ನೆರವಿಗೆ ಬಂದ ಮಾಜಿ ಶಾಸಕ ಜಿತೇಂದ್ರ ಸಿಂಗ್ ಶುಂಟಿ: ಕೊರೋನಾದಿಂದ ಸತ್ತ 45 ಶವಗಳ ಅಂತ್ಯಸಂಸ್ಕಾರ
ಕೊರೋನಾದಿಂದ ಸತ್ತ ಕುಟುಂಬಸ್ಥರ ಪ್ರೀತಿ ಪಾತ್ರರ ಅಂತ್ಯ ಸಂಸ್ಕಾರ ನಡೆಸುವುದು ಕಷ್ಟದ ಕೆಲಸವಾಗಿದೆ, ಹೀಗಾಗಿ ಶಹದಾರಾ ಕ್ಷೇತ್ರದ ಮಾಜಿ ಶಾಸಕ ಜಿತೇಂದ್ರ ಸಿಂಗ್ ಶುಂಟಿ ಕೊರೋನಾದಿಂದ ಸತ್ತವರ ಅಂತ್ಯ ಸಂಸ್ಕಾರವನ್ನು ಗೌರವದಿಂದ ನೆರವೇರಿಸಲು ಮುಂದಾಗಿದ್ದಾರೆ.

ನವದೆಹಲಿ: ಕೊರೋನಾದಿಂದ ಸತ್ತ ಕುಟುಂಬಸ್ಥರ ಪ್ರೀತಿ ಪಾತ್ರರ ಅಂತ್ಯ ಸಂಸ್ಕಾರ ನಡೆಸುವುದು ಕಷ್ಟದ ಕೆಲಸವಾಗಿದೆ, ಹೀಗಾಗಿ ಶಹದಾರಾ ಕ್ಷೇತ್ರದ ಮಾಜಿ ಶಾಸಕ ಜಿತೇಂದ್ರ ಸಿಂಗ್ ಶುಂಟಿ ಕೊರೋನಾದಿಂದ ಸತ್ತವರ ಅಂತ್ಯ ಸಂಸ್ಕಾರವನ್ನು ಗೌರವದಿಂದ ನೆರವೇರಿಸಲು ಮುಂದಾಗಿದ್ದಾರೆ.
ಮಾಜಿ ಶಾಸಕರ ಸ್ವತಂತ್ರ ಸಂಸ್ಥೆಯಾಗಿರುವ ಶಹೀದ್ ಭಗತ್ ಸಿಂಗ್ ಸೇವಾ ದಳ (ಎಸ್‌ಬಿಎಸ್‌ಎಸ್‌ಡಿ) ಕಳೆದ ಮೂರು ತಿಂಗಳಲ್ಲಿ ಕೊರೋನಾ ದಿಂದ ಸಾವನ್ನಪ್ಪಿದ 45 ಶವಗಳ ಸಂಸ್ಕಾರ ನಡೆಸಿದ್ದಾರೆ ಅದರಲ್ಲಿ ಶವಗಳ ಗುರುತು ಪರಿಚಯ ಇರಲಿಲ್ಲ.
ಎಸ್ ಬಿಎಸ್ ಎಸ್ ಡಿ ಸಂಸ್ಥಾಪಕ 58 ವರ್ಷದ ಶುಂಠಿ ಮತ್ತು ಅವರ ಸಂಘಟನೆಯ 22 ಸ್ವಯಂ ಸೇವಕರು, 18 ವ್ಯಾನ್ ಗಳಲ್ಲಿ ಕೊರೋನಾದಿಂದ ಸತ್ತ 261 ಶವಗಳನ್ನು ಸಾಗಿಸಿದ್ದಾರೆ, ಜೊತಗೆ 250 ಕೊರೊನಾ ರೋಗಿಗಳನ್ನು ಕೋವಿಡ್ ಕೇರ್ ಸೆಂಟರ್ ಗೆ ರವಾನಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ಮಾಜಿ ಶಾಸಕ ಶುಂಟಿ ಕೂಡ ಕೊರೋನಾ ಸೋಂಕಿಗೆ ಒಳಗಾಗಿದ್ದರು. ಜೊತೆಗೆ ಅವರ ಪತ್ನಿ ಮತ್ತು ಇಬ್ಬರು ಮಕ್ಕಳಿಗೂ ಕೂಡ ಕೊರೋನಾ ಸೋಂಕು ತಗುಲಿತ್ತು.
ಕೊರೋನಾದಿಂದ ಸಾವನ್ನಪ್ಪಿದ 35 ಶವಗಳ ಅಂತ್ಯಸಂಸ್ಕಾರ ನೆರವೇರಿಸಿ ಅವರ ಕುಟುಂಬಕ್ಕೆ ಸಹಾಯಮಾಡಿದ್ದಾಗಿ ಶುಂಟಿ ತಿಳಿಸಿದ್ದಾರೆ. ಕ್ವಾರಂಟೈನ್ ನಲ್ಲಿರುವ ಅವರ ಕುಟುಂಬಸ್ಥರು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೋಳ್ಳಲು ಸಾಧ್ಯವಾಗುವುದಿಲ್ಲ, ಕೆಲವರು ಶವ ತೆಗೆದುಕೊಳ್ಳಲು ಭಯ ಪಡುತ್ತಾರೆ, ಹೀಗಾಗಿ ಅವರ ನಂಬಿಕೆಗೆ ಅನುಗುಣವಾಗಿ ನಾವು ಅಂತ್ಯ ಸಂಸ್ಕಾರ ನೆರೆವೇರಿಸುತ್ತೇವೆ ಎಂದು ಹೇಳಿದ್ದಾರೆ. ತಮ್ಮ ಸಂಘಟನೆ ಮೂರು ಜಿಲ್ಲೆಗಳಲ್ಲಿ ಸಕ್ರಿವಾಗಿದೆ, ಶುಂಟಿ ಅವರ ಸಂಘಟನೆಯ ಕೆಲಸಕ್ಕಾಗಿ ಸರ್ಕಾರಿ ಅಧಿಕಾರಿಗಳು ಅವರನ್ನು ಹೊಗಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


