Health Ministry

ಕೊವಿಡ್-19: ರಾಜ್ಯದ 8 ಜಿಲ್ಲೆ ಸೇರಿ ದೇಶದ 170 ಜಿಲ್ಲೆಗಳು ಹಾಟ್ ಸ್ಪಾಟ್ ಎಂದು ಘೋಷಿಸಿದ ಕೇಂದ್ರ
ರಾಜ್ಯದಲ್ಲಿ 8 ಜಿಲ್ಲೆಗಳು ಸೇರಿದಂತೆ ದೇಶಾದ್ಯಂತ 170 ಜಿಲ್ಲೆಗಳನ್ನು ಕೊರೋನಾ ಸೋಂಕಿನ ಹಾಟ್ ಸ್ಪಾಟ್ ಎಂದು ಗುರುತಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

28 ದಿನಗಳವರೆಗೆ ಯಾವುದೇ ಪಾಸಿಟಿವ್ ಪ್ರಕರಣ ವರದಿಯಾಗದಿದ್ದರೆ ಮಾತ್ರ ಅದು ಕೊರೋನಾ ಮುಕ್ತ ಪ್ರದೇಶ: ಕೇಂದ್ರ
ದೇಶದಲ್ಲಿ 21 ದಿನಗಳ ಲಾಕ್ ಡೌನ್ ಮುಗಿದರೂ ಮಹಾಮಾರಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ 19 ದಿನಗಳವರೆಗೆ ವಿಸ್ತರಿಸಿದ್ದಾರೆ.

ಕೊರೋನಾ ಸೋಂಕು, ಲಾಕ್ ಡೌನ್ ಮಧ್ಯೆ ಆರೋಗ್ಯ ಬೇಕೆ: ನಿಮ್ಹಾನ್ಸ್ ನ ಲೈವ್ ಯೋಗ ತರಗತಿಯಲ್ಲಿ ಭಾಗಿಯಾಗಿ!
ಎಲ್ಲವೂ ಅಂದುಕೊಂಡಂತೆ ಆದರೆ ನಿಮ್ಹಾನ್ಸ್ ನ ಯೋಗ ವೃತ್ತಿಪರರು ವಿಶ್ವಾದ್ಯಂತ ಕೋವಿಡ್-19 ರೋಗಿಗಳಿಗೆ ಆನ್ ಲೈನ್ ಯೋಗ ಥೆರಪಿ ಹೇಳಿಕೊಡಲಿದ್ದಾರೆ. ಪ್ರಸ್ತುತ ನಿಮ್ಹಾನ್ಸ್ ನ ಆಂತರಿಕ ಯೋಗ ಕೇಂದ್ರ ಆನ್ ಲೈನ್ ಯೋಗವನ್ನು ತರಗತಿಗಳನ್ನು ಒತ್ತಡ ನಿರ್ವಹಣೆ ಮಾಡುವುದು ಹೇಗೆ ಎಂದು ಹೇಳಿಕೊಡುತ್ತಾರೆ.

ದೇಶಾದ್ಯಂತ ನಿನ್ನೆ 16,002 ಕೊರೋನಾ ಪರೀಕ್ಷೆ, ಶೇಕಡ 0.2ರಷ್ಟು ಮಾತ್ರ ಪಾಸಿಟಿವ್ ಪ್ರಕರಣ
ಕೊರೊನಾ ವೈರಸ್ ಹಬ್ಬುವ ವಿಷಯದಲ್ಲಿ ಪ್ರಪಂಚದ ಉಳಿದ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ ಸೋಂಕು ಪ್ರಸರಣ ಪ್ರಮಾಣ ಅತ್ಯಂತ ಕಡಿಮೆಯಿದೆ. ಅಲ್ಲದೆ, ಸೋಂಕಿನಿಂದ ಚೇತರಿಸಿಕೊಳ್ಳುವವರ ಸಂಖ್ಯೆಯೂ ಆಶಾದಾಯಕವಾಗಿದೆ. ಈ ವೈರಸ್‌ಗೆ ಸೂಕ್ತ ಲಸಿಕೆ ಇಲ್ಲದಿದ್ದರೂ, ನಮ್ಮ ವೈದ್ಯರು ಲಭ್ಯವಿರುವ ಔಷಧಿಗಳನ್ನು ಬಳಸಿ ಚಿಕಿತ್ಸೆ ಕಲ್ಪಿಸುತ್ತಿದ್ದಾರೆ.

ಭಾರತದಲ್ಲಿ ಕೊರೋನಾ 2-3 ನೇ ಹಂತದ ನಡುವೆ ಇದೆ!
ಭಾರತದಲ್ಲಿ ಕೊರೋನಾ ಸಾಂಕ್ರಾಮಿಕ ರೋಗ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೆಲವೊಂದು ಪ್ರದೇಶಗಳಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿದ್ದು, ಇದು ಯಾವ ಹಂತದಲ್ಲಿದೆ ಎಂಬ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಜನರ ಕಡಿಮೆ ಸಹಕಾರದಿಂದ ದೇಶದಲ್ಲಿ ಕೋವಿಡ್-19 ಹಾಟ್ ಸ್ಪಾಟ್ ಹೆಚ್ಚುತ್ತಿದೆ: ಆರೋಗ್ಯ ಸಚಿವಾಲಯ
ದೇಶಾದ್ಯಂತ ಈವರೆಗೂ 1,200 ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಹಾಟ್ ಸ್ಪಾಟ್ ಗಳು ಏರಿಕೆಯಾಗುತ್ತಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಸಂಪೂರ್ಣ ಲಾಕ್'ಡೌನ್ ನಡುವಲ್ಲೂ ದೇಶದಲ್ಲಿ ಹೆಚ್ಚಿದ ಕೊರೋನಾ ಹಾವಳಿ: 873ಕ್ಕೇರಿದ ಸೋಂಕಿತರ ಸಂಖ್ಯೆ, 900ರ ಗಡಿಯತ್ತ ಭಾರತ
ದೇಶದಾದ್ಯಂತ ಸಂಪೂರ್ಣ ಲಾಕ್'ಡೌನ್ ಘೋಷಣೆ ಮಾಡಿದ್ದರೂ. ಇದರ ನಡುವಲ್ಲೂ ಮಹಾಮಾರಿ ಕೊರೋನಾ ವೈರಸ್ ಹಾವಳಿ ತೀವ್ರಗೊಂಡಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ 873ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಕೊರೋನಾ ವೈರಸ್ ಸಮುದಾಯದಲ್ಲಿ ಹರಡಿಲ್ಲ, ಪ್ರಮಾಣ ಸ್ಥಿರವಾಗಿದೆ: ಕೇಂದ್ರ ಆರೋಗ್ಯ ಸಚಿವಾಲಯ
ಭಾರತದಲ್ಲಿ ಕೊರೋನಾ ವೈರಸ್ ಸಂಖ್ಯೆ ಏರಿಕೆಯಾಗುತ್ತಿರುವುದು ಸೋಂಕು ಸಮುದಾಯದಲ್ಲಿ ಹರಡಿದೆಯೇ ಎಂಬ ಆತಂಕ ಮೂಡಿತ್ತು. ಆದರೆ ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟನೆ ನೀಡಿದ್ದು, ಆತಂಕ ದೂರ ಮಾಡಿದೆ.

ಕೊರೋನಾ ವೈರಸ್: ಸಂಪೂರ್ಣ ದೇಶ ಸ್ಥಗಿತಕ್ಕೆ WHO ಸಲಹೆ; ಆಡಿಯೋ ನಕಲಿ ಎಂದ ಕೇಂದ್ರ ಸರ್ಕಾರ
ಭಾರತದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸಂಪೂರ್ಣ ದೇಶವನ್ನು ಸ್ಥಗಿತಗೊಳಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿತ್ತು ಎಂಬ ಆಡಿಯೋ ಸಂದೇಶ ಸುಳ್ಳು ಸುದ್ದಿ ಎಂದು ಕೇಂದ್ರ ಸರ್ಕಾರ ಹೇಳಿದೆ.

