ದೇಶ

ತಬ್ಲೀಘಿ ಜಮಾತ್‌‌ನಲ್ಲಿ 41 ದೇಶಗಳ 960 ವಿದೇಶಿಗರು ಭಾಗಿ, ದೇಶಾದ್ಯಂತ ಕಟ್ಟೆಚ್ಚರ!

ಸದ್ಯ ದೇಶವನ್ನು ತಬ್ಲೀಘಿ ಜಮಾತ್ ಮತ್ತಷ್ಟು ಕೆಂಗೆಟ್ಟಿಸಿದ್ದು ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಕಾರ್ಯಕ್ರಮದಲ್ಲಿ ವಿಶ್ವದ 41 ದೇಶಗಳಿಂದ 960 ಮಂದಿ ಭಾಗವಹಿಸಿರುವ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

ತಬ್ಲೀಘಿ ಜಮಾತ್‌‌ನಲ್ಲಿ 41 ದೇಶಗಳ 960 ವಿದೇಶಿಗರು ಭಾಗಿ, ದೇಶಾದ್ಯಂತ ಕಟ್ಟೆಚ್ಚರ!
ಸಂಗ್ರಹ ಚಿತ್ರ
Published On :

ನವದೆಹಲಿ: ಸದ್ಯ ದೇಶವನ್ನು ತಬ್ಲೀಘಿ ಜಮಾತ್ ಮತ್ತಷ್ಟು ಕೆಂಗೆಟ್ಟಿಸಿದ್ದು ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಕಾರ್ಯಕ್ರಮದಲ್ಲಿ ವಿಶ್ವದ 41 ದೇಶಗಳಿಂದ 960 ಮಂದಿ ಭಾಗವಹಿಸಿರುವ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. 

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಇಂಡೋನೇಷಿಯಾದಿಂದ (379) ಅತೀ ಹೆಚ್ಚು ಜನರು ಭಾಗವಹಿಸಿದ್ದರು. ಇನ್ನು ಬಾಂಗ್ಲಾದೇಶದಿಂದ 110, ಕಿರ್ಗಿಸ್ತಾನ(77), ಮಲೇಶಿಯಾ(75), ಥೈಲ್ಯಾಂಡ್(65), ಮಯನ್ಮಾರ್(63), ಶ್ರೀಲಂಕಾ(33), ಇರಾನ್(24), ಕಜಕಿಸ್ತಾನ(14), ವಿಯೆಟ್ನಾಂ(12) ಮತ್ತು ಫಿಲಿಫೈನ್ಸ್ ನಿಂದ 10 ಮಂದಿ ಭಾಗವಹಿಸಿದ್ದರು. 

ಇದರ ಜೊತೆಗೆ ಇನ್ನು ಹಲವು ರಾಷ್ಟ್ರಗಳಿಂದ ನೂರಾರು ಮಂದಿ ಭಾಗವಹಿಸಿದ್ದರು. ಸದ್ಯ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 2300ಕ್ಕೇರಿದ್ದು ಸಾವಿನ ಸಂಖ್ಯೆ 56ಕ್ಕೇರಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.