guidelines

ದೇವಾಲಯ ತೆರೆಯಲು ಶೀಘ್ರದಲ್ಲೇ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ
ಮುಂದಿನ ಹಂತದ ಅನ್‌ಲಾಕ್ ವೇಳೆ ಮುಜರಾಯಿ ವ್ಯಾಪ್ತಿಯ ದೇವಾಲಯಗಳನ್ನು ತೆರೆಯುವ ಸಂಬಂಧ ಸಿದ್ಧತೆಗಳು ಆರಂಭವಾಗಿದ್ದು, ಈ ಕುರಿತು ಶೀಘ್ರದಲ್ಲಿಯೇ ರಾಜ್ಯ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಜುಲೈ 1ರಿಂದ ನೂತನ ಶೈಕ್ಷಣಿಕ ವರ್ಷ ಆರಂಭ: ಆನ್'ಲೈನ್, ಆಫ್'ಲೈನ್ ಪಠ್ಯ ಬೋಧನೆಗೆ ಮಾರ್ಗಸೂಚಿ ಬಿಡುಗಡೆ
ಪ್ರಸಕ್ತ ವರ್ಷದ (2021–22) ಶೈಕ್ಷಣಿಕ ವರ್ಷ ಜುಲೈ 1 ರಿಂದ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ, 5 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಕೋವಿಡ್ ಹಿನ್ನೆಲೆಯಲ್ಲಿ ಭೌತಿಕ ತರಗತಿ ಬದಲು ಆನ್'ಲೈನ್ ಮತ್ತು ಆಫ್'ಲೈನ್ ನಲ್ಲಿ ಪಠ್ಯ ಬೋಧನೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ದೈನಂದಿನ ಕೋವಿಡ್-19 ದತ್ತಾಂಶ ಪರಿಷ್ಕರಣೆ ವೇಳೆ ನಿಗದಿತ ಮಾರ್ಗಸೂಚಿಗಳ ಪಾಲನೆ ಕಡ್ಡಾಯ: ರಾಜ್ಯಗಳಿಗೆ ಆರೋಗ್ಯ ಇಲಾಖೆ
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ದೈನಂದಿನ ಕೋವಿಡ್-19 ದತ್ತಾಂಶ ಪರಿಷ್ಕರಣೆ ವೇಳೆ ನಿಗದಿತ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

ಮಕ್ಕಳಲ್ಲಿ ಕೊರೋನಾ ಬಂದರೆ ಏನು ಮಾಡಬೇಕು, ಮುನ್ನೆಚ್ಚರಿಕೆ ಹೇಗೆ?: ಕೇಂದ್ರದಿಂದ ಮಾರ್ಗಸೂಚಿ ಪ್ರಕಟ
ಕೊರೊನಾ ಸೋಂಕಿನ ಎರಡನೇ ಅಲೆಯ ತೀವ್ರತೆ ದೇಶದಲ್ಲಿ ನಿಧಾನವಾಗಿ ಇಳಿಕೆಯಾಗುತ್ತಿದೆ. ಇದೇ ಹೊತ್ತಿಗೆ ಕೊರೋನಾ ಮೂರನೇ ಅಲೆ ಏಳುವ ಆತಂಕ ಜನರನ್ನು ತೀವ್ರವಾಗಿ ಕಾಡುತ್ತಿದೆ.

ಡಿ ಆರ್ ಡಿ ಓ ಕೊರೊನಾ ನಿರೋಧಕ ಔಷಧಿ ಬಳಕೆಗೆ ಕೇಂದ್ರದ ಮಾರ್ಗಸೂಚಿ
ಕೊರೊನಾ ವೈರಸ್ ತಡೆಗಟ್ಟಲು ಡಿ ಆರ್ ಡಿ ಓ ಅಭಿವೃದ್ಧಿಪಡಿಸಿರುವ 2-ಡಿಜಿ (2 ಡಿಆಕ್ಸಿ-ಡಿ ಗ್ಲೂಕೋಸ್) ಔಷಧಿ ಬಳಸುವ ಬಗ್ಗೆ ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಕೋವಿಡ್-19: ಸೋಂಕಿತರ ಆಸ್ಪತ್ರೆ ದಾಖಲು, ಸ್ಥಳಾಂತರ, ಡಿಸ್ಚಾರ್ಜ್ ಕುರಿತು ಹೊಸ ಮಾರ್ಗಸೂಚಿ ಬಿಡುಗಡೆ
ರಾಜ್ಯದಲ್ಲಿ ಕೊರೋನಾ ಸೋಂಕು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲು, ಸ್ಥಳಾಂತರ ಮಾಡಲು ಹಾಗೂ ಆಸ್ಪತ್ರೆಗಳಿಂದ ಬಿಡುಗಡೆ ಮಾಡುವ ಕುರಿತು ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ವಾಯುಯಾನ ಸಿಬ್ಬಂದಿಗೆ ತ್ವರಿತಗತಿಯಲ್ಲಿ ಕೋವಿಡ್-19 ಲಸಿಕೆಗಾಗಿ ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ
ಸಾರ್ವಜನಿಕ ಹಾಗೂ ಖಾಸಗಿ ವಾಯುಯಾನ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ತ್ವರಿತಗತಿಯಲ್ಲಿ ಕೋವಿಡ್-19 ಲಸಿಕೆ ಸೌಕರ್ಯಕ್ಕಾಗಿ ಕೇಂದ್ರ ಸರ್ಕಾರ ಗುರುವಾರ ಮಾರ್ಗಸೂಚಿ ಪ್ರಕಟಿಸಿದೆ.

ಕೋವಿಡ್-19: ಐಸೋಲೇಷನ್, ಕೋವಿಡ್ ಕೇರ್ ಕೇಂದ್ರಗಳಲ್ಲಿರುವ ಸೋಂಕಿತರಿಗೆ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ
ಕೊರೋನಾ ಸೋಂಕಿಗೊಳಗಾಗಿ ಐಸೋಲೇಷನ್, ಹೋಮ್ ಕೇರ್ ಹಾಗೂ ಕೋವಿಡ್ ಕೇರ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಚಿಕಿತ್ಸೆ ಕುರಿತು ರಾಜ್ಯ ಸರ್ಕಾರ ಪರಿಷ್ಕೃತ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿದೆ.

ರಾಜ್ಯದಲ್ಲಿ 14 ದಿನ ಕೊರೋನಾ ಕರ್ಫ್ಯೂ: ಇಂದು ರಾತ್ರಿ 9 ರಿಂದಲೇ ಜಾರಿ, ಬಸ್, ನಮ್ಮ ಮೆಟ್ರೋ, ಟ್ಯಾಕ್ಸಿ ಸೇವೆ ಸ್ಥಗಿತ
ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯು ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಈ ಹಿನ್ನೆಲೆಯಲ್ಲಿ ಕಠಿಣ ಕ್ರಮಗಳನ್ನು ಕೈಗೊಂಡಿರುವ ರಾಜ್ಯ ಸರ್ಕಾರ ಎರಡು ವಾರಗಳ ಕಾಲ ಕೊರೋನಾ ಕರ್ಫ್ಯೂ ಜಾರಿಗೊಳಿಸಿ ತೀರ್ಮಾನ ಕೈಗೊಂಡಿದೆ.

