ಉದ್ಧವ್ ಠಾಕ್ರೆ ಸ್ವಜನಪಕ್ಷಪಾತದ 'ಕೆಟ್ಟ ಉತ್ಪನ್ನ': ಕಂಗನಾ ರಣಾವತ್
ಮಹಾರಾಷ್ಟ್ರ ಸರ್ಕಾರ, ಕಂಗನಾ ಮೇಲಿನ ದಾಳಿಯನ್ನು ಸಮರ್ಥಿಸಿಕೊಂಡು, ಹಿಮಾಚಲ ಪ್ರದೇಶವನ್ನು ಗಾಂಜಾ ಬೆಳೆಯುವ ಪ್ರದೇಶ ಎಂದು ಕರೆದಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ನಟಿ ಕಂಗನಾ ರಣಾವತ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಹಿಮಾಚಲ ಪ್ರದೇಶ: ಮಹಾರಾಷ್ಟ್ರ ಸರ್ಕಾರ, ಕಂಗನಾ ಮೇಲಿನ ದಾಳಿಯನ್ನು ಸಮರ್ಥಿಸಿಕೊಂಡು, ಹಿಮಾಚಲ ಪ್ರದೇಶವನ್ನು ಗಾಂಜಾ ಬೆಳೆಯುವ ಪ್ರದೇಶ ಎಂದು ಕರೆದಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ನಟಿ ಕಂಗನಾ ರಣಾವತ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನನನ್ನು ನಾಮಕ್ ಹರಮ್ ಎಂದು ಕರೆದು ಮುಂಬೈ ಇಲ್ಲವಾದರೆ ಊಟ ಸಿಗಲ್ಲ ಎಂದಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ನಾಚಿಕೆಯಾಗಬೇಕು. ನಿಮ್ಮ ಮಗನ ವಯಸ್ಸಿನ ಒಂಟಿ ಮಹಿಳೆಯೊಂದಿಗೆ ಹೀಗೆಲ್ಲಾ ಮಾತನಾಡುವ ನೀವು ಸ್ವಜನಪಕ್ಷಪಾತದ ಕೆಟ್ಟ ಉತ್ಪನ್ನ ಎಂದು ಟೀಕಿಸಿದ್ದಾರೆ.
ನಿಮ್ಮಂತೆಯೇ ನನ್ನ ತಂದೆಯ ಹಣ, ಅಧಿಕಾರದಲ್ಲಿ ಕುಡಿಯುವುದಿಲ್ಲ, ನಾನು ಸ್ವಜನಪಕ್ಷಪಾತದ ಉತ್ಪನ್ನವಾಗಲು ಬಯಸಿದರೆ ನಾನು ಹಿಮಾಚಲದಲ್ಲಿ ಉಳಿದುಕೊಳ್ಳಬಹುದಿತ್ತು, ಹೆಸರಾಂತ ಕುಟುಂಬದಿಂದ ಬಂದಿದ್ದು, ಅವರ ಸಂಪತ್ತು ಮತ್ತು ಅನುಗ್ರಹದಿಂದ ಬದುಕಲು ನಾನು ಬಯಸುವುದಿಲ್ಲ, ಕೆಲವು ಜನರಿಗೆ ಸ್ವಾಭಿಮಾನ ಮತ್ತು ಸ್ವಯಂ ಮೌಲ್ಯವಿದೆ ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


