Gujarat police

ಗುಜರಾತ್‌ನಲ್ಲಿ ಮಹಿಳೆಯರು ನಾಪತ್ತೆ: 39 ಸಾವಿರ ಮಂದಿ ಹಿಂತಿರುಗಿದ್ದಾರೆ, 2,124 ಮಂದಿ ಪತ್ತೆ ಸಾಧ್ಯವಾಗಿಲ್ಲ; ಪೊಲೀಸರು
ಗುಜರಾತ್‌ನಲ್ಲಿ ಕಾಣೆಯಾದ 41,621 ಮಹಿಳೆಯರ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ವೈರಲ್ ಆದ ನಂತರ, ರಾಜ್ಯ ಸರ್ಕಾರದ ರಕ್ಷಣೆಗೆ ನಿಂತಿರುವ ಗುಜರಾತ್ ಪೊಲೀಸರು, ಈ ಪೈಕಿ 39,497 ಮಂದಿ ಹಿಂತಿರುಗಿದ್ದಾರೆ ಎಂದು ಸಾಮಾಜಿಕ ಮಾಧ್ಯಮದ ಮೂಲಕ ಸ್ಪಷ್ಟಪಡಿಸಿದ್ದಾರೆ.

ರಾಜಸ್ಥಾನ ವಿಮಾನ ನಿಲ್ದಾಣದಿಂದ ಪಕ್ಷದ ವಕ್ತಾರ ಸಾಕೇತ್ ಗೋಖಲೆ ಬಂಧಿಸಿದ ಗುಜರಾತ್ ಪೊಲೀಸರು: ಟಿಎಂಸಿ
ರಾಜಸ್ಥಾನ ವಿಮಾನ ನಿಲ್ದಾಣದಿಂದ ಗುಜರಾತ್ ಪೊಲೀಸರು ನಮ್ಮ ಪಕ್ಷದ ವಕ್ತಾರ ಸಾಕೇತ್ ಗೋಖಲೆ ಅವರನ್ನು ಬಂಧಿಸಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಮಂಗಳವಾರ ಹೇಳಿದೆ. ಆದರೆ, ಪೊಲೀಸರು ಈ ಬಗ್ಗೆ ನಮಗೆ ಯಾವುದೇ ಮಾಹಿತಿಯಿಲ್ಲ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ವಿರುದ್ಧ ಸುಳ್ಳು ಮಾಹಿತಿ ಹಂಚಿಕೆ: ಟಿಎಂಸಿ ವಕ್ತಾರ ಸಾಕೇತ್ ಗೋಖಲೆಯನ್ನು ಬಂಧಿಸಿದ ಗುಜರಾತ್ ಪೊಲೀಸರು
ಅಹಮದಾಬಾದ್ ಸೈಬರ್ ಕ್ರೈಂ ಪೊಲೀಸರು ಮಂಗಳವಾರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಕ್ತಾರ ಸಾಕೇತ್ ಗೋಖಲೆ ಅವರನ್ನು ಜೈಪುರ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಬಂಧಿತ ಅಧಿಕಾರಿಯೊಂದಿಗೆ ಅಮಿತ್ ಶಾ ಫೋಟೋ ಟ್ವೀಟ್: ನಿರ್ದೇಶಕ ಅವಿನಾಶ್ ದಾಸ್ ಗೆ ಜಾಮೀನು!
ಬಂಧಿತ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಅವರೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇರುವ ಫೋಟೋವನ್ನು ಟ್ವೀಟ್ ಮಾಡಿದ್ದ ನಿರ್ದೇಶಕ ಅವಿನಾಶ್ ದಾಸ್ ಅವರಿಗೆ ಜಾಮೀನು ಸಿಕ್ಕಿದೆ.

ಬಂಧಿತ ಅಧಿಕಾರಿಯೊಂದಿಗೆ ಕೇಂದ್ರ ಸಚಿವ ಅಮಿತ್ ಶಾ ಫೋಟೋ ಹಂಚಿಕೊಂಡಿದ್ದ ಚಿತ್ರ ನಿರ್ದೇಶಕನ ಬಂಧನ!
ಬಂಧಿತ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಅವರೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇರುವ ಫೋಟೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡ ಪ್ರಕರಣದಲ್ಲಿ ಗುಜರಾತ್ ಪೊಲೀಸರು ಮಂಗಳವಾರ ಮುಂಬೈನಿಂದ ಚಲನಚಿತ್ರ ನಿರ್ದೇಶಕ ಅವಿನಾಶ್ ದಾಸ್ ಅವರನ್ನು ಬಂಧಿಸಿದ್ದಾರೆ.

ಭಾರತೀಯ ಮೀನುಗಾರನ ಹತ್ಯೆ ಪ್ರಕರಣ: ಪಾಕಿಸ್ತಾನದ 10 ಕಡಲ ಭದ್ರತಾ ಸಿಬ್ಬಂದಿ ವಿರುದ್ಧ ಎಫ್ಐಆರ್
ಗುಜರಾತ್ ಕರಾವಳಿಯ ಅರೇಬಿಯನ್ ಸಮುದ್ರದ ಗಡಿರೇಖೆ ಬಳಿ ಪಾಕಿಸ್ತಾನದ ಭದ್ರತಾ ಸಿಬ್ಬಂದಿ, ಭಾರತೀಯ ಮೀನುಗಾರರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ಸಂಬಂಧ ಇದೀಗ 10 ಪಾಕ್ನ ನೌಕಾ ನೆಲೆಯ ಭದ್ರತಾ ಸಿಬ್ಬಂದಿ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.

ಋತುಸ್ರಾವದ ಕುರಿತು ವಿದ್ಯಾರ್ಥಿನಿಯರ ಒಳಒಡುಪು ಪರೀಕ್ಷಿಸಿದ್ದ ಕಾಲೇಜು ಪ್ರಾಂಶುಪಾಲರ ಅಮಾನತು!
ಕಾಲೇಜಿಗೆ ಬರುವ ವಿದ್ಯಾರ್ಥಿನಿಯರ ಋತುಸ್ರಾವದ ಕುರಿತು ಒಳಉಡುಪು ಪರೀಕ್ಷೆ ಮಾಡಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಗುಜರಾತ್ ಕಾಲೇಜಿನ ಪ್ರಾಂಶುಪಾಲರನ್ನು ಅಮಾನತು ಮಾಡಲಾಗಿದೆ.

ನಿತ್ಯಾನಂದ ಸ್ವಾಮಿಗೆ ಇಂಟರ್ ಪೋಲ್ ಬ್ಲೂ ಕಾರ್ನರ್ ನೋಟಿಸ್ ಜಾರಿ
ದೇಶ ಬಿಟ್ಟು 'ಕೈಲಾಸ'ಕ್ಕೆ ಪರಾರಿಯಾಗಿರುವ ಸ್ವಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ವಿರುದ್ಧ ಇಂಟರ್ ಪೋಲ್ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದೆ.

ಲೈಂಗಿಕ ಕ್ರಿಯೆಗೆ ಕರೆದ ಪತ್ನಿಗೆ ‘ಬ್ರಹ್ಮಚಾರಿ’ ಪತಿಯಿಂದ ಹಿಗ್ಗಾಮುಗ್ಗಾ ಥಳಿತ!
ತನ್ನೊಡನೆ ಲೈಂಗಿಕ ಕ್ರಿಯೆ ನಡೆಸುವಂತೆ ಕರೆದದ್ದಕ್ಕೆ ಪತಿ ತನಗೆ ಥಳಿಸಿದ್ದು ಮಾತ್ರವಲ್ಲದೆ ಪತಿ ಹಾಗೂ ಆತನ ಕುಟುಂಬ ಸದಸ್ಯರು ತನಗೆ ಕಿರುಕುಳ ನೀಡಿದ್ದರೆಂದು ಮಹಿಳೆಯೊಬ್ಬರು ಪೋಲೀಸರಿಗೆ ದೂರಿತ್ತಿರುವ ಘಟನೆ ಗುಜರಾತಿನಲ್ಲಿ ನಡೆದಿದೆ.

