Himachal Pradesh

ಅಟಲ್ ಸುರಂಗದಲ್ಲಿ ಸಂಚಾರಕ್ಕೆ ಅಡ್ಡಿಪಡಿಸಿ ನೃತ್ಯ: 10 ಪ್ರವಾಸಿಗರ ಬಂಧನ
ಇತ್ತೀಚೆಗಷ್ಟೇ ಉದ್ಘಾಟನೆಯಾಗಿದ್ದ ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ ಮಾರ್ಗ ಅಟಲ್ ಟನಲ್ ನೊಳಗೆ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ್ದ ಕಾರಣಕ್ಕಾಗಿ, ಹಿಮಾಚಲ ಪ್ರದೇಶ ಪೊಲೀಸರು 10 ಪ್ರವಾಸಿಗರನ್ನು ಬಂಧಿಸಿ, ಮೂರು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಬಾಲಿವುಡ್ ನಟ, ಬಿಜೆಪಿ ಸಂಸದ ಸನ್ನಿ ಡಿಯೋಲ್'ಗೆ ಕೊರೋನಾ ಪಾಸಿಟಿವ್
ಬಾಲಿವುಡ್ ನಟ ಹಾಗೂ ಬಿಜೆಪಿ ಸಂಸದ ಸನ್ನಿ ಡಿಯೋಲ್ ಅವರಿಗೆ ಕೊರೋನಾ ವೈರಸ್ ಸೋಂಕು ತಗುಲಿದೆ ಎಂದು ಬುಧವಾರ ತಿಳಿದುಬಂದಿದೆ.

ಹಿಮಾಚಲ ಪ್ರದೇಶ: ವಾಹನ ಹಳ್ಳಕ್ಕೆ ಬಿದ್ದು 7 ಮಂದಿ ಸಾವು
ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಸೋಮವಾರ ಎಂಟು ಪ್ರಯಾಣಿಕರನ್ನು ಹೊತ್ತ ವಾಹನ ಹಳ್ಳಕ್ಕೆ ಬಿದ್ದು ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಿಮಾಚಲಪ್ರದೇಶ: ನದಿಗೆ ಬಿದ್ದ ವಾಹನ, 7ಮಂದಿ ದುರ್ಮರಣ
ಚಾಲಕನ ನಿಯಂತ್ರಣ ತಪ್ಪಿ ವಾಹನವೊಂದು ನದಿಗೆ ಬಿದ್ದ ಪರಿಣಾಮ 7 ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡಿರುವ ಘಟನೆ ಹಿಮಾಚಲ ಪ್ರದೇಶದ ಮಂಡಿಯಲ್ಲಿ ನಡೆದಿದೆ.

ಉದ್ಧವ್ ಠಾಕ್ರೆ ಸ್ವಜನಪಕ್ಷಪಾತದ 'ಕೆಟ್ಟ ಉತ್ಪನ್ನ': ಕಂಗನಾ ರಣಾವತ್
ಮಹಾರಾಷ್ಟ್ರ ಸರ್ಕಾರ, ಕಂಗನಾ ಮೇಲಿನ ದಾಳಿಯನ್ನು ಸಮರ್ಥಿಸಿಕೊಂಡು, ಹಿಮಾಚಲ ಪ್ರದೇಶವನ್ನು ಗಾಂಜಾ ಬೆಳೆಯುವ ಪ್ರದೇಶ ಎಂದು ಕರೆದಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ನಟಿ ಕಂಗನಾ ರಣಾವತ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಅಟಲ್ ಟನಲ್ ಲೋಕಾರ್ಪಣೆ: ಪ್ರಗತಿಯ ಹಾದಿಯಲ್ಲಿ ಸುರಂಗವು ಲಡಾಖ್‌ಗೆ ಹೊಸ ಜೀವಸೆಲೆಯಾಗಲಿದೆ- ಪ್ರಧಾನಿ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಶನಿವಾರ ಹಿಮಾಚಲ ಪ್ರದೇಶದ ರೋಹ್ಟಾಂಗ್ ನಲ್ಲಿ 9.02 ಕಿಲೋ ಮೀಟರ್ ಉದ್ದದ ವಿಶ್ವದಲ್ಲಿಯೇ ಅತಿ ಉದ್ದದ ಹೆದ್ದಾರಿ ಸುರಂಗ ಮಾರ್ಗ ಅಟಲ್ ಸುರಂಗ ಹೆದ್ದಾರಿಯನ್ನು ಉದ್ಘಾಟಿಸಿದ್ದಾರೆ.

ವಿಶ್ವದ ಅತಿ ಉದ್ದದ ಅಟಲ್ ಸುರಂಗವನ್ನು ಅ.3ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ!
ವಿಶ್ವದ ಅತೀ ಉದ್ದದ ಅಟಲ್ ಸುರಂಗ ಮಾರ್ಗವನ್ನು ಅಕ್ಟೋಬರ್ 3ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ.

ಹಿ.ಪ್ರ: 22,222 ಅಡಿ ಎತ್ತರದ ಲಿಯೊ ಪಾರ್ಗಿಲ್ ಶಿಖರ ಏರಿ ಭಾರತದ ಕೀರ್ತಿ ಪತಾಕೆ ಮೆರೆದ ಐಟಿಬಿಪಿ ಪರ್ವತಾರೋಹಿಗಳು!
ಅಂತಾರಾಷ್ಟ್ರೀಯ ಗಡಿಯಲ್ಲಿರುವ ಸಮುದ್ರ ಮಟ್ಟದಿಂದ 22,222 ಅಡಿ ಎತ್ತರದಲ್ಲಿರುವ ಲಿಯೊ ಪಾರ್ಗಿಲ್ ಪರ್ವತವನ್ನು ಐಟಿಬಿಪಿ ಪರ್ವತಾರೋಹಿಗಳು ಏರಿ ಭಾರತದ ಬಾವುಟ ಹಾರಿಸಿ ದೇಶದ ಕೀರ್ತಿ ಪತಾಕೆ ಮೆರೆದಿದ್ದಾರೆ.

ಪುತ್ರಿಯ ಅನ್‍ಲೈನ್ ಶಿಕ್ಷಣಕ್ಕಾಗಿ ಹಸು ಮಾರಿ ಸ್ಮಾರ್ಟ್ ಫೋನ್ ಖರೀದಿಸಿದ ರೈತ: ಅಧಿಕಾರಿಗಳಿಂದ ಸತ್ಯಾಂಶ ಬಯಲು!
ಮಗಳ ಆನ್‍ಲೈನ್ ಶಿಕ್ಷಣಕ್ಕಾಗಿ ರೈತ ಹಸು ಮಾರಿರುವ ಸುದ್ದಿ ದೇಶಾದ್ಯಂತ ವ್ಯಾಪಕ ವೈರಲ್ ಆಗಿತ್ತು. ಆದರೆ ಈ ಸುದ್ದಿ ಸುಳ್ಳು ಎನ್ನಲಾಗಿದೆ.

