Gaza

ಗಾಜಾ ಸಾವಿನ ಸಂಖ್ಯೆ 5,500ಕ್ಕೆ ಏರಿಕೆ, ಅವರಲ್ಲಿ ಅರ್ಧದಷ್ಟು ಮಕ್ಕಳು!
ಗಾಜಾ ಪಟ್ಟಿಯಲ್ಲಿ ಹಮಾಸ್ ಉಗ್ರರು ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಘರ್ಷಣೆಯಲ್ಲಿ ಸಾವಿಗೀಡಾದವರ ಸಂಖ್ಯೆ 5500ಕ್ಕೆ ಏರಿದ್ದು, ಅವರಲ್ಲಿ ಅರ್ಧದಷ್ಟು ಮಕ್ಕಳು ಇದ್ದಾರೆ ಎಂಬ ಆಘಾತಕಾರಿ ಮಾಹಿತಿ ಮಂಗಳವಾರ ಹೊರ ಬಿದ್ದಿದೆ.

ಗಾಜಾಗೆ ಮಾನವೀಯ ಆಧಾರದಲ್ಲಿ ತಲುಪಿತು ಅತ್ಯಗತ್ಯ ವಸ್ತುಗಳ ಸರಕು
ಯುದ್ಧಗ್ರಸ್ತವಾಗಿರುವ ಗಾಜಾಗೆ ಮಾನವೀಯ ಆಧಾರದಲ್ಲಿ ಅತ್ಯಗತ್ಯ ವಸ್ತುಗಳ ಸರಕುಗಳನ್ನು ಹೊತ್ತ ವಾಹನಗಳ 3 ನೇ ತಂಡ ತಲುಪಿದೆ.

ಆಪರೇಷನ್ ಅಜಯ್; ಇಸ್ರೇಲ್‌ನಿಂದ ದೆಹಲಿಗೆ ಬಂದಿಳಿದ ಇಬ್ಬರು ನೇಪಾಳೀಯರು ಸೇರಿ 143 ಭಾರತೀಯರು!
'ಆಪರೇಷನ್ ಅಜಯ್' ಕಾರ್ಯಾಚರಣೆ ಭಾಗವಾಗಿ ಇಸ್ರೇಲ್-ಹಮಾಸ್ ಸಂಘರ್ಷದ ನಡುವೆ ಇಸ್ರೇಲ್ ತೊರೆಯಲು ಬಯಸಿದ್ದ ಇಬ್ಬರು ನೇಪಾಳದ ನಾಗರಿಕರು ಮತ್ತು ನಾಲ್ಕು ಶಿಶುಗಳು ಸೇರಿದಂತೆ 143 ಮಂದಿ ಭಾರತೀಯರನ್ನು ಹೊತ್ತ ವಿಶೇಷ ವಿಮಾನವು ಭಾನುವಾರ ದೆಹಲಿಗೆ ಬಂದಿಳಿದಿದೆ.

ಗಾಜಾ ಮೇಲೆ ಇಸ್ರೇಲ್ ಆಕ್ರಮಣ ಖಂಡಿಸಿ ಮೆಹಬೂಬಾ ಮುಫ್ತಿ ನೇತೃತ್ವದಲ್ಲಿ ಪ್ರತಿಭಟನೆ
ಗಾಜಾದಲ್ಲಿ ಇಸ್ರೇಲ್‌ನ ಮಿಲಿಟರಿ ಕಾರ್ಯಾಚರಣೆ ಖಂಡಿಸಿ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ(ಪಿಡಿಪಿ)ದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರ ನೇತೃತ್ವದಲ್ಲಿ ಪಿಡಿಪಿ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.

ಇಸ್ರೇಲ್-ಹಮಾಸ್ ಯುದ್ಧ: ಗಾಜಾದಲ್ಲಿನ ಮನೆ ತೊರೆದ 1 ಮಿಲಿಯನ್ ಪ್ಯಾಲೆಸ್ಟೀನಿಯರು; 12,500 ಮಂದಿ ಗಾಯ
ಸ್ಥಳಾಂತರಗೊಳ್ಳುವಂತೆ ಇಸ್ರೇಲ್ ಸೂಚನೆ ನೀಡಿದ ನಂತರ ಗಾಜಾದ ಜನಸಂಖ್ಯೆಯ ಸರಿಸುಮಾರು ಅರ್ಧದಷ್ಟಿರುವ 1 ಮಿಲಿಯನ್ ಗಿಂತಲೂ ಹೆಚ್ಚುಪ್ಯಾಲೆಸ್ಟೀನಿಯರು ಉತ್ತರ ಮತ್ತು ಗಾಜಾ ನಗರದಲ್ಲಿನ ಮನೆಗಳನ್ನು ತೊರೆದಿದ್ದಾರೆ.

ಗಾಜಾದಲ್ಲಿ ನಾಲ್ವರು, ವೆಸ್ಟ್ ಬ್ಯಾಂಕ್ ನಲ್ಲಿ 12-13 ಭಾರತೀಯರು ಸಿಲುಕಿದ್ದಾರೆ: ಕೇಂದ್ರ
'ಆಪರೇಷನ್ ಅಜಯ್' ಅಡಿಯಲ್ಲಿ 18 ನೇಪಾಳಿ ಪ್ರಜೆಗಳು ಸೇರಿದಂತೆ ಸುಮಾರು 1,200 ಭಾರತೀಯರನ್ನು ಇಸ್ರೇಲ್‌ನಿಂದ ಕರೆತರಲಾಗಿದೆ ಮತ್ತು ಅವಶ್ಯಕತೆಗಳಿಗೆ ಅನುಗುಣವಾಗಿ ಹೆಚ್ಚಿನ ವಿಮಾನಗಳನ್ನು ನಿಯೋಜಿಸಲಾಗುವುದು...

ಸುಪ್ರಿಯಾ ಸುಳೆಯನ್ನು ಗಾಜಾಕ್ಕೆ ಶರದ್ ಪವಾರ್ ಕಳುಹಿಸಬಹುದು: ಅಸ್ಸಾಂ ಸಿಎಂ ಹೀಗೆ ಹೇಳಿದ್ದು ಏಕೆ?
ಭಯೋತ್ಪಾದಕ ಸಂಘಟನೆ ಹಮಾಸ್ ವಿರುದ್ಧದ ಹೋರಾಟದಲ್ಲಿ ಇಸ್ರೇಲ್‌ನೊಂದಿಗೆ ಪ್ರಧಾನಿ ನರೇಂದ್ರ ಮೋದಿ ನಿಂತಿದ್ದಾರೆ ಎಂದು ಟೀಕಿಸಿರುವ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ.

ಟೆಲ್ ಅವಿವ್ ನಲ್ಲಿ ಗಾಜಾ, ವೆಸ್ಟ್ ಬ್ಯಾಂಕ್ ಗೆ 100 ಮಿಲಿಯನ್ ಡಾಲರ್ ನೆರವು ಘೋಷಿಸಿದ ಬೈಡನ್!
ಯುದ್ಧಗ್ರಸ್ತ ಇಸ್ರೇಲ್ ಗೆ ಭೇಟಿ ನೀಡಿದ ಅಮೇರಿಕಾ ಅಧ್ಯಕ್ಷ ಜೋ ಬೈಡನ್ ತಾವು ಇಲ್ಲಿನ ಸಮಸ್ಯೆಗೆ ದ್ವಿ ರಾಷ್ಟ್ರ ಪರಿಹಾರಕ್ಕೆ ಬೆಂಬಲ ಸೂಚಿಸುವುದಾಗಿ ಹೇಳಿದ್ದಾರೆ.

ಇಸ್ರೇಲ್-ಹಮಾಸ್ ಯುದ್ಧ: ಗಾಜಾದಲ್ಲಿ ಸಾವಿನ ಸಂಖ್ಯೆ 3,478ಕ್ಕೆ ಏರಿಕೆ
ಇಸ್ರೇಲ್-ಹಮಾಸ್ ನಡುವಿನ ಯುದ್ಧ ಪರಿಣಾಮ ಗಾಜಾದಲ್ಲಿ ಮೃತಪಟ್ಟವರ ಸಂಖ್ಯೆ 3,478ಕ್ಕೆ ಏರಿಕೆಯಾಗಿದ್ದು, 12,000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ಹಮಾಸ್ ನಿಯಂತ್ರಿತ ಆರೋಗ್ಯ ಸಚಿವಾಲಯ ಬುಧವಾರ ಹೇಳಿದೆ.

