Gadag

ಜಲ ಜೀವನ್ ಮಿಷನ್ ಯೋಜನೆ ಜಾರಿ: ಗದಗ ಜಿಲ್ಲೆಗೆ ಮೊದಲ ಸ್ಥಾನ
ಜಲ ಜೀವನ್ ಮಿಷನ್ (JJM) ಯೋಜನೆ ಅನುಷ್ಠಾನದಲ್ಲಿ ಗದಗ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದ್ದು, ಧಾರವಾಡ, ಮಂಡ್ಯ ಮತ್ತು ದಕ್ಷಿಣ ಕನ್ನಡ ಜಿಲ್ಲೆ ನಂತರದ ಸ್ಥಾನಗಳಲ್ಲಿವೆ. ಯೋಜನೆ ಅನುಷ್ಠಾನಕ್ಕೆ ಗ್ರಾಮಸ್ಥರು ನೀಡಿದ ಅಪಾರ ಬೆಂಬಲ ಯಶಸ್ಸಿಗೆ ಕಾರಣವಾಗಿದೆ.

ಎಮ್ಮೆಯಿಂದ ಬಸ್ ನಿಲ್ದಾಣ ಉದ್ಘಾಟನೆ: ಜನಪ್ರತಿನಿಧಿಗಳು, ಅಧಿಕಾರಿಗಳ ಗಮನ ಸೆಳೆಯಲು ಗ್ರಾಮಸ್ಥರ ಉಪಾಯ!
ಗದಗ ಜಿಲ್ಲೆಯ ಹಳ್ಳಿಯೊಂದರಲ್ಲಿ ಬಸ್ ನಿಲ್ದಾಣ ಉದ್ಘಾಟನೆಯ ವಿಶಿಷ್ಟ ಸಮಾರಂಭ. ಇಂತಹ ಕಾರ್ಯಕ್ರಮಗಳಿಗೆ ರಾಜಕಾರಣಿಗಳು ಮತ್ತು ಪ್ರಮುಖ ವ್ಯಕ್ತಿಗಳು ಬರುತ್ತಾರೆ, ಆದರೆ ಈ ಕಾರ್ಯಕ್ರಮ ಸಂಪೂರ್ಣ ಭಿನ್ನ, ಇದಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದು ಎಮ್ಮೆ.

ಗದಗದ ಈ ಪಂಪನಾಶಿ ಗ್ರಾಮದಲ್ಲಿ ಯೋಗವೇ ಉಸಿರು
ಗದಗದಿಂದ 10 ಕಿಲೋ ಮೀಟರ್ ದೂರದಲ್ಲಿರುವ ಕಪ್ಪತಗುಡ್ಡ ತಪ್ಪಲಿನ ಪಂಪನಾಶಿ ಗ್ರಾಮದ ನಿವಾಸಿಗಳು ತಮ್ಮ ಆರೋಗ್ಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ.

ಪಾಳುಬಿದ್ದ ಬಾವಿಗಳ ಜೀರ್ಣೋದ್ಧಾರ; ಗದಗ ಗ್ರಾಮಸ್ಥರ ಸ್ವಚ್ಛತಾ ಅಭಿಯಾನ; ಯುವಕರ ಕಾರ್ಯಕ್ಕೆ ಶ್ಲಾಘನೆ
ಪಾಳು ಬಿದ್ದು ಬಳಕೆ ನಿರುಪಯೋಗವಾಗಿರುವ ಬಾವಿಗಳ ಜೀರ್ಣೋದ್ಧಾರ ಕಾರ್ಯದ ಮೂಲಕ ಗದಗ ಜಿಲ್ಲೆಯ ಗ್ರಾಮವೊಂದರ ಗ್ರಾಮಸ್ಥರು ಇದೀಗ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಗದಗದ 'ಚಾಯ್‌ವಾಲಾ ಮೋದಿ'ಗೆ ಬಿಜೆಪಿ ಟಿಕೆಟ್
'ಚಾಯ್‌ವಾಲಾ ಮೋದಿ’ ಎಂದೇ ಖ್ಯಾತರಾಗಿರುವ ಗದಗದ ಟೀ ಮಾರಾಟಗಾರರೊಬ್ಬರು ಗದಗ-ಬೆಟಗೇರಿ ಪಟ್ಟಣದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ಪಡೆದಿದ್ದಾರೆ.

ಬಯಲು ಶೌಚ ಮುಕ್ತಗೊಳಿಸಲು ಗ್ರಾಮಕ್ಕೆ ಹೋಗಿ ಶಿಳ್ಳೆ ಊದಿದ ಗದಗ ಜಿಲ್ಲೆಯ ಪಂಚಾಯತ್ ಅಧಿಕಾರಿಗಳು!
21ನೇ ಶತಮಾನದ ಈ ಆಧುನಿಕ ಯುಗದಲ್ಲಿ ಇಂದಿಗೂ ಹಲವು ಹಳ್ಳಿಭಾಗಗಳಲ್ಲಿ ಬಯಲು ಶೌಚ ಮತ್ತು ಮಲ ವಿಸರ್ಜನೆಯನ್ನು ನೋಡುತ್ತೇವೆ.

ಕಾರಿಗೆ ಆಟೋ ಢಿಕ್ಕಿ: ಗದಗ ಪಟ್ಟಣದಲ್ಲಿ ಆಟೋ ಚಾಲಕ ಸಾವು, ಮತ್ತೊಬ್ಬರಿಗೆ ಗಾಯ
ಕಾರಿಗೆ ಆಟೋ ಢಿಕ್ಕಿ ಹೊಡೆದು ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಗದಗ ಪಟ್ಟಣದ ಕಾಳಸಾಪುರ ಬೈಪಾಸ್ ನಲ್ಲಿ ಕಳೆದ ತಡರಾತ್ರಿ ನಡೆದಿದೆ.

ಕಲಾಪ್ರಿಯರನ್ನು ಕೈಬೀಸಿ ಕರೆಯುತ್ತಿದೆ ಗದಗ ಜಿಲ್ಲೆಯ ರೋಣ ಬಳಿ ಇರುವ 'ಕಲಾಕಾಶಿ'; ಕಲೆ, ನಾಣ್ಯ ಸಂಗ್ರಹಗಳ ಅಪರೂಪದ ಸಂಗ್ರಹಾಲಯ
ಇವರ ಕಲಾ ಸಂಗ್ರಹ ನೋಡಿದರೆ ಅಚ್ಚರಿಯಾಗಬಹುದು. 5ನೇ ಶತಮಾನದ ನಾಣ್ಯಗಳಿಂದ ಹಿಡಿದು ಇಲ್ಲಿಯತನಕದ ನಾಣ್ಯ ಸಂಗ್ರಹಗಳಿವೆ. ಪ್ರತಿ ಕೋಣೆಯಲ್ಲಿ ನಾಣ್ಯಗಳ ಛಾಯಾಚಿತ್ರಗಳಿವೆ. ಪೈಸೆಯಿಂದ ಹಿಡಿದು ಆಣೆಯಿಂದ ಹಿಡಿದು 10 ಸಾವಿರದ ನೋಟುಗಳಿವೆ.

ಗದಗ ಜಿಲ್ಲೆಯ ಸೂಡಿ ಪಟ್ಟಣದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಚಾಲುಕ್ಯರ ಕಾಲದ ಸುಂದರ ಐತಿಹಾಸಿಕ ಸ್ಮಾರಕ!
ಸೂಡಿ, ಗದಗ ಜಿಲ್ಲೆಯ ಒಂದು ಐತಿಹಾಸಿಕ ಪಟ್ಟಣವಾಗಿದ್ದು, 10-11ನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರ ರಾಜಧಾನಿಯಾಗಿತ್ತು.

