IMF

IMF ಅಂದ್ರೆ International Militant Fund: ಪಾಕ್ ಗೆ ಆರ್ಥಿಕ ನೆರವು ನೀಡಿದ ಅಂತಾರಾಷ್ಟ್ರೀಯ ಸಂಸ್ಥೆ ವಿರುದ್ಧ Owaisi ಕಿಡಿ; Video
ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ನ್ನು International Militant Fund (ಅಂತಾರಾಷ್ಟ್ರೀಯ ಭಯೋತ್ಪಾದಕ ನಿಧಿ) ಎಂದು ಓವೈಸಿ ಟೀಕಾಪ್ರಹಾರ ನಡೆಸಿದ್ದಾರೆ.

Pahalgam terror attack: ಪಾಕಿಸ್ತಾನಕ್ಕೆ IMF ಸಾಲ; ಜಾಗತಿಕ ಮಟ್ಟದಲ್ಲಿ ಭಾರಿ ಹೊಡೆತ ನೀಡಲು ಭಾರತ ಮುಂದು!
ಅಂತಾರಾಷ್ಟ್ರೀಯ ಹಣಕಾಸು ನಿಧಿಯನ್ನು (ಐಎಂಎಫ್) ಒಳಗೊಳ್ಳುವ ಭಾರತದ ಪ್ರಯತ್ನವು ಪಾಕಿಸ್ತಾನವನ್ನು ರಾಜತಾಂತ್ರಿಕವಾಗಿ ಪ್ರತ್ಯೇಕಿಸುವ ರಾಜಕೀಯ ತಂತ್ರವಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಶನಿವಾರ ಹೇಳಿದೆ.

ಭಾರತ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ: 2024-25 ಆರ್ಥಿಕ ವರ್ಷದಲ್ಲಿ ಹಣದುಬ್ಬರ ಶೇ. 4.4ಕ್ಕೆ ಇಳಿಯುವ ಸಾಧ್ಯತೆ- IMF
ಚುನಾವಣೆಗಳ ಹೊರತಾಗಿಯೂ, ಹಣಕಾಸಿನ ಬಲವರ್ಧನೆಯಾಗುತ್ತಿದೆ. ಮೀಸಲು ಸ್ಥಾನವು ಬಹಳ ಒಳ್ಳೆಯದು. ಆರ್ಥಿಕತೆಯ ಮೂಲಾಂಶಗಳು ಭಾರತ ಉತ್ತಮ ಸ್ಥಾನದಲ್ಲಿರುವುದನ್ನು ಹೇಳುತ್ತವೆ.

‘ನಿರೀಕ್ಷಿಸಿದ್ದಕ್ಕಿಂತ ಉತ್ತಮವಾಗಿದೆ.. 2027ರ ವೇಳೆಗೆ ಭಾರತ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ': Gita Gopinath
ಭಾರತದ ಆರ್ಥಿಕತೆಯ (Indian Economy ) ಬೆಳವಣಿಗೆಯೂ ನಿರೀಕ್ಷೆಯನ್ನೂ ಮೀರುತ್ತಿದ್ದು, 2027 ರ ವೇಳೆಗೆ ಭಾರತವು ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಭರವಸೆಯಿದೆ. ಇದು ವಿವಿಧ ಅಂಶಗಳಿಂದ ಪ್ರೇರಿತವಾಗಿದ್ದು, ಖಾಸಗಿ ಉದ್ಯಮಗಳು ಚೇತರಿಸಿಕೊಳ್ಳುತ್ತಿರುವುದರಿಂದ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು.

IMF: ಭಾರತ 'Star Performer'; ಜಾಗತಿಕ ಬೆಳವಣಿಗೆಗೆ ಶೇ.16ಕ್ಕಿಂತ ಹೆಚ್ಚಿನ ಕೊಡುಗೆ ನೀಡಲಿದೆ- ಐಎಂಎಫ್
ಡಿಜಿಟಲೀಕರಣ ಮತ್ತು ಮೂಲಸೌಕರ್ಯಗಳಂತಹ ಪ್ರಮುಖ ಕ್ಷೇತ್ರಗಳಲ್ಲಿನ ಆರ್ಥಿಕ ಸುಧಾರಣೆಗಳಿಂದಾಗಿ ದೃಢವಾಗಿ ಬೆಳೆಯುತ್ತಿರುವ ಭಾರತವು ಸ್ಟಾರ್ ಪ್ರದರ್ಶಕ ಆಗಿ ಹೊರಹೊಮ್ಮಿದೆ. ಜಾಗತಿಕ ಬೆಳವಣಿಗೆಯ ಶೇಕಡಾ 16 ಕ್ಕಿಂತ ಹೆಚ್ಚು ಕೊಡುಗೆ ಭಾರತ ನೀಡಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದೆ.

ದೆಹಲಿಯಲ್ಲಿ ಮುಂದಿನ ತಿಂಗಳು ಜಿ20 ಸಭೆ: ವಿಶ್ವಬ್ಯಾಂಕ್, ಐಎಂಎಫ್ ಸುಧಾರಣೆಗೆ ಅಮೆರಿಕ ಅಧ್ಯಕ್ಷ ಬೈಡನ್ ಒತ್ತು
ಮುಂದಿನ ತಿಂಗಳು ದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಅಗತ್ಯಗಳನ್ನು ಉತ್ತಮವಾಗಿ ಪೂರೈಸುವ ಐಎಂಎಫ್ ಮತ್ತು ವಿಶ್ವಬ್ಯಾಂಕ್‌ಗೆ ಸುಧಾರಣೆ ತರಬೇಕೆಂದು ಅಮೆರಿಕ ಅಧ್ಯಕ್ಷ ಜೊ ಬೈಡನ್ ಒತ್ತಾಯಿಸಲಿದ್ದಾರೆ.

2023-24ರಲ್ಲಿ ಭಾರತ ವಿಶ್ವದಲ್ಲೇ ಅತ್ಯಧಿಕ ಆರ್ಥಿಕ ಬೆಳವಣಿಗೆ ದಾಖಲಿಸಲಿದೆ: IMF ವರದಿ
ಹಾಲಿ ಜಾಗತಿಕ ಆರ್ಥಿಕ ಹಿನ್ನಡೆಯ ಪರಿಸ್ಥಿತಿಯಲ್ಲೂ ಆಶಾದಾಯಕ ನಿರ್ವಹಣೆ ತೋರುತ್ತಿರುವ ಭಾರತ 2023-24ರ ಹಣಕಾಸು ವರ್ಷದಲ್ಲಿ ಜಿಡಿಪಿ(GDP) ಬೆಳವಣಿಗೆಯಲ್ಲಿ ಅಗ್ರ ಸ್ಥಾನಿಯಾಗಿರಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ವರದಿಯೊಂದು ಹೇಳಿದೆ.

2023 ರಲ್ಲಿ ಜಾಗತಿಕ ಆರ್ಥಿಕ ಬೆಳವಣಿಗೆಯಲ್ಲಿ ಭಾರತ, ಚೀನಾ ಅರ್ಧದಷ್ಟು ಕೊಡುಗೆ: ಐಎಂಎಫ್
2023 ರಲ್ಲಿ ಜಾಗತಿಕ ಆರ್ಥಿಕ ಬೆಳವಣಿಗೆಯ ಅರ್ಧದಷ್ಟು ಭಾಗವನ್ನು ಭಾರತ ಮತ್ತು ಚೀನಾ ಹೊಂದುವ ನಿರೀಕ್ಷೆಯಿದ್ದು, ಈ ವರ್ಷ ವಿಶ್ವ ಆರ್ಥಿಕತೆಯು ಶೇಕಡಾ 3 ಕ್ಕಿಂತ ಕಡಿಮೆ ಬೆಳವಣಿಗೆಯಾಗುವ ನಿರೀಕ್ಷೆಯಿದೆ ಎಂದು ಐಎಂಎಫ್ ಮುಖ್ಯಸ್ಥರು ಗುರುವಾರ ಹೇಳಿದ್ದಾರೆ.

2022ರಲ್ಲಿ ಶೇ.6.8 ರಿಂದ 2023ರಲ್ಲಿ ಶೇ.6.1ಕ್ಕೆ ಭಾರತದ ಆರ್ಥಿಕತೆ ಇಳಿಕೆ ನಿರೀಕ್ಷೆ: ಐಎಂಎಫ್
ಮುಂದಿನ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ನಿಧಾನಗತಿಯಲ್ಲಿ ಸಾಗಬಹುದು. ಮಾರ್ಚ್ 31 ಕ್ಕೆ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ಬೆಳವಣಿಗೆಯನ್ನು ಶೇಕಡಾ 6.8 ರಿಂದ ಶೇಕಡಾ 6.1 ಕ್ಕೆ ಇಳಿಕೆಯಾಗಬಹುದು ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಹೇಳಿದೆ.

