವಾಯುಸೇನೆ 1.83 ಲಕ್ಷ ಅರ್ಜಿ ಸ್ವೀಕರಿಸಿದೆ ಎಂದು ತಿಳಿದುಬಂದಿದೆ.

ಜಮ್ಮು ಮತ್ತು ಕಾಶ್ಮೀರ: ಪಾಕ್ ನುಸುಳುಕೋರನ ಹೊಡೆದುರುಳಿಸಿದ ಭಾರತೀಯ ಸೇನೆ
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ಮೂಲಕ ಓರ್ವ ನುಸುಳುಕೋರರನ್ನು ಭಾರತೀಯ ಸೇನೆ ಸೋಮವಾರ ಮುಂಜಾನೆ ಹೊಡೆದುರುಳಿಸಿದೆ.

