foreigners

ದಾವಣಗೆರೆ: ಜಿಲ್ಲೆಗೆ ಬರುವ ವಿದೇಶಿಯರಿಗೆ 'ಡೆಲ್ಟಾ ಪ್ಲಸ್' ರೂಪಾಂತರಿ ವೈರಸ್ ಪರೀಕ್ಷೆ!
ದಾವಣಗೆರೆಗೆ ಬರುವ ಪ್ರತೀ ವಿದೇಶಿಯರನ್ನು ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಹಾಗೂ ಜೀನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೊಳಪಡಿಸಲಾಗುತ್ತದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್ ಅವರು ಹೇಳಿದ್ದಾರೆ.

ಗೋಕರ್ಣದಲ್ಲಿ ಸಿಲುಕಿದ ವಿದೇಶಿ ಪ್ರಜೆಗಳು: ಕೊರೋನಾ ಲಸಿಕೆ ನೀಡುವಂತೆ ಸರ್ಕಾರಕ್ಕೆ ಮೊರೆ!
ಕೊರೋನಾ ಪರಿಸ್ಥಿತಿಯಿಂದಾಗಿ ಗೋಕರ್ಣದಲ್ಲಿ ಸಿಲುಕಿಕೊಂಡಿರುವ ವಿದೇಶಿ ಪ್ರಜೆಗಳು ತಮಗೂ ಕೊರೋನಾ ಲಸಿಕೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಆದರೆ, ಇದಕ್ಕೆ ಸರ್ಕಾರ ಇನ್ನೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದುಬಂದಿದೆ.

5 ವರ್ಗದ ವಿದೇಶಿಯರಿಗೆ ಭಾರತಕ್ಕೆ ಬರಲು ಗೃಹ ಸಚಿವಾಲಯ ಅನುಮತಿ: ಯಾವುದು ಆ ಐದು ವರ್ಗ?
ಕೊರೋನಾ ವೈರಸ್ ಸೋಂಕಿನ ಸಮಸ್ಯೆಯಿಂದಾಗಿ ಸುಮಾರು ಮೂರು ತಿಂಗಳಿನಿಂದ ವಿದೇಶಿಯರು ಭಾರತಕ್ಕೆ ಪ್ರವೇಶಿಸುವುದಕ್ಕೆ ನಿರ್ಬಂಧ ವಿಧಿಸಿದ್ದ ನಂತರ ಇದೀಗ ಕೇಂದ್ರ ಸರ್ಕಾರ ಐದು ವರ್ಗದ ವಿದೇಶಿಯರು ಭಾರತಕ್ಕೆ ಪ್ರವೇಶಿಸಬಹುದು ಎಂದು ಅನುಮತಿ ಕೊಟ್ಟಿದೆ.

ನಿಜಾಮುದ್ದೀನ್ ಮರ್ಕಜ್: 34 ರಾಷ್ಟ್ರಗಳ 376 ವಿದೇಶಿಗರ ಮೇಲೆ ಚಾರ್ಚ್ ಶೀಟ್ ದಾಖಲಿಸಿದ ಪೊಲೀಸರು
ದೇಶಾದ್ಯಂತ ಕೊರೋನಾವೈರಸ್ ಸೋಂಕು ವ್ಯಾಪಿಸುವಲ್ಲಿ ಪ್ರಮುಖ ಕಾರಣವಾಗಿರುವ ರಾಷ್ಟ್ರ ರಾಜಧಾನಿಯ ನಿಜಾಮುದ್ಧೀನ್ ಮರ್ಕಜ್ ನಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಂಡಿದ್ದ 34 ರಾಷ್ಟ್ರಗಳ 376 ವಿದೇಶಿ ಪ್ರಜೆಗಳ ಮೇಲೆ 35 ವಿವಿಧ ಚಾರ್ಜ್ ಶೀಟ್ ಗಳನ್ನು ದೆಹಲಿ ಪೊಲೀಸರು ನ್ಯಾಯಾಲಯವೊಂದರಲ್ಲಿ ದಾಖಲಿಸಿದ್ದಾರೆ.

ಕೊರೋನಾ ವೈರಸ್: ಭಾರತದಲ್ಲಿದ್ದ 60 ಸಾವಿರ ವಿದೇಶಿಗರು ತವರಿಗೆ ರವಾನೆ: ವಿದೇಶಾಂಗ ಇಲಾಖೆ
ಮಾರಕ ಕೊರೋನಾ ವೈರಸ್ ಹಿನ್ನಲೆಯಲ್ಲಿ ಭಾರತದಲ್ಲಿ ಅತಂತ್ರ ಸ್ಥಿತಿಯಲ್ಲಿದ್ದ ಸುಮಾರು 60 ಸಾವಿರ ವಿದೇಶಿಗರನ್ನು ಅವರ ತವರು ರಾಷ್ಟ್ರಗಳಿಗೆ ರವಾನೆ ಮಾಡಲಾಗಿದೆ ಎಂದು ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.

ನಂಜನಗೂಡಿನ ಜ್ಯುಬಿಲಿಯೆಂಟ್ ಗೆ ಭೇಟಿ ನೀಡಿದ್ದ 9 ವಿದೇಶಿಗರ ಪತ್ತೆ- ಸುರೇಶ್ ಕುಮಾರ್
ಮೈಸೂರಿನ ಕೊರೋನಾ ಹಾಟ್ ಸ್ಪಾಟ್ ಆಗಿರುವ ನಂಜನಗೂಡಿಗೆ ಭೇಟಿ ನೀಡಿದ್ದ 10 ವಿದೇಶಿಗರ ಪೈಕಿ 9 ಜನರನ್ನು ಪತ್ತೆಹಚ್ಚಲಾಗಿದೆ ಎಂದು ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ

ತಬ್ಲೀಘಿ ಜಮಾತ್‌ನಲ್ಲಿ 41 ದೇಶಗಳ 960 ವಿದೇಶಿಗರು ಭಾಗಿ, ದೇಶಾದ್ಯಂತ ಕಟ್ಟೆಚ್ಚರ!
ಸದ್ಯ ದೇಶವನ್ನು ತಬ್ಲೀಘಿ ಜಮಾತ್ ಮತ್ತಷ್ಟು ಕೆಂಗೆಟ್ಟಿಸಿದ್ದು ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಕಾರ್ಯಕ್ರಮದಲ್ಲಿ ವಿಶ್ವದ 41 ದೇಶಗಳಿಂದ 960 ಮಂದಿ ಭಾಗವಹಿಸಿರುವ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

ವಿದೇಶಿ ಪ್ರಯಾಣಿಕರ ನಿಗಾ ವ್ಯವಸ್ಥೆ ಬಲಪಡಿಸಿ: ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ
ವಿಶ್ವದ ವಿವಿಧ ಭಾಗಗಳಿಂದ ಭಾರತಕ್ಕೆ ಆಗಮಿಸಿದವರು ಕೊರೋನಾ ಸೋಂಕಿನ ಪರೀಕ್ಷೆಗೆ ಒಳಗಾದವರ ಸಂಖ್ಯೆ ಮಧ್ಯೆ ಭಾರೀ ವ್ಯತ್ಯಾಸವಿರುವಂತೆ ಕಂಡು ಬರುತ್ತಿದೆ ಎಂದು ಕೇಂದ್ರ ಸರ್ಕಾರ ಆತಂಕ ವ್ಯಕ್ತಪಡಿಸಿದೆ.

ಕೊರೋನಾವೈರಸ್: ಅರುಣಾಚಲ ಪ್ರದೇಶಕ್ಕೆ ವಿದೇಶಿಗರ ಪ್ರವೇಶ ನಿರ್ಬಂಧ
ಕೊರೋನಾವೈರಸ್ ಹಿನ್ನೆಲೆಯಲ್ಲಿ ವಿದೇಶಿಗರಿಗೆ ಕೊಡುವ ರಕ್ಷಿತ ಪ್ರದೇಶ ಅನುಮತಿಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲು ಅರುಣಾಚಾಲ ಪ್ರದೇಶ ಸರ್ಕಾರ ನಿರ್ಧರಿಸಿದೆ

