Gautam Adani

ಅದಾನಿ ಗ್ರೂಪ್‌ಗೆ ದೊಡ್ಡ ಆಘಾತ: ಒಂದೇ ದಿನ 90,000 ಕೋಟಿ ರೂ. ನಷ್ಟ!
ಬುಧವಾರದ ವಹಿವಾಟಿನ ಕೊನೆಯ ಗಂಟೆಯಲ್ಲಿ ಷೇರುಪೇಟೆಯಲ್ಲಿ 1000 ಅಂಕಗಳಿಗಿಂತಲೂ ಹೆಚ್ಚು ಕುಸಿತ ಕಂಡುಬಂದಿದ್ದು, ಬಿಎಸ್‌ಇ ಸೆನ್ಸೆಕ್ಸ್ 72,652 ಅಂಕಗಳ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಮತ್ತೆ ಪುಟಿದೆದ್ದ ಗೌತಮ್ ಅದಾನಿ: ಮತ್ತೊಮ್ಮೆ 100 ಬಿಲಿಯನ್ ಡಾಲರ್ ಕ್ಲಬ್‌ಗೆ ಸೇರ್ಪಡೆ!
ಹಿಂಡೆನ್‌ಬರ್ಗ್ ವರದಿಯ ನಂತರ ತೀವ್ರ ಕುಸಿತ ಕಂಡಿದ್ದ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರು ಮತ್ತೆ ಪುನರಾಗಮನ ಮಾಡಿದ್ದಾರೆ. ಮತ್ತೊಮ್ಮೆ 100 ಬಿಲಿಯನ್ ಡಾಲರ್ ಕ್ಲಬ್ ಸೇರಿದ್ದಾರೆ.

ಮುಕೇಶ್ ಅಂಬಾನಿ ಹಿಂದಿಕ್ಕಿದ ಗೌತಮ್ ಅದಾನಿ: ಭಾರತದ, ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ!
ಹಿಂಡನ್ ಬರ್ಗ್ ವರದಿ ಕುರಿತಂತೆ ಕೋರ್ಟ್ ನ ಮಹತ್ವದ ಆದೇಶ ಹೊರಬಿದ್ದ ಬೆನ್ನಲ್ಲೇ ಇದೀಗ ಮತ್ತೆ ಗೌತಮ್ ಅದಾನಿ ಭಾರತದ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಅದಾನಿ ಷೇರುಗಳಲ್ಲಿ ಶೇಕಡ 17ರಷ್ಟು ಏರಿಕೆ: 10 ಲಕ್ಷ ಕೋಟಿ ರೂ. ದಾಟಿದ ಮಾರುಕಟ್ಟೆ ಮೌಲ್ಯ!
ಅದಾನಿ ಗ್ರೂಪ್‌ನ ಎಲ್ಲಾ ಷೇರುಗಳು ಇಂದು ಸಾಕಷ್ಟು ಜಿಗಿತ ಕಾಣುತ್ತಿವೆ. ಸಮೂಹದ ಪ್ರಮುಖ ಕಂಪನಿ ಅದಾನಿ ಎಂಟರ್‌ಪ್ರೈಸಸ್‌ನ ಷೇರುಗಳು ಶೇ.17ಕ್ಕಿಂತ ಹೆಚ್ಚು ಏರಿಕೆ ಕಂಡಿದೆ.

ಅದಾನಿ ಕುರಿತ ನನ್ನ ಮುಂದಿನ ಭಾಷಣಕ್ಕೆ ಪ್ರಧಾನಿ ಮೋದಿ ಹೆದರಿ ನನ್ನನ್ನು ಅನರ್ಹಗೊಳಿಸಲಾಗಿದೆ: ರಾಹುಲ್ ಗಾಂಧಿ
ನನ್ನನ್ನು ಸಂಸದ ಸ್ಥಾನದಿಂದ ಶಾಶ್ವತವಾಗಿ ಅನರ್ಹಗೊಳಿಸಿದರೂ, ನಾನು ನನ್ನ ಹೋರಾಟವನ್ನು, ಸತ್ಯ, ನ್ಯಾಯ-ನಿಷ್ಠೆ ಪರ ಹೋರಾಟವನ್ನು ಮುಂದುವರಿಸುತ್ತೇನೆ. ನಾನು ಸಂಸತ್ತಿನ ಒಳಗೆ ಇದ್ದೇನೋ ಇಲ್ಲವೋ ಎಂಬುದು ಮುಖ್ಯವಲ್ಲ. ದೇಶಕ್ಕಾಗಿ ಹೋರಾಟವನ್ನು ಮುಂದುವರಿಸುತ್ತೇನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪುನರುಚ್ಛರಿಸಿದ್ದಾರೆ.

ಅದಾನಿ ಜೊತೆ ರಾಬರ್ಟ್ ವಾದ್ರಾ? ರಾಹುಲ್ ಗಾಂಧಿ, ಕಾಂಗ್ರೆಸ್ ವಿರುದ್ಧ ಸ್ಮೃತಿ ಇರಾನಿ ವಾಗ್ದಾಳಿ
ಉದ್ಯಮಿ ಗೌತಮ್ ಅದಾನಿ ಕುರಿತಂತೆ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸುತ್ತಿರುವ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಾಗ್ದಾಳಿ ನಡೆಸಿದ್ದಾರೆ.

ಅದಾನಿ ಬಂಧನಕ್ಕೆ ಆಗ್ರಹಿಸಿ ಕೇಂದ್ರ ಹಣಕಾಸು ಸಚಿವರ ಕಚೇರಿ ಮುಂದೆ ಟಿಎಂಸಿ ಸಂಸದರ ಪ್ರತಿಭಟನೆ
ಉದ್ಯಮಿ ಗೌತಮ್ ಅದಾನಿಯನ್ನು ಅವರನ್ನು ಬಂಧಿಸುವಂತೆ ಒತ್ತಾಯಿಸಿ ಟಿಎಂಸಿ ಸಂಸದರ ನಿಯೋಗ ಗುರುವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.

ಸತ್ಯಕ್ಕೆ ಜಯ ಸಿಗಲಿದೆ: ಸುಪ್ರೀಂ ಸಮಿತಿ ಕುರಿತು ಅದಾನಿ ಪ್ರತಿಕ್ರಿಯೆ
ಸಮಿತಿಯೊಂದರಿಂದ ಹಿಂಡೆನ್‌ಬರ್ಗ್ ವರದಿ ತನಿಖೆ ಮಾಡುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಬಗ್ಗೆ ಗೌತಮ್ ಅದಾನಿ ಪ್ರತಿಕ್ರಿಯಿಸಿದ್ದಾರೆ.

1,500 ಕೋಟಿ ರೂ. ಸಾಲ ಪಾವತಿಸಿದ ಅದಾನಿ ಪೋರ್ಟ್ಸ್; ಇನ್ನೂ ಸಾವಿರ ಕೋಟಿ ರೂ. ಬಾಕಿ
ಹಿಂಡನ್ ಬರ್ಗ್ ವರದಿ ಹೊರಬಿದ್ದ ನಂತರ ವಹಿವಾಟಿನಲ್ಲಿ ತೀವ್ರ ಕುಸಿತ ಕಂಡ ಬಿಲಿಯನೇರ್ ಗೌತಮ್ ಅದಾನಿ ನೇತೃತ್ವದ ಸಂಸ್ಥೆಯು ಮತ್ತೆ ಪುಟಿದೇಳಲು ಹಲವು ತಂತ್ರಗಳನ್ನು ಅನುಸರಿಸುತ್ತಿದ್ದು, ಅದಾನಿ ಒಡೆತನದ ಅದಾನಿ ಪೋರ್ಟ್ಸ್ ಮತ್ತು ಎಸ್ ಇಝಡ್ ಈಗಾಗಲ್ 1,500 ಕೋಟಿ ರೂಪಾಯಿ ಸಾಲವನ್ನು ಪಾವತಿಸಿದೆ, ಇನ್ನೂ 1,000 ಕೋಟಿ ರೂಪಾಯಿಗಳನ್ನು ಮರುಪಾವತಿಸುವುದಾಗಿ ಭರವಸೆ ನೀಡಿದೆ.

