Health Ministry

ಕೋವಿಡ್-19: ಏಪ್ರಿಲ್ 15 ರವರೆಗೆ ಎಲ್ಲಾ ಪ್ರವಾಸಿ ವೀಸಾ ರದ್ದು, ಇಟಲಿ, ದ.ಕೊರಿಯಾಗೆ ಏರ್ ಇಂಡಿಯಾ ಹಾರಾಟ ಸ್ಥಗಿತ
ದೇಶದಲ್ಲಿ ಕೊರೋನಾವೈರಸ್ ಭಯದ ನಡುವೆ ಏರ್ ಇಂಡಿಯಾ ವಿಮಾನ ಸಂಸ್ಥೆ ಇಟಲಿ ಹಾಗೂ ದಕ್ಷಿಣ ಕೊರಿಯಾಗೆ ತೆರಳುವ ತನ್ನೆಲ್ಲಾ ವಿಮಾನಗಳನ್ನು ಮಾರ್ಚ್ 25 ಹಾಗೂ ಮಾರ್ಚ್ 28 ರವರೆಗೆ ರದ್ದುಗೊಳಿಸಿದೆ ಕೊರೋನಾವೈರಸ್ ಮುನ್ನೆಚ್ಚರಿಕಾ ಕ್ರಮವಾಗಿ ಕೇಂದ್ರ ಸರ್ಕಾರ ಏಪ್ರಿಲ್ 15 ರವರೆಗೆ ಎಲ್ಲಾ ಪ್ರವಾಸಿ ವೀಸಾ ರದ್ದುಪಡಿಸಿದ ನಂತರ ವಿಮಾನಯಾನ ಸಂಸ್ಥೆ ಈ ಕ್ರಮಕ್ಕೆ ಮುಂದಾಗಿದೆ.

ಪುಣೆಯಲ್ಲಿ ಇಬ್ಬರಲ್ಲಿ ಕೊರೊನಾ ವೈರಸ್ ಪತ್ತೆ: ಭಾರತದಲ್ಲಿ ಸೋಂಕಿತರ ಸಂಖ್ಯೆ 47ಕ್ಕೆ ಏರಿಕೆ
ದೇಶದಲ್ಲಿ ಮತ್ತೆ ಏಳು ಹೊಸ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು ಇದುವರೆಗೆ ದೃಢಪಟ್ಟವರ ಸಂಖ್ಯೆ 47ಕ್ಕೇರಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ತಿಳಿಸಿದೆ.

ಹೆಚ್ಚೆಚ್ಚು ವಿದ್ಯಾರ್ಥಿಗಳು ಒಗ್ಗೂಡದಂತೆ ನೋಡಿಕೊಳ್ಳಿ: ಶಾಲೆಗಳಿಗೆ ಸಲಹೆ ನೀಡಿದ ಆರೋಗ್ಯ ಸಚಿವಾಲಯ
ಚೀನಾದಲ್ಲಿ ಮರಣಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್ ಇದೀಗ ಭಾರತದಲ್ಲೂ ಹೆಜ್ಜೆ ಇಟ್ಟಿದ್ದು, 29 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚೆಚ್ಚು ವಿದ್ಯಾರ್ಥಿಗಳು ಒಗ್ಗೂಡದಂತೆ ನೋಡಿಕೊಳ್ಳುವಂತೆ ದೇಶದಲ್ಲಿರುವ ಎಲ್ಲಾ ಶಾಲೆಗಳಿಗೂ ಕೇಂದ್ರ ಆರೋಗ್ಯ ಸಚಿವಾಲಯ ಸಲಹೆ ನೀಡಿದೆ.

ನೋಯ್ಡಾ ಶಾಲೆಯಲ್ಲಿ ಕೊರೋನಾ ಭೀತಿ: 40 ವಿದ್ಯಾರ್ಥಿಗಳ ಮೇಲೆ 28 ದಿನ ತೀವ್ರ ನಿಗಾ
ಚೀನಾ ಮಾತ್ರವಲ್ಲದೇ ವಿಶ್ವಾದ್ಯಂತ ಮೂರು ಸಾವಿರಕ್ಕೂ ಅಧಿಕ ಮಂದಿಯ ಬಲಿ ತೆಗೆದುಕೊಂಡಿರುವ ಮಾರಕ ಕೊರೋನಾ ವೈರಸ್ ಭೀತಿಯಿಂದಾಗಿ ನೋಯ್ಡಾದ ಶಾಲೆಯೊಂದರ 40 ಶಾಲಾಮಕ್ಕಳನ್ನು 28 ದಿನಗಳ ಕಾಲ ತೀವ್ರ ನಿಗಾದಲ್ಲಿರಿಸಲಾಗಿದ್ದು, ಪ್ರಸ್ತುತ ಶಾಲೆಯನ್ನು ಸ್ಥಗಿತ ಮಾಡಲಾಗಿದೆ.

ಶೀಘ್ರದಲ್ಲಿಯೇ ಕಾನೂನು ಬದ್ಧ ಸಿಗರೇಟ್ ಸೇವನೆ ವಯಸ್ಸಿನ ಮಿತಿ 18ರಿಂದ 21ಕ್ಕೆ ಏರಿಕೆ- ಆರೋಗ್ಯ ಸಚಿವಾಲಯ
ಕಾನೂನು ಬದ್ಧ ಸಿಗರೇಟ್ ಸೇವನೆ ವಯಸ್ಸಿನ ಮಿತಿಯನ್ನು ಈಗಿರುವ 18ರಿಂದ 21 ವರ್ಷಕ್ಕೆ ಹೆಚ್ಚಿಸಲು ಕೇಂದ್ರ ಆರೋಗ್ಯ ಸಚಿವಾಲಯ ಚಿಂತನೆ ನಡೆಸಿದೆ.

ವುಹಾನ್ ಕಾರ್ಯಾಚರಣೆ: ಏರ್ ಇಂಡಿಯಾ, ಆರೋಗ್ಯ ಸಚಿವಾಲಯಕ್ಕೆ ಪ್ರಧಾನಿ ಮೋದಿ ಶ್ಲಾಘನೆ
ಕೊರೊನಾ ವೈರಾಣು ಸೋಂಕು ವ್ಯಾಪಕವಾಗಿ ಕಾಣಿಸಿಕೊಂಡಿದ್ದ ಚೀನಾ ದೇಶ ವುಹಾನ್ ನಲ್ಲಿನ ಭಾರತೀಯರನ್ನು ಅಲ್ಲಿನ ವಾಪಸ್ ಕರೆತರುವಲ್ಲಿ ಶ್ರಮಿಸಿದ ಏರ್ ಇಂಡಿಯಾ ಮತ್ತು ಆರೋಗ್ಯ ಸಚಿವಾಲಯದ ಅಧಿಕಾರಿಗಳ ಪ್ರಯತ್ನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಗುರುವಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೊರೋನಾ ವೈರಸ್ ಆತಂಕ: ಕೇಂದ್ರ ಆರೋಗ್ಯ ಸಚಿವಾಲಯದಿಂದ ಪರಾಮರ್ಶೆ
ಈಗ ಎಲ್ಲೆಲ್ಲೂ ಕೊರೋನಾ ವೈರಸ್ ದ್ದೇ ಮಾತು. ಎಲ್ಲಿ ವೈರಸ್ ಸೋಂಕು ತಗುಲುತ್ತದೋ ಎಂಬ ಭೀತಿಯಲ್ಲಿ ಜನತೆ ಇರುವಾಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವಿಶೇಷ ಕಾರ್ಯದರ್ಶಿ ಸಂಜೀವ್ ಕುಮಾರ್ ವಿಮಾನ ನಿಲ್ದಾಣಗಳಲ್ಲಿ ಮತ್ತು ಆಸ್ಪತ್ರೆಗಳಲ್ಲಿ ಮಾಡಿರುವ ಸಿದ್ದತೆಗಳ ಬಗ್ಗೆ ಪರಾಮರ್ಶೆ ನಡೆಸಿದ್ದಾರೆ.

ಕೇಂದ್ರ ಸರ್ಕಾರ, ಬಿಲ್ ಅಂಡ್ ಮಿಲಿಂಡಾ ಗೇಟ್ಸ್ ಪ್ರತಿಷ್ಠಾನ ನಡುವಿನ ಒಪ್ಪಂದಕ್ಕೆ ಸಚಿವ ಸಂಪುಟ ಅಸ್ತು
ಆರೋಗ್ಯ ವಲಯದಲ್ಲಿ ಸಹಕಾರಕ್ಕಾಗಿ ಕೇಂದ್ರ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೇಂದ್ರ ಸರ್ಕಾರ ಮತ್ತು ಬಿಲ್ ಅಂಡ್ ಮಿಲಿಂಡಾ ಗೇಟ್ಸ್ ಪ್ರತಿಷ್ಠಾನ 2019ರ ನವೆಂಬರ್ ನಲ್ಲಿ ಮಾಡಿಕೊಳ್ಳಲಾದ ಒಪ್ಪಂದಕ್ಕೆ ಕೇಂದ್ರ ಸಚಿವ ಸಂಪುಟ ತಾತ್ವಿಕ ಒಪ್ಪಿಗೆ ನೀಡಿದೆ.

ಹೊಸ ವರ್ಷಾಚರಣೆ: ತುರ್ತು ಸೇವೆಗೆ 23 ಆರೋಗ್ಯ ಕವಚ 108 ವಾಹನ ಸಜ್ಜು
ಹೊಸ ವರ್ಷಾಚರಣೆಯ ವೇಳೆ ಸಂಭವಿಸುವ ರಸ್ತೆ ಅಪಘಾತಗಳಿಂದ ಉಂಟಾಗುವ ಜೀವ ಹಾನಿಯನ್ನು ತಡೆಯಲು ಜಿಲ್ಲೆಯಾದ್ಯಂತ 23 ಆರೋಗ್ಯ ಕವಚ 108 ಅಂಬ್ಯುಲೆನ್ಸ್ ಗಳ ಸೇವೆಯನ್ನು ಸುಸಜ್ಜಿತಗೊಳಿಸಲಾಗಿದೆ ಎಂದು 108 ಜಿಲ್ಲಾ ವ್ಯವಸ್ಥಾಪಕ ಸಂತೋಷ ಬೋಡಾ ತಿಳಿಸಿದ್ದಾರೆ.

