ತುಮಕೂರು: ಮಾಂಸಕ್ಕಾಗಿ ನವಿಲುಗಳನ್ನು ಕೊಂದ ಆರೋಪದ ಮೇಲೆ ಒಡಿಶಾ ಮೂಲದ ಮೂವರ ಬಂಧನ
ತುಮಕೂರು ಜಿಲ್ಲೆಯ ಮಾರನಾಯಕನಪಾಳ್ಯ ಗ್ರಾಮದಲ್ಲಿ ಮಾಂಸಕ್ಕಾಗಿ ನವಿಲುಗಳನ್ನು ಕೊಂದ ಆರೋಪದ ಮೇಲೆ ಒಡಿಶಾ ಮೂಲದ ಮೂವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ. ಬಂಧಿತರನ್ನು ಬಿಟ್ಟಿಂಗ್ ನಾಯಕ್, ಬೈಶಕ್ ದಾವು ಮತ್ತು ದುಬಾ ಕಪಟ್ ಎಂದು ಗುರುತಿಸಲಾಗಿದೆ.

ತುಮಕೂರು: ಜಿಲ್ಲೆಯ ಮಾರನಾಯಕನಪಾಳ್ಯ ಗ್ರಾಮದಲ್ಲಿ ಮಾಂಸಕ್ಕಾಗಿ ನವಿಲುಗಳನ್ನು ಕೊಂದ ಆರೋಪದ ಮೇಲೆ ಒಡಿಶಾ ಮೂಲದ ಮೂವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ.
ಬಂಧಿತರನ್ನು ಬಿಟ್ಟಿಂಗ್ ನಾಯಕ್, ಬೈಶಕ್ ದಾವು ಮತ್ತು ದುಬಾ ಕಪಟ್ ಎಂದು ಗುರುತಿಸಲಾಗಿದೆ.
ಅಧಿಕಾರಿಗಳ ಪ್ರಕಾರ, ಆರೋಪಿಗಳು ಮಾರನಾಯಕನಪಾಳ್ಯದ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು ಮತ್ತು 'ರುಚಿಕರ' ಮಾಂಸಕ್ಕಾಗಿ ನವಿಲುಗಳನ್ನು ಕೊಂದಿದ್ದಾರೆ ಎನ್ನಲಾಗಿದೆ.
ಗ್ರಾಮದಲ್ಲಿ ನವಿಲುಗಳ ಮಾರಣಹೋಮ ನಡೆಸುತ್ತಿದ್ದು, ಈ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಪೊಲೀಸರು 1.5 ಕಿಲೋಗ್ರಾಂ ಹಸಿ ನವಿಲು ಮಾಂಸ, ಎರಡು ಕತ್ತರಿಸಿದ ಕಾಲುಗಳು ಮತ್ತು ಬೇಯಿಸಿದ ಪಕ್ಷಿಯ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.
ಜೊತೆಗೆ ನವಿಲು ಹಿಡಿಯಲು ಬಳಸುತ್ತಿದ್ದ ಬಲೆಗಳು, ಬಲೆ ಉಪಕರಣಗಳು ಮತ್ತು ಮಾಂಸ ಬೇಯಿಸಲು ಬಳಸುತ್ತಿದ್ದ ಪಾತ್ರೆಗಳನ್ನೂ ವಶಪಡಿಸಿಕೊಳ್ಳಲಾಗಿದೆ.
ಮಾಂಸವನ್ನು ಪರೀಕ್ಷೆಗಾಗಿ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದು, ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಮುಂದಿನ ತನಿಖೆ ನಡೆಯುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


