Home isolation

ಹೋಂ ಐಸೋಲೇಷನ್: ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿದ ಸರ್ಕಾರ, 60ವರ್ಷ ಮೇಲ್ಪಟ್ಟವರು ಅರ್ಹರಲ್ಲ
ರೋಗ ಲಕ್ಷಣಗಳಿಲ್ಲದ ಮತ್ತು ಅತ್ಯಂತ ಕಡಿಮೆ ಲಕ್ಷಣಗಳಿರುವ ಕೊರೋನಾ ಸೋಂಕಿತರು ಇನ್ನು ಮುಂದೆ ಮನೆಯಲ್ಲೇ ಪ್ರತ್ಯೇಕವಾಗಿದ್ದುಕೊಂಡು ಚಿಕಿತ್ಸೆ ಪಡೆಯಲು ಷರತ್ತು ಬದ್ಧ ಅವಕಾಶ ನೀಡಿ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಕೊರೋನಾ ಸೋಂಕು ಲಕ್ಷಣ ಕಡಿಮೆ ಇದ್ದರೆ ಮನೆಯಲ್ಲಿಯೇ ಚಿಕಿತ್ಸೆಗೆ ಪರಿಶೀಲನೆ: ಸಿಎಂ ಯಡಿಯೂರಪ್ಪ
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣಗಳು ದ್ವಿಗುಣಗೊಳ್ಳುವ ವೇಗ ತಗ್ಗಿಸಿ ಟೆಲಿಮೆಡಿಸನ್ ಮೂಲಕ ಚಿಕಿತ್ಸೆ ನೀಡುವ ಕುರಿತು ತಜ್ಞರು ರಾಜ್ಯ ಸರ್ಕಾರಕ್ಕೆ ಸಲಹೆ ಮಾಡಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

50 ವರ್ಷದೊಳಗಿನ, ಲಕ್ಷಣರಹಿತ ಸೋಂಕಿತರಿಗೆ ಮನೆಯಲ್ಲೇ ಆರೈಕೆ: ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿದ ಸರ್ಕಾರ
ಲಕ್ಷಣ ರಹಿತ ಹಾಗೂ ಅತೀ ಕಡಿಮೆ ಲಕ್ಷಣ ಇರುವ ಕೊರೋನಾ ಸೋಂಕಿತರಿಗೆ ಮನೆಯಲ್ಲಿಯೇ ಆರೈಕೆ (ಹೋಮ್ ಐಸೋಲೇಷನ್)ಗೆ ಒಳಪಡಿಸುವುದಾಗಿ ಸರ್ಕಾರ ತಿಳಿಸಿದೆ.

ಕಡಿಮೆ ಜ್ವರ ಲಕ್ಷಣಗಳಿದ್ದರೆ ಅವರನ್ನು ಮನೆಯಲ್ಲೇ ಪ್ರತ್ಯೇಕವಾಗಿರಿಸಿ ನಿಗಾ ವಹಿಸಿ: ಸಿಎಂಗೆ ತಜ್ಞ ವೈದ್ಯರ ಸಲಹೆ
ರೋಗ ಲಕ್ಷಣ ಇಲ್ಲದ ಅಥವಾ ಅತ್ಯಂತ ಕಡಿಮೆ ಜ್ವರದ ಲಕ್ಷಣಗಳಿದ್ದರೆ, ಅವರನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿರಿಸಿ (ಹೋಮ್ ಐಸೋಲೇಷನ್), ಅವರ ಆರೋಗ್ಯದ ಮೇಲೆ ನಿಗಾ ಇಡಬೇಕು ಎಂದು ತಜ್ಞ ವೈದ್ಯರು ಸಲಹೆ ನೀಡಿದ್ದಾರೆ.

ಹೊಸ ಮಾರ್ಗಸೂಚಿ: ಕೊವಿಡ್-19 ರೋಗಿಗಳ ಹೋಮ್ ಕ್ವಾರಂಟೈನ್ 17 ದಿನಕ್ಕೆ ಅಂತ್ಯ
ಕೊರೋನಾ ವೈರಸ್ ಸೋಂಕಿತ ರೋಗಿಗಳಿಗೆ ಕೇಂದ್ರ ಸರ್ಕಾರ ಸೋಮವಾರ ಪರಿಷ್ಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ರೋಗ ಲಕ್ಷಣಗಳು ಅಥವಾ ಕೊಡಿವ್-19 ಪರೀಕ್ಷೆಯ ದಿನಾಂಕದಿಂದ 17 ದಿನಗಳ ನಂತರ ಹೋಮ್ ಕ್ವಾರಂಟೈನ್ ಕೊನೆಗೊಳಿಸಬಹುದು ಮತ್ತು ಮತ್ತೆ ಕೊವಿಡ್-19 ಪರೀಕ್ಷಿಸದೆ 10 ದಿನಗಳವರೆಗೆ ಜ್ವರವಿಲ್ಲದಿದ್ದರೆ ಹೋಮ್ ಕ್ವಾರಂಟೈನ್ ನಿಂದ ಹೊರ ಬರಬಹುದು ಎಂದು ಹೇಳಿದೆ.

ಸಣ್ಣ ಪ್ರಮಾಣದಲ್ಲಿ ಕೊರೋನಾ ಲಕ್ಷಣ ಹೊಂದಿದ್ದರೆ ಮನೆಯಲ್ಲಿಯೇ ಸ್ವ ನಿರ್ಬಂಧಕ್ಕೆ ಅವಕಾಶ: ಹೊಸ ಮಾರ್ಗಸೂಚಿ
ಕೇಂದ್ರ ಆರೋಗ್ಯ ಸಚಿವಾಲಯ ಕೊರೋನಾ ಸೋಂಕಿನ ಸಣ್ಣ ಮತ್ತು ಪೂರ್ವ ಲಕ್ಷಣಗಳು ಕಂಡುಬಂದರೆ ಅಂಥವರು ಸಹ ಮನೆಯಲ್ಲಿ ಸ್ವ ನಿರ್ಬಂಧದಲ್ಲಿ ಇರಬೇಕು ಎಂದು ಮಾರ್ಗಸೂಚಿ ಹೊರಡಿಸಿದೆ.

