ದೇಶ

ಹೊಸ ಮಾರ್ಗಸೂಚಿ: ಕೊವಿಡ್-19 ರೋಗಿಗಳ ಹೋಮ್ ಕ್ವಾರಂಟೈನ್ 17 ದಿನಕ್ಕೆ ಅಂತ್ಯ

ಕೊರೋನಾ ವೈರಸ್ ಸೋಂಕಿತ ರೋಗಿಗಳಿಗೆ ಕೇಂದ್ರ ಸರ್ಕಾರ ಸೋಮವಾರ ಪರಿಷ್ಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ರೋಗ ಲಕ್ಷಣಗಳು ಅಥವಾ ಕೊಡಿವ್-19 ಪರೀಕ್ಷೆಯ ದಿನಾಂಕದಿಂದ 17 ದಿನಗಳ ನಂತರ ಹೋಮ್ ಕ್ವಾರಂಟೈನ್ ಕೊನೆಗೊಳಿಸಬಹುದು ಮತ್ತು ಮತ್ತೆ ಕೊವಿಡ್-19 ಪರೀಕ್ಷಿಸದೆ 10 ದಿನಗಳವರೆಗೆ ಜ್ವರವಿಲ್ಲದಿದ್ದರೆ ಹೋಮ್ ಕ್ವಾರಂಟೈನ್ ನಿಂದ ಹೊರ ಬರಬಹುದು ಎಂದು ಹೇಳಿದೆ.

ಹೊಸ ಮಾರ್ಗಸೂಚಿ: ಕೊವಿಡ್-19 ರೋಗಿಗಳ ಹೋಮ್ ಕ್ವಾರಂಟೈನ್ 17 ದಿನಕ್ಕೆ ಅಂತ್ಯ
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಕೊರೋನಾ ವೈರಸ್ ಸೋಂಕಿತ ರೋಗಿಗಳಿಗೆ ಕೇಂದ್ರ ಸರ್ಕಾರ ಸೋಮವಾರ ಪರಿಷ್ಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ರೋಗ ಲಕ್ಷಣಗಳು ಅಥವಾ ಕೊಡಿವ್-19 ಪರೀಕ್ಷೆಯ ದಿನಾಂಕದಿಂದ 17 ದಿನಗಳ ನಂತರ ಹೋಮ್ ಕ್ವಾರಂಟೈನ್ ಕೊನೆಗೊಳಿಸಬಹುದು ಮತ್ತು ಮತ್ತೆ ಕೊವಿಡ್-19 ಪರೀಕ್ಷಿಸದೆ 10 ದಿನಗಳವರೆಗೆ ಜ್ವರವಿಲ್ಲದಿದ್ದರೆ ಹೋಮ್ ಕ್ವಾರಂಟೈನ್ ನಿಂದ ಹೊರ ಬರಬಹುದು ಎಂದು ಹೇಳಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಇಂದು ಪರಿಷ್ಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು,  ಪೂರ್ವ-ರೋಗಲಕ್ಷಣ ಅಥವಾ ತುಂಬಾ ಸೌಮ್ಯವಾದ ರೋಗ ಲಕ್ಷಣಗಳನ್ನು ಹೊಂದಿರುವವರು, ಕುಟುಂಬದ ಇತರ ಸದಸ್ಯರೊಂದಿಗೆ ಸಂಪರ್ಕವನ್ನು ತಪ್ಪಿಸಲು ತಮ್ಮ ನಿವಾಸದಲ್ಲಿ ಅಗತ್ಯವಾದ ಸ್ವಯಂ-ಪ್ರತ್ಯೇಕತೆಯ ಸೌಲಭ್ಯವನ್ನು ಹೊಂದಿದ್ದರೆ ಮನೆಯ ಪ್ರತ್ಯೇಕತೆಯನ್ನು ಆರಿಸಿಕೊಳ್ಳಬಹುದು ಎಂದು ಸ್ಪಷ್ಪಪಡಿಸಿದೆ.

ವೈದ್ಯಕೀಯ ಅಧಿಕಾರಿಯಿಂದ ರೋಗಿಯನ್ನು ಪ್ರಾಯೋಗಿಕವಾಗಿ ಅತ್ಯಂತ ಸೌಮ್ಯವಾದ ಪ್ರಕರಣ ಅಥವಾ ರೋಗಲಕ್ಷಣದ ಪೂರ್ವದ ಪ್ರಕರಣ ಎಂದು ಘೋಷಿಸಬೇಕು ಮತ್ತು ಕಣ್ಗಾವಲು ತಂಡಗಳು ಮುಂದಿನ ಅನುಸರಣೆಗೆ ನಿಯಮಿತವಾಗಿ ಅವರ ಆರೋಗ್ಯ ಸ್ಥಿತಿಯನ್ನು ಜಿಲ್ಲಾ ಕಣ್ಗಾವಲು ಅಧಿಕಾರಿಗೆ ತಿಳಿಸಬೇಕು.

"ಹೋಮ್ ಕ್ವಾರಂಟೈನ್ ಅಡಿಯಲ್ಲಿರುವ ರೋಗಿಯು ರೋಗಲಕ್ಷಣಗಳು ಪ್ರಾರಂಭವಾದ 17 ದಿನಗಳ ನಂತರ ಮತ್ತು 10 ದಿನಗಳವರೆಗೆ ಜ್ವರವಿಲ್ಲದ ನಂತರ ಮನೆಯ ಪ್ರತ್ಯೇಕತೆಯನ್ನು ಕೊನೆಗೊಳಿಸಬಹುದು ಎಂದು ಪರಿಷ್ಕೃತ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.