Forest Department

ಮಂಗಳೂರು: ಸಮುದ್ರ ತೀರದಲ್ಲಿ 'ಆಲಿವ್ ರಿಡ್ಲಿ' ಕಡಲಾಮೆ ಗೂಡುಗಳು ಪತ್ತೆ; ರಕ್ಷಣೆಗೆ ಅರಣ್ಯ ಇಲಾಖೆ ಕ್ರಮ!
ಮಂಗಳೂರಿನಲ್ಲಿ ಆಲಿವ್ ರಿಡ್ಲಿ ಕಡಲಾಮೆ ಸಂರಕ್ಷಣಾ ಕ್ರಮಗಳು ಫಲ ನೀಡಿವೆ. ಕಳೆದ ಮೂರು ವಾರಗಳಲ್ಲಿ ಸಸಿಹಿತ್ಲು ಮತ್ತು ಇಡ್ಯ ನಡುವಿನ 3-4 ಕಿಲೋಮೀಟರ್ ವ್ಯಾಪ್ತಿಯಲ್ಲಿ ಆರು ಗೂಡುಗಳು ಪತ್ತೆಯಾಗಿವೆ.

ಮತ್ತೆ ಕಾಡಾನೆ ಸೆರೆ ಹಿಡಿಯಲು 'ಆಪರೇಷನ್ ಜಂಬೋ' ಆರಂಭಿಸಿದ ಅರಣ್ಯ ಇಲಾಖೆ
ಕಳೆದ ತಿಂಗಳು ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಮೈಸೂರು ದಸರಾ ಆನೆ ಅರ್ಜುನ ಆನೆಯೊಂದಿಗೆ ಕಾದಾಟದಲ್ಲಿ ಸಾವನ್ನಪ್ಪಿದ ನಂತರ ಸ್ಥಗಿತಗೊಂಡಿದ್ದ 'ಆಪರೇಷನ್ ಜಂಬೋ ಗುರುವಾರ ಪುನರಾರಂಭಿಸಲಾಗಿದೆ...

ಕೊಡಗು: ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿ ಕಾಫಿ ಎಸ್ಟೇಟ್‌ನಲ್ಲಿ ಶವವಾಗಿ ಪತ್ತೆ
ಕೊಡಗು ಜಿಲ್ಲೆಯ ವಿರಾಜಪೇಟೆ ವ್ಯಾಪ್ತಿಯ ಕಾಫಿ ಎಸ್ಟೇಟ್‌ನಲ್ಲಿ ಹುಲಿಯೊಂದು ಸತ್ತು ಬಿದ್ದಿರುವುದು ಪತ್ತೆಯಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಹುಲಿ ಮೇಲಿನ ಗಾಯಗಳಿಂದಾಗಿ ಅದು ಇನ್ನೊಂದು ಹುಲಿಯೊಂದಿಗೆ ನಡೆದ ಕಾದಾಟದಲ್ಲಿ ಪ್ರಾಣಬಿಟ್ಟಿರುವ ಶಂಕೆ ವ್ಯಕ್ತವಾಗಿದೆ ಎಂದು ಅವರು ಹೇಳಿದರು.

ಕಾಡಾನೆ ದಾಳಿಗೆ ವ್ಯಕ್ತಿ ಸಾವು: ಚಿರತೆ ಸೆರೆಗೆ ಅರಣ್ಯ ಇಲಾಖೆ ಆಪರೇಷನ್!
ನಗರದ ಹೊರವಲಯದಲ್ಲಿ ಮತ್ತೆ ಕಾಡುಮೃಗಗಳ ದಾಳಿ ಮುಂದುವರೆದಿದ್ದು, ಆನೆ ದಾಳಿಗೆ ವ್ಯಕ್ತಿ ಮೃತಪಟ್ಟಿದ್ದರೆ, ಇತ್ತ ಜನರ ಆತಂಕಕ್ಕೆ ಕಾರಣವಾಗಿರುವ ಚಿರತೆ ಸೆರೆಗೆ ಅರಣ್ಯ ಇಲಾಖೆ ಹರಸಾಹಸ ಪಡುತ್ತಿದೆ.

ಮೈಸೂರು: ಗ್ರಾಮಗಳ ಸುತ್ತ ಕಾಣಿಸಿಕೊಂಡ ಹುಲಿ ಸೆರೆಹಿಡಿಯಲು ಕಾರ್ಯಾಚರಣೆ, ವಿಶೇಷ ತಂಡ ರಚನೆ
ಮೈಸೂರು ಜಿಲ್ಲೆಯಲ್ಲಿ ಭೀತಿ ಹುಟ್ಟಿಸಿರುವ ಹುಲಿಯನ್ನು ಸೆರೆಹಿಡಿಯಲು ಅಧಿಕಾರಿಗಳು ಸೋಮವಾರ ಕಾರ್ಯಾಚರಣೆ ಆರಂಭಿಸಿದ್ದಾರೆ. ಚಿಕ್ಕಕಾನ್ಯ, ದೊಡ್ಡಕಾನ್ಯ, ಬ್ಯಾತಹಳ್ಳಿ ಮತ್ತು ಸಿಂಧುವಳ್ಳಿ ಗ್ರಾಮದ ಸುತ್ತಮುತ್ತಲು ಇತ್ತೀಚೆಗೆ ಹಲವು ಬಾರಿ ಹುಲಿ ಕಾಣಿಸಿಕೊಂಡಿದ್ದು, ನಿವಾಸಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ.

ಹುಲಿ ಉಗುರು ಪ್ರಕರಣ: ಪ್ರಚಾರಕ್ಕಾಗಿ ದಾಳಿ ಮಾಡಿದ್ರಾ? ನಟ ಜಗ್ಗೇಶ್ ಗೆ ನೀಡಿದ್ದ ನೋಟಿಸ್ ಗೆ ತಡೆ ನೀಡಿದ ಹೈಕೋರ್ಟ್
ಹುಲಿ ಉಗುರು ಪ್ರಕರಣದಲ್ಲಿ ರಾಜ್ಯಸಭಾ ಸದಸ್ಯ ಮತ್ತು ನಟ ಜಗ್ಗೇಶ್ ಗೆ ನೀಡಲಾಗಿದ್ದ ನೋಟಿಸ್ ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಸಕ್ರೆಬೈಲ್ ಆನೆ ಶಿಬಿರ: 18 ತಿಂಗಳ ಗರ್ಭೀಣಿ 'ಭಾನುಮತಿ' ಆನೆ ಬಾಲ ಕತ್ತರಿಸಿದ ಕಿಡಿಗೇಡಿಗಳು!
ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ಆನೆ ಶಿಬಿರದಲ್ಲಿ ದುಷ್ಕರ್ಮಿಗಳು ಆನೆಯ ಮೇಲೆ ದಾಳಿ ಮಾಡಿ ಬಾಲವನ್ನು ತುಂಡರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಘಟನೆ ಕಳೆದ ವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ತುಮಕೂರು: ಮಾಂಸಕ್ಕಾಗಿ ನವಿಲುಗಳನ್ನು ಕೊಂದ ಆರೋಪದ ಮೇಲೆ ಒಡಿಶಾ ಮೂಲದ ಮೂವರ ಬಂಧನ
ತುಮಕೂರು ಜಿಲ್ಲೆಯ ಮಾರನಾಯಕನಪಾಳ್ಯ ಗ್ರಾಮದಲ್ಲಿ ಮಾಂಸಕ್ಕಾಗಿ ನವಿಲುಗಳನ್ನು ಕೊಂದ ಆರೋಪದ ಮೇಲೆ ಒಡಿಶಾ ಮೂಲದ ಮೂವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ. ಬಂಧಿತರನ್ನು ಬಿಟ್ಟಿಂಗ್ ನಾಯಕ್, ಬೈಶಕ್ ದಾವು ಮತ್ತು ದುಬಾ ಕಪಟ್ ಎಂದು ಗುರುತಿಸಲಾಗಿದೆ.

ಕಾಡಾನೆ ದಾಳಿಗೆ ರೈತ ಸಾವು; ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ
ಮೈಸೂರು ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಬಳಿ ಗುರುವಾರ ಕಾಡಾನೆ ದಾಳಿಗೆ ರೈತರೊಬ್ಬರು ಸಾವಿಗೀಡಾಗಿದ್ದಾರೆ. ಘಟನೆ ನಡೆದರೂ ಸ್ಥಳಕ್ಕೆ ಭೇಟಿ ನೀಡಲು ಮುಂದಾಗದ ಅರಣ್ಯ ಇಲಾಖೆ ಅಧಿಕಾರಿಗಳನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.

