Former MLA

ವಿಜಯಪುರ: ಸರಳ, ಸಜ್ಜನ ರಾಜಕಾರಣಿ ಮಾಜಿ ಶಾಸಕ ಎನ್.ಎಸ್. ಖೇಡ್ ನಿಧನ
ಜಿಲ್ಲೆಯ ಇಂಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎನ್.ಎಸ್.ಖೇಡ್(74) ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಬೆಳಿಗ್ಗೆ ನಿಧನರಾಗಿದ್ದಾರೆ.

ಪುದುಚೇರಿ ಮಾಜಿ ಶಾಸಕ ಮತ್ತು ಎನ್ಆರ್ ಕಾಂಗ್ರೆಸ್ ಮುಖಂಡ ವಿ.ಭಾಲನ್ ಕೊರೋನಾಗೆ ಬಲಿ
ಭಾಲನ್ ಮಂಗಳವಾರ ಸಾವನ್ನಪ್ಪಿದ್ದು ಪತ್ನಿ ಮತ್ತು ಪುತ್ರರನ್ನು ಅಗಲಿದ್ದಾರೆ. ಕಾಮರಾಜ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಾಲನ್ ಅವರಿಗೆ ಕೊರೋನಾ ಸೋಂಕು ತಗುಲಿತ್ತು. ನಂತರ ಅವರನ್ನು ಶ್ರೀ ಮನಕುಲ ವಿನನಗರ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ನೆರವಿಗೆ ಬಂದ ಮಾಜಿ ಶಾಸಕ ಜಿತೇಂದ್ರ ಸಿಂಗ್ ಶುಂಟಿ: ಕೊರೋನಾದಿಂದ ಸತ್ತ 45 ಶವಗಳ ಅಂತ್ಯಸಂಸ್ಕಾರ
ಕೊರೋನಾದಿಂದ ಸತ್ತ ಕುಟುಂಬಸ್ಥರ ಪ್ರೀತಿ ಪಾತ್ರರ ಅಂತ್ಯ ಸಂಸ್ಕಾರ ನಡೆಸುವುದು ಕಷ್ಟದ ಕೆಲಸವಾಗಿದೆ, ಹೀಗಾಗಿ ಶಹದಾರಾ ಕ್ಷೇತ್ರದ ಮಾಜಿ ಶಾಸಕ ಜಿತೇಂದ್ರ ಸಿಂಗ್ ಶುಂಟಿ ಕೊರೋನಾದಿಂದ ಸತ್ತವರ ಅಂತ್ಯ ಸಂಸ್ಕಾರವನ್ನು ಗೌರವದಿಂದ ನೆರವೇರಿಸಲು ಮುಂದಾಗಿದ್ದಾರೆ.

ಮಾಜಿ ಶಾಸಕಿ, ಕಾಂಗ್ರೆಸ್ ಹಿರಿಯ ನಾಯಕಿ ವಿನ್ನಿಫ್ರೆಡ್ ಫರ್ನಾಂಡಿಸ್ ನಿಧನ
ಮಾಜಿ ಶಾಸಕಿ, , ಎಂಎಲ್‌ಸಿ ಮತ್ತು ಹಿರಿಯ ಕಾಂಗ್ರೆಸ್ ನಾಯಕಿಯಾದ ವಿನ್ನಿಫ್ರೆಡ್ ಫರ್ನಾಂಡಿಸ್ (90)ಏಪ್ರಿಲ್ 28 ರ ಮಂಗಳವಾರ ಮಧ್ಯಾಹ್ನ ತಮ್ಮ ಚರ್ಚ್ ರಸ್ತೆ ನಿವಾಸದಲ್ಲಿ ನಿಧನರಾದರು.

ಚಾಮುಂಡೇಶ್ವರಿ ಕ್ಷೇತ್ರದ ಮಾಜಿ ಶಾಸಕ ಸತ್ಯನಾರಾಯಣ ನಿಧನ
ಚಾಮುಂಡೇಶ್ವರಿ ಕ್ಷೇತ್ರದ ಮಾಜಿ ಶಾಸಕ ಎಂ.ಸತ್ಯನಾರಾಯಣ (74) ನಿಧನರಾಗಿದ್ದಾರೆ.ಅನಾರೋಗ್ಯದಿಂದ ಬಳಲುತ್ತಿದ್ದ ಸತ್ಯನಾರಾಯಣ ಗುರುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಬೆಳಗಾವಿ : ಮಾಜಿ ಶಾಸಕ, ಎಂಇಎಸ್ ಮುಖಂಡ ಸಂಭಾಜಿ ಪಾಟೀಲ್ ನಿಧನ
ಮಾಜಿ ಶಾಸಕ, ಎಂಇಎಸ್ ಮುಖಂಡ ಸಂಭಾಜಿ ಪಾಟೀಲ್ ನಿಧನರಾಗಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಂಭಾಜಿ ಪಾಟೀಲ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ , ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.

ಅಕ್ಷಯ ತೃತೀಯ ಶುಭ ದಿನ ಎಂದು ಸಾಬೀತುಪಡಿಸಲಿ, 10 ಲಕ್ಷ ರೂ. ಕೊಡುತ್ತೇನೆ: ಮಾಜಿ ಶಾಸಕ ಸೋಮಶೇಖರ್ ಸವಾಲು!
ಅಕ್ಷಯ ತೃತೀಯ ಜೀವನದಲ್ಲಿ ಸಮೃದ್ಧಿಯನ್ನು ತರುತ್ತದೆ ಎಂದು ಸಾಬೀತುಪಡಿಸಿದವರಿಗೆ 10 ಲಕ್ಷ ...

ಭಾಲ್ಕಿ ಮಾಜಿ ಶಾಸಕ ಡಾ. ವಿಜಯಕುಮಾರ ಖಂಡ್ರೆ ನಿಧನ
ಬೀದರ್ ಜಿಲ್ಲೆ ಭಾಲ್ಕಿ ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ಡಾ.ವಿಜಯಕುಮಾರ ಖಂಡ್ರೆ(60) ಸೋಮವಾರ ವಿಧಿವಶರಾದರು.

'ಜೆಡಿಎಸ್ ನವರು ಕೌರವ ವಂಶಸ್ಥರು, ಅವರ ಮೇಲೆ ಯುದ್ದ ಮಾಡಬೇಕಾದರೆ ಕೃಷ್ಣನಂತೆ ನಾನು ಇರುತ್ತೇನೆ'
ಯಾವನ್ ಬರ್ತಾನೋ ಬರ್ಲಿ, ನನ್ಮಕ್ಳು ಜೆಡಿಎಸ್ ನವರನ್ನ ಹೆದರಿಸಬೇಕು ಎಂದು ಮಾಜಿ ಶಾಸಕ ಸುರೇಶ್ ಗೌಡ ಜೆಡಿಎಸ್ ವಿರುದ್ಧ ಹರಿಹಾಯ್ದಿದ್ದಾರೆ....

