ಕೋವಿಡ್ ನಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್ ಹಿರಿಯ ನಟ ರಣಧೀರ್ ಕಪೂರ್ ಐಸಿಯುಗೆ ಶಿಫ್ಟ್; ಆರೋಗ್ಯ ಸ್ಥಿರ
ಹಿಂದಿ ಚಿತ್ರರಂಗದ ಹಿರಿಯ ನಟ, ಕಪೂರ್ ವಂಶದ ರಣಧೀರ್ ಕಪೂರ್ ಅವರನ್ನು ಶನಿವಾರ ಐಸಿಯುಗೆ ಶಿಫ್ಟ್ ಮಾಡಲಾಗಿದೆ. ಕೊರೋನಾ ಪಾಸಿಟಿವ್ ಬಂದು 74 ವರ್ಷದ ಹಿರಿಯ ನಟ ಮುಂಬೈಯ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಾಗಿದ್ದರು.

ಮುಂಬೈ: ಹಿಂದಿ ಚಿತ್ರರಂಗದ ಹಿರಿಯ ನಟ, ಕಪೂರ್ ವಂಶದ ರಣಧೀರ್ ಕಪೂರ್ ಅವರನ್ನು ಶನಿವಾರ ಐಸಿಯುಗೆ ಶಿಫ್ಟ್ ಮಾಡಲಾಗಿದೆ. ಕೊರೋನಾ ಪಾಸಿಟಿವ್ ಬಂದು 74 ವರ್ಷದ ಹಿರಿಯ ನಟ ಮುಂಬೈಯ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಾಗಿದ್ದರು.
ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಐಸಿಯುವಲ್ಲಿ ಅವರ ನಿಗಾವಹಿಸಲಾಗಿದೆ. ಇನ್ನೂ ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲಿರಬೇಕಾಗಬಹುದು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಹಿಂದಿ ಚಿತ್ರರಂಗದ ಖ್ಯಾತ ನಿರ್ಮಾಪಕ-ನಿರ್ದೇಶಕ ರಾಜ್ ಕಪೂರ್ ಅವರ ಹಿರಿಯ ಪುತ್ರ ರಣಧೀರ್ ಕಪೂರ್, ಕಳೆದ ಒಂದು ವರ್ಷದಲ್ಲಿ ಇವರು ತಮ್ಮ ಕಿರಿಯ ಸೋದರರಾದ ರಿಶಿ ಕಪೂರ್ ಮತ್ತು ರಾಜೀವ್ ಕಪೂರ್ ಅವರನ್ನು ಅಗಲಿದ್ದರು.
67 ವರ್ಷದ ರಿಷಿ ಕಪೂರ್ ಅವರು ಕಳೆದ ವರ್ಷ ಏಪ್ರಿಲ್ 30ರಂದು ಎರಡು ವರ್ಷಗಳ ಕಾಲ ಕ್ಯಾನ್ಸರ್ ನಿಂದ ಹೋರಾಡಿ ಮೃತಪಟ್ಟರೆ ರಾಜೀವ್ ಕಪೂರ್ ಕಳೆದ ಫೆಬ್ರವರಿಯಲ್ಲಿ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದರು.
ಕಲ್ ಆಜ್ ಔರ್ ಕಲ್, ಜೀತ್, ಜವಾನಿ ದಿವಾನಿ, ಲಫಂಗೆ, ರಾಂಪುರ್ ಕ ಲಕ್ಷ್ಮಣ್, ಹಾತ್ ಕಿ ಸಫೈ ಚಿತ್ರಗಳಿಂದ ರಣಧೀರ್ ಕಪೂರ್ ಖ್ಯಾತರಾಗಿದ್ದಾರೆ. ನಟಿ ಬಬಿತಾ ಅವರನ್ನು ಮದುವೆಯಾಗಿ ಬಾಲಿವುಡ್ ನ ಕರಿಷ್ಮಾ ಕಪೂರ್ ಮತ್ತು ಕರೀನಾ ಕಪೂರ್ ಖಾನ್ ರನ್ನು ಪುತ್ರಿಯರನ್ನು ಹೊಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


