health department

ಗುಣಮಟ್ಟದ ಕೋವಿಡ್-19 ಟೆಸ್ಟ್: ಕರ್ನಾಟಕಕ್ಕೆ ಅಗ್ರ ಸ್ಥಾನ, ನಂತರದಲ್ಲಿ ಒಡಿಶಾ, ಕೇರಳ
ದೇಶಾದ್ಯಂತ ಅಬ್ಬರಿಸುತ್ತಿರುವ ಮಾರಕ ಕೊರೋನಾ ವೈರಸ್ ಸೋಂಕಿತರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಕರ್ನಾಟಕ ಮುಂದಿದೆ. ಈ ಬಗ್ಗೆ ಅಧ್ಯಯನವೊಂದು ವರದಿ ನೀಡಿದ್ದು, ಗುಣಮಟ್ಟದ ಕೋವಿಡ್-19 ಟೆಸ್ಟ್ ನಡೆಸುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಅಗ್ರ ಸ್ಥಾನದಲ್ಲಿದೆ ಎನ್ನಲಾಗಿದೆ.

ಮಧ್ಯಮ ಮತ್ತು ತೀವ್ರ ಕೋವಿಡ್ ಸೋಂಕಿನ ಲಕ್ಷಣವುಳ್ಳವರಿಗೆ ಮಾತ್ರ ಆಸ್ಪತ್ರೆಗೆ ದಾಖಲು: ಆರೋಗ್ಯ ಇಲಾಖೆ
ಕೋವಿಡ್ ಸೋಂಕಿಗೆ ಚಿಕಿತ್ಸೆ ಕೋರಿ ಆಸ್ಪತ್ರೆಗೆ ಭೇಟಿ ನೀಡುವ ಹಾಸಿಗೆಯನ್ನು ಲಭ್ಯವಾಗಿಸಲು ತೀವ್ರ ಮತ್ತು ಸಾಮಾನ್ಯ ಪೀಡಿತ ಜನರಿಗೆ ಮಾತ್ರ ಆಸ್ಪತ್ರೆಗೆ ದಾಖಲಿಸಿಕೊಳ್ಳಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.

ಆರೋಗ್ಯ ಇಲಾಖೆಯ ಡಿ ಗ್ರೂಪ್ ನೌಕರರಿಗೆ '10 ಸಾವಿರ ರಿಸ್ಕ್ ಅಲೆಯನ್ಸ್' ಘೋಷಣೆ
ಕೊರೋನಾ ವೈರಸ್ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ತಮ್ಮ ಜೀವ ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುತ್ತಿರುವ ಆರೋಗ್ಯ ಇಲಾಖೆಯ ಡಿ ಗ್ರೂಪ್ ನೌಕರರಿಗೆ ರಾಜ್ಯ ಸರ್ಕಾರ ಶುಭಸುದ್ದಿ ನೀಡಿದ್ದು, ಮಾಸಿಕ 10 ಸಾವಿರ ರೂ ರಿಸ್ಕ್ ಅಲೆಯನ್ಸ್ ಘೋಷಣೆ ಮಾಡಿದೆ.

ಕೋವಿಡ್ ಶಂಕಿತ ರೋಗಿಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಬೇಕು: 108 ಆರೋಗ್ಯ ಕವಚಕ್ಕೆ ಆರೋಗ್ಯ ಇಲಾಖೆ ಸೂಚನೆ
ಕೊರೋನಾ ಸೋಂಕಿನ ಶಂಕಿತ ವ್ಯಕ್ತಿಯ ತಪಾಸಣಾ ವರದಿ ಬರುವುದು ಬಾಕಿ ಇದ್ದರೂ ಅವರನ್ನು ತಕ್ಷಣ ನಿಗದಿತ ಕೋವಿಡ್ ಆಸ್ಪತ್ರೆಗೆ ಕೂಡಲೇ ದಾಖಲಿಸಬೇಕು ಎಂದು ಆರೋಗ್ಯ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಆದೇಶ ನೀಡಿದ್ದಾರೆ.

ಕೊರೋನಾ ಸೋಂಕಿತ ನಾಗರಿಕರು, ಸರ್ಕಾರಿ ಸಿಬ್ಬಂದಿ ಧೃತಿಗೆಡುವ ಅಗತ್ಯವಿಲ್ಲ: ಸಿಎಂ ಯಡಿಯೂರಪ್ಪ
ಕೋರೋನಾ ಸೋಂಕು ಹಿನ್ನಲೆಯಲ್ಲಿ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡ ಸಶಸ್ತ್ರ ಪೇದೆ ಸಾವಿಗೆ ಸಂಬಂಧಿಸಿದಂತೆ ಸಿಎಂ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು, ಕೊರೋನಾ ಸೋಂಕಿತ ನಾಗರಿಕರು, ಸರ್ಕಾರಿ ಸಿಬ್ಬಂದಿ ಧೃತಿಗೆಡುವ ಅಗತ್ಯವಿಲ್ಲ. ಸರ್ಕಾರ ನಿಮ್ಮೊಂದಿಗಿದೆ ಎಂದು ಭರವಸೆ ನೀಡಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆ ಕೊರೋನಾ ವೈರಸ್ ಅವಾಂತರ ಬಿಚ್ಚಿಟ್ಟ ಪೊಲೀಸ್ ಇನ್ಸ್ ಪೆಕ್ಟರ್
ರಾಜ್ಯದಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿರುವಂತೆಯೇ ಇತ್ತ ಆರೋಗ್ಯ ಇಲಾಖೆಯ ಮಹಾ ಎಡವಟ್ಟುಗಳು ಒಂದೊಂದೇ ಬಯಲಾಗುತ್ತಿವೆ,

ಕೊರೋನಾ ದಾಖಲೆ: 24 ಗಂಟೆಗಳಲ್ಲಿ ರಾಜ್ಯಾದ್ಯಂತ 416 ಮಂದಿಗೆ ಸೋಂಕು, ಸೋಂಕಿತರ ಸಂಖ್ಯೆ 8697ಕ್ಕೆ ಏರಿಕೆ
ಕರ್ನಾಟಕದಲ್ಲಿ ಇಂದು 416 ಜನರಿಗೆ ಕೊರೋನಾ ವೈರಸ್ ದೃಢವಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 8697ಕ್ಕೆ ಏರಿಕೆಯಾಗಿದೆ.

ಕೋವಿಡ್-19: ಬೆಂಗಳೂರು ಮೀರಿಸಿದ ಉಡುಪಿ, ಒಂದೇ ದಿನ 230 ಹೊಸ ಪ್ರಕರಣ, 500ರ ಗಡಿಯತ್ತ ಸೋಂಕಿತರ ಸಂಖ್ಯೆ
ಕೊರೋನಾವೈರಸ್ ಸೋಂಕಿತರ ಸಂಖ್ಯೆಯಲ್ಲಿ ರಾಜಧಾನಿ ಬೆಂಗಳೂರನ್ನು ಮೀರಿಸಿರುವ ಉಡುಪಿ ಜಿಲ್ಲೆಯಲ್ಲಿ ಇಂದು ಒಂದೇ ದಿನ ಬರೋಬ್ಬರಿ 230 ಪ್ರಕರಣ ಪತ್ತೆಯಾಗಿದೆ.ಈ ಪೈಕಿ ಬಹುತೇಕ ಮಂದಿ ಕುಂದಾಪುರ ತಾಲೂಕಿನವರಾಗಿದ್ದಾರೆ.

ಅಧಿಕಾರಿಗಳ ಎಡವಟ್ಟು: ಬೇರೆಯವರಿಗೆ ಸ್ಥಳಾವಕಾಶ ಕಲ್ಪಿಸಲು ಕೋವಿಡ್ ಟೆಸ್ಟ್ ಇಲ್ಲದೆಯೆ ಕ್ವಾರಂಟೈನ್ ಅವಧಿ ಕಡಿತ!
ಇತರೆ ರಾಜ್ಯ ಹಾಗೂ ವಿದೇಶಗಳಿಂದ ಜನ ಭಾರಿ ಸಂಖ್ಯೆಯಲ್ಲಿ ಬೆಂಗಳೂರಿಗೆ ಆಗಮಿಸುತ್ತಿದ್ದು, ಅವರೆಲ್ಲರನ್ನೂ ಕ್ವಾರಂಟೈನ್ ಗೆ ಒಳಪಡಿಸುವ ಜವಾಬ್ದಾರಿ ಹೊತ್ತಿರುವ ಅಧಿಕಾರಿಗಳು ದೊಡ್ಡ ಎಡವಟ್ಟು ಮಾಡುತ್ತಿದ್ದು, ಕೊರೋನಾ ವೈರಸ್ ಮತ್ತಷ್ಟು ಹರಡುವ ಭೀತಿ ಎದುರಾಗಿದೆ.

