ICU

ಬಳ್ಳಾರಿಯಲ್ಲಿ 20 ಜನರ ಮೇಲೆ ಬೀದಿ ನಾಯಿ ದಾಳಿ, ನಾಲ್ವರು ಐಸಿಯುಗೆ ದಾಖಲು
ಬಳ್ಳಾರಿಯಲ್ಲಿ ರೇಬಿಸ್ ಸೋಂಕಿತ ನಾಯಿಯೊಂದು ಎರಡು ಮಕ್ಕಳನ್ನು ಮಾರಣಾಂತಿಕವಾಗಿ ಕಚ್ಚಿದ ಎರಡು ತಿಂಗಳ ನಂತರ, ಬೀದಿ ನಾಯಿಗಳ ಗುಂಪೊಂದು ನಗರದ ಮೂರು ವಿವಿಧ ಸ್ಥಳಗಳಲ್ಲಿ 20 ಜನರ ಮೇಲೆ ದಾಳಿ ಮಾಡಿದೆ.

ಐಸಿಯು ನಲ್ಲಿ ಮುಲಾಯಂ ಸಿಂಗ್ ಯಾದವ್ ಗೆ ಚಿಕಿತ್ಸೆ: ಆರೋಗ್ಯದ ಮಾಹಿತಿ ಪಡೆದ ಪ್ರಧಾನಿ ನರೇಂದ್ರ ಮೋದಿ
ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರು ಗುರ್‌ಗಾಂವ್‌ನ ಮೇದಾಂತ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಪಕ್ಷವು ಟ್ವೀಟ್ ಮಾಡಿ ತಿಳಿಸಿದೆ.

ವೈದ್ಯಕೀಯ ತಪಾಸಣೆಗೆ ಕರೆತಂದಿದ್ದ ಮುರುಘಾ ಶ್ರೀಗಳು ಐಸಿಯುಗೆ ಶಿಫ್ಟ್: 1 ದಿನ ನ್ಯಾಯಾಂಗ ಬಂಧನ
ಪೋಕ್ಸೊ ಕಾಯ್ದೆಯಡಿ ಬಂಧಿತಕ್ಕೊಳಗಾಗಿರುವ ಮುರುಘಾ ಮಠದ ಡಾ ಶಿವಮೂರ್ತಿ ಶಿವಾಚಾರ್ಯ ಶರಣರು ಚಿತ್ರದುರ್ಗದ ಕಾರಾಗೃಹಕ್ಕೆ ಸೇರಿದ ಬೆನ್ನಲ್ಲೇ ಎದೆನೋವು ಕಾಣಿಸಿಕೊಂಡು ಆರೋಗ್ಯದಲ್ಲಿ ಏರುಪೇರು ಆದ ಹಿನ್ನೆಲೆಯಲ್ಲಿ ಅವರನ್ನು ಜಿಲ್ಲಾಸ್ಪತ್ರೆಯ ಐಸಿಯುಗೆ ಶಿಫ್ಟ್ ಮಾಡಲಾಗಿದೆ.ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆ ಸಿಬ್ಬಂದಿ ಐಸಿಯುಗೆ ಸ್ಥಳಾಂತರಿಸಿದ್ದಾರೆ.

ಖ್ಯಾತ ಹಿರಿಯ ಪತ್ರಕರ್ತ ವಿನೋದ್ ದುವಾ ಆರೋಗ್ಯ ಸ್ಥಿತಿ ಗಂಭೀರ: ಐಸಿಯುಗೆ ದಾಖಲು
ವಿನೋದ್ ಅವರು ಈ ವರ್ಷದಾರಂಭದಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಆಸ್ಪತ್ರೆಯಲ್ಲಿ ರೇಡಿಯೊಲಾಜಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅವರ ಪತ್ನಿ ಕೊರೊನಾಗೆ ಬಲಿಯಾಗಿದ್ದರು.

ಆರೋಗ್ಯ ಸ್ಥಿತಿ ಗಂಭೀರ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಐಸಿಯುನಲ್ಲಿ
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು ಚಿಕಿತ್ಸೆಗಾಗಿ ಭಾನುವಾರ ಸಂಜೆ ಸಂಜಯ್ ಗಾಂಧಿ ವೈದ್ಯಕೀಯ ವಿಜ್ಞಾನಗಳ ಸ್ನಾತಕೋತ್ತರ ಸಂಸ್ಥೆಯ ಐಸಿಯುಗೆ ದಾಖಲಾಗಿದ್ದಾರೆ.

ಕೇರಳದ ಟಾಟಾ ಕೋವಿಡ್ ಆಸ್ಪತ್ರೆ ಐಸಿಯು ಒಳಗೆ ಮಳೆ ನೀರು ನುಗ್ಗಿ ಅವಾಂತರ!
ಕಾಸರಗೋಡಿನಲ್ಲಿ ಟಾಟಾ ಟ್ರಸ್ಟ್ ನಿಂದ 60 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಕೋವಿಡ್ ಆಸ್ಪತ್ರೆಗೆ ಮಳೆ ನೀರು ನುಗ್ಗಿದ್ದು ಅಧಿಕಾರಿಗಳಿಗೆ ತಲೆನೋವಿನ ಸಂಗತಿಯಾಗಿದೆ.

ಗಂಗೂಬಾಯಿ ಹಾನಗಲ್ ಮೊಮ್ಮಗಳು ಕೊರೋನಾಗೆ ಬಲಿ, ಐಸಿಯುವಿನಲ್ಲಿ ಪುತ್ರನಿಗೆ ಚಿಕಿತ್ಸೆ
ಖ್ಯಾತ ಹಿಂದೂಸ್ತಾನಿ ಗಾಯಕಿ ಡಾ. ಗಂಗೂಬಾಯಿ ಹಾನಗಲ್ ಅವರ ಮೊಮ್ಮಗಳು ಮಹಾಮಾರಿ ಕೊರೋನಾ ಸೋಂಕಿನಿಂದಾಗಿ ಸಾವನ್ನಪ್ಪಿದ್ದು, ಪುತ್ರ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದುಬಂದಿದೆ.

ಕೋವಿಡ್ ನಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್ ಹಿರಿಯ ನಟ ರಣಧೀರ್ ಕಪೂರ್ ಐಸಿಯುಗೆ ಶಿಫ್ಟ್; ಆರೋಗ್ಯ ಸ್ಥಿರ
ಹಿಂದಿ ಚಿತ್ರರಂಗದ ಹಿರಿಯ ನಟ, ಕಪೂರ್ ವಂಶದ ರಣಧೀರ್ ಕಪೂರ್ ಅವರನ್ನು ಶನಿವಾರ ಐಸಿಯುಗೆ ಶಿಫ್ಟ್ ಮಾಡಲಾಗಿದೆ. ಕೊರೋನಾ ಪಾಸಿಟಿವ್ ಬಂದು 74 ವರ್ಷದ ಹಿರಿಯ ನಟ ಮುಂಬೈಯ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಾಗಿದ್ದರು.

ಬೊಜ್ಜು, ಅಧಿಕ ತೂಕ ಹೊಂದಿರುವ ಕೊರೋನಾ ಸೋಂಕಿತರಿಗೆ ಅಪಾಯ ಹೆಚ್ಚು: ಅಧ್ಯಯನ ವರದಿ
ದೇಹದ ಬೊಜ್ಜು, ಅತಿಯಾದ ತೂಕ ಹಲವು ರೋಗಗಳಿಗೆ ಎಡೆಮಾಡಿಕೊಡುತ್ತದೆ, ಅನೇಕ ಕಾಯಿಲೆಗಳು ಕೂಡ ಬರುತ್ತವೆ ಎಂದು ವೈದ್ಯರು, ತಜ್ಞರು ಹೇಳುತ್ತಾರೆ.

