india

ಸ್ವರ್ಗಕ್ಕೂ ಮೀರಿದ ಸೌಂದರ್ಯ! ಹಿಮಾಲಯದ ಮಡಿಲಲ್ಲಿ ಅಡಗಿದೆ ಭಾರತದ ಕೊನೆಯ ಹಳ್ಳಿ Chitkul; ಪ್ರವಾಸಕ್ಕೂ ಮುನ್ನ ಇದನ್ನೊಮ್ಮೆ ಓದಿ..!
ವರ್ಷದಿಂದ ವರ್ಷಕ್ಕೆ ಸಾವಿರಾರು ಪ್ರವಾಸಿಗರು ಈ ಮನಮೋಹಕ ತಾಣಕ್ಕೆ ಭೇಟಿ ನೀಡುತ್ತಿದ್ದು, 'ಹಿಂದೂಸ್ತಾನ್ ಕಾ ಆಖ್ರಿ ಗಾಂವ್' ಎಂಬ ಹೆಗ್ಗಳಿಕೆಯೂ ಇದಕ್ಕಿದೆ. ಪ್ರಕೃತಿ ಪ್ರಿಯರು, ಟ್ರೆಕ್ಕಿಂಗ್ ಆಸಕ್ತರು, ನಗರ ಜೀವನದ ಗದ್ದಲದಿಂದ ದೂರ ನೆಮ್ಮದಿಯ ಕ್ಷಣಗಳನ್ನು ಕಳೆಯಲು ಬಯಸುವವರಿಗೆ ಸ್ವರ್ಗವೇ ಸರಿ.

'ಮುಸ್ಲಿಮರು ಕಾಫೀರರೊಂದಿಗೆ ಸ್ನೇಹ ಬೆಳೆಸಬಾರದು': ಭಾರತ-ಅಫ್ಘಾನ್ ಗೆಳತನಕ್ಕೆ Pak ಅಸೂಯೆ; Quran ಉಲ್ಲೇಖಿಸಿ ವಿಷ ಕಾರಿದ ಸೇನಾ ವಕ್ತಾರ..!
ಇತ್ತೀಚೆಗೆ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಮತ್ತು ಭಾರತದ ನಡುವೆ ಹಲವು ಉನ್ನತ ಮಟ್ಟದ ರಾಜತಾಂತ್ರಿಕ ಮಾತುಕತೆಗಳು ನಡೆದಿವೆ. ಈ ವೇಳೆ ಅಫ್ಘಾನ್ ಸಚಿವರೊಬ್ಬರು "ಭಾರತ ಮತ್ತು ಅಫ್ಘಾನಿಸ್ತಾನದವರ ಡಿಎನ್‌ಎ (DNA) ಒಂದೇ" ಎಂದು ಹೇಳಿಕೆ ನೀಡಿದ್ದರು.

ಇದು ಅತ್ಯಗತ್ಯ: ಭಾರತದಲ್ಲಿ UCC ಅನುಷ್ಠಾನಕ್ಕೆ ತಸ್ಲೀಮಾ ನಸ್ರೀನ್ ಬೆಂಬಲ
ಭಾರತಕ್ಕೆ ಮರಳಿರುವ ದೇಶಭ್ರಷ್ಟ ಬಾಂಗ್ಲಾದೇಶಿ ಬರಹಗಾರ್ತಿ ತಸ್ಲೀಮಾ ನಸ್ರೀನ್ ತಮ್ಮ ದೇಶದಲ್ಲಿ ಅಲ್ಪಸಂಖ್ಯಾತರ, ವಿಶೇಷವಾಗಿ ಹಿಂದೂ ಸಮುದಾಯದ ಸುರಕ್ಷತೆಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಬಾಂಗ್ಲಾದೇಶದಲ್ಲಿ ರಾಜಕೀಯ ನಾಯಕತ್ವದಲ್ಲಿ ಬದಲಾವಣೆಯ ಹೊರತಾಗಿಯೂ...

'ನೀರು-ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ'; ನಿಮ್ಮ ದುರ್ವರ್ತನೆಯಿಂದಲೇ ಸಿಂಧು ಜಲ ಒಪ್ಪಂದ ಅಮಾನತು: ಪಾಕಿಸ್ತಾನಕ್ಕೆ ಭಾರತ ತಿರುಗೇಟು
ಪಾಕಿಸ್ತಾನದಲ್ಲಿ ಉಂಟಾಗಿರುವ ನೀರಿನ ಕೊರತೆಗೆ ಭಾರತ ಕಾರಣವಲ್ಲ, ಅಲ್ಲಿನ ಆಡಳಿತದ ವೈಫಲ್ಯವೇ ಕಾರಣ. ಇದಕ್ಕೆ "ಭಾರತವನ್ನು ದೂಷಿಸುವ ಬದಲು, ಪಾಕಿಸ್ತಾನ ಸರ್ಕಾರ ತನ್ನ ದೇಶದಲ್ಲಿನ ನೀರಿನ ನಿರ್ವಹಣೆಯನ್ನು ಸುಧಾರಿಸಬೇಕು.

ಭಾರತ-ಚೀನಾ ಗಡಿ ವ್ಯಾಪಾರಕ್ಕೆ ಮರುಜೀವ: 6 ವರ್ಷಗಳ ಬಳಿಕ ನಾಥೂ ಲಾ ಗಡಿಯಲ್ಲಿ ವ್ಯಾಪಾರ ಚಟುವಟಿಕೆ ಪುನರಾರಂಭ..!
ಈ ದಿನವನ್ನು "ಐತಿಹಾಸಿಕ ಕ್ಷಣ" ಎಂದು ಬಣ್ಣಿಸಿದ ಸಚಿವ ಭುಟಿಯಾ, ಪ್ರಧಾನಿ ಮೋದಿ ಮತ್ತು ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರ ಪ್ರಯತ್ನಗಳಿಂದಲೇ ಚೀನಾದೊಂದಿಗೆ ಗಡಿ ವ್ಯಾಪಾರ ಪುನರಾರಂಭ ಸಾಧ್ಯವಾಗಿದೆ ಎಂದು ಹೇಳಿದರು.

ಭಾರತದ ಕಂಪನಿ ಸೇರಿ 6 ಸಂಸ್ಥೆಗಳ ವಿರುದ್ಧ ಅಮೆರಿಕಾ ಕಠಿಣ ಕ್ರಮ; China-Russia ಸಂಸ್ಥೆಗಳೂ Black list
ಮಹಾನ್ ಏರ್ ಐಆರ್‌ಜಿಸಿ ಸಿಬ್ಬಂದಿಯನ್ನು ಸಾಗಿಸುವುದು, ಮಿಲಿಟರಿ ತರಬೇತಿಗೆ ನೆರವಾಗುವುದು ಹಾಗೂ ಡ್ರೋನ್ ವ್ಯವಸ್ಥೆಗಳು ಮತ್ತು ಶಸ್ತ್ರಾಸ್ತ್ರಗಳ ಸಾಗಣೆಗೆ ಸಹಕಾರ ನೀಡುವ ಮೂಲಕ ಇರಾನ್‌ನ ಸೇನಾ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದೆ.

ಹೆಚ್ಚು ದಿನ ಜೈಲಿನಲ್ಲಿಡುವುದು ಸ್ವಾತಂತ್ರ್ಯದ ಹಕ್ಕಿನ ಘೋರ ಉಲ್ಲಂಘನೆ: ಇಬ್ಬರು Indian Mujahideen ಉಗ್ರ ಆರೋಪಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು!
2014ರಿಂದ ಬಂಧನದಲ್ಲಿದ್ದ ಇಂಡಿಯನ್ ಮುಜಾಹಿದ್ದೀನ್‌ನ ಇಬ್ಬರು ಆರೋಪಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ಹೆಚ್ಚು ದಿನ ಆರೋಪಿಗಳನ್ನು ಬಂಧನದಲ್ಲಿರಿಸುವುದು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಸ್ವಾತಂತ್ರ್ಯದ ಹಕ್ಕಿನ ಘೋರ ಉಲ್ಲಂಘನೆ ಎಂದು ಸುಪ್ರಿಂ ಕೋರ್ಟ್ ಹೇಳಿದೆ.

Video: 'POK ಪ್ರತಿಭಟನಾಕಾರರೂ ಭಾರತದಷ್ಟೇ ಶತ್ರುಗಳು'; 32 ಮಂದಿ ಹತ್ಯೆ ಸಮರ್ಥಿಸಿಕೊಂಡ ಪಾಕ್ ರಕ್ಷಣಾ ಸಚಿವ Khawaja Asif
ಕಳೆದ ಎರಡು ದಿನಗಳಲ್ಲಿ ಪಿಒಕೆಯ ರಾವಲಕೋಟ್ ಪ್ರದೇಶದಲ್ಲಿ ಪಾಕಿಸ್ತಾನಿ ಭದ್ರತಾ ಪಡೆಗಳ ಗುಂಡಿನ ದಾಳಿಯಲ್ಲಿ ಕನಿಷ್ಠ 32 ಕಾಶ್ಮೀರಿ ಪ್ರತಿಭಟನಾಕಾರರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಪಾಕ್ ತನ್ನ ಅತಿಕ್ರಮಣವನ್ನು ಮುಚ್ಚಿಹಾಕಲು PoKನಲ್ಲಿ ಚುನಾವಣೆ ನಡೆಸುವ ಪ್ರಯತ್ನ: ಭಾರತ ತೀವ್ರ ಖಂಡನೆ
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (PoK) ನಡೆಯುತ್ತಿರುವ ಚುನಾವಣೆಗಳನ್ನು ಭಾರತ ತಿರಸ್ಕರಿಸಿದೆ. ಇಡೀ ಜಮ್ಮು ಮತ್ತು ಕಾಶ್ಮೀರ ಭಾರತದ ಭಾಗವಾಗಿದೆ. ಈ ಚುನಾವಣೆಗಳು ಕೇವಲ ಅಕ್ರಮ ಆಕ್ರಮಣವನ್ನು ಮರೆಮಾಚುವ ಪ್ರಯತ್ನ ಎಂದು ಹೇಳಿದೆ.

