ಲೈಂಗಿಕ ಕ್ರಿಯೆಗೆ ಕರೆದ ಪತ್ನಿಗೆ ‘ಬ್ರಹ್ಮಚಾರಿ’ ಪತಿಯಿಂದ ಹಿಗ್ಗಾಮುಗ್ಗಾ ಥಳಿತ!
ತನ್ನೊಡನೆ ಲೈಂಗಿಕ ಕ್ರಿಯೆ ನಡೆಸುವಂತೆ ಕರೆದದ್ದಕ್ಕೆ ಪತಿ ತನಗೆ ಥಳಿಸಿದ್ದು ಮಾತ್ರವಲ್ಲದೆ ಪತಿ ಹಾಗೂ ಆತನ ಕುಟುಂಬ ಸದಸ್ಯರು ತನಗೆ ಕಿರುಕುಳ ನೀಡಿದ್ದರೆಂದು ಮಹಿಳೆಯೊಬ್ಬರು ಪೋಲೀಸರಿಗೆ ದೂರಿತ್ತಿರುವ ಘಟನೆ ಗುಜರಾತಿನಲ್ಲಿ ನಡೆದಿದೆ.

ಅಹಮದಾಬಾದ್: ತನ್ನೊಡನೆ ಲೈಂಗಿಕ ಕ್ರಿಯೆ ನಡೆಸುವಂತೆ ಕರೆದದ್ದಕ್ಕೆ ಪತಿ ತನಗೆ ಥಳಿಸಿದ್ದು ಮಾತ್ರವಲ್ಲದೆ ಪತಿ ಹಾಗೂ ಆತನ ಕುಟುಂಬ ಸದಸ್ಯರು ತನಗೆ ಕಿರುಕುಳ ನೀಡಿದ್ದರೆಂದು ಮಹಿಳೆಯೊಬ್ಬರು ಪೋಲೀಸರಿಗೆ ದೂರಿತ್ತಿರುವ ಘಟನೆ ಗುಜರಾತಿನಲ್ಲಿ ನಡೆದಿದೆ.
ಗುಜರಾತಿನ ಡ್ಯಾನಿಲಿಮ್ಡಾದ ಮಹಿಳೆ ಸರ್ಕೆಜ್ ನಗರದ ಯುವಕನನ್ನು ವಿವಾಹವಾಗಿದ್ದಳು. 2016ರಲ್ಲಿ ಯುವತಿ ವಿವಾಹ ನೆರವೇರಿದ್ದು ಅದಾಗಿ ಎರಡು ವರ್ಷಗಳ ನಂತರ 2018ರಲ್ಲಿ ದಂಪತಿಗಳಿಗೆ ಒಂದು ಮಗುವಾಗಿದೆ. ಇದಾಗಿ ಇಬ್ಬರೂ ಚೆನ್ನಾಗಿ ದಾಂಪತ್ಯ ಜೀವನ ನಡೆಸುತ್ತಿದ್ದಾಗಲೇ ಪತಿ ಲೈಂಗಿಕ ಆಸಕ್ತಿ ಕಳೆದುಕೊಂಡಿದ್ದನೆಂದು ಮಹಿಳ್ಖೆ ದೂರಿನಲ್ಲಿ ಉಲ್ಲೇಖಿಸಿದ್ದಾಳ್ಖೆ.
ತಾನು ಪತಿಯನ್ನು ಲೈಂಗಿಕ ಕ್ರಿಯೆಗೆ ಕರೆದಾಗಲೆಲ್ಲಾ ಪತಿ ಮನೆಯಿಂದ ದೂರ ಹೋಗುತ್ತಿದ್ದ. ಕೆಲವು ತಿಂಗಳುಗಳಿಂದಲೂ ಪತಿ ನನ್ನೊಡನೆ ದೈಹಿಕ ಸಂಪರ್ಕ ಹೊಂದಿಲ್ಲ, ತಾನು ಬ್ರಹ್ಮಚರ್ಯ ಪಾಲನೆ ಮಾಡುವುದಾಗಿ ಹೇಳುತ್ತಾನೆ. ಅಲ್ಲದೆ ಆತ ಹಲವರ ಬಳಿ ಸಾಲ ಮಾಡಿದ್ದು ಆರ್ಥಿಕ ತೊಂದರೆ ಅನುಭವಿಸುತ್ತಿದ್ದಾನೆ ಎಂದು ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ.
ಇನ್ನು ಪತಿ ಮನೆಯಿಂದ ಹೊರಹೋಗುತ್ತಲೇ ಆತನ ಕುಟುಂಬಸ್ಥರು ತನಗೆ ಕಿರುಕುಳ ನೀಡುತ್ತಾರೆ. ಇತ್ತೀಚೆಗೆ ಮಗುವಿನ ಕುರಿತಂತೆಯೂ ಕಾಳಜಿ ವಹಿಸದ ಪತಿ ಮಗು ಹಾಗೂ ತನ್ನ ‘ಚಿಕಿತ್ಸೆಗಾಗಿ ಹಣವನ್ನೂ ನೀಡುತ್ತಿಲ್ಲ ಎಂದು ಮಹಿಳೆ ದೂರಿನಲ್ಲಿ ವಿವರಿಸಿದ್ದಾಳೆ. ಸಧ್ಯ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದರೂ ಕೂಡ ಇದುವರೆಗೆ ಯಾರೊಬ್ಬರನ್ನೂ ಬಂಧಿಸಿಲ್ಲ ಎಂದು ವರದಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


