FLOODS

ವಾಯುಭಾರ ಕುಸಿತ: ಭಾರೀ ಮಳೆಗೆ ಸಿಲಿಕಾನ್ ಸಿಟಿ ತತ್ತರ, ರಸ್ತೆಗಳು ಜಲಾವೃತಗೊಂಡು ಜನರ ಪರದಾಟ
ಮುಂಗಾರು ಕೊನೆಗೊಳ್ಳುವ ದಿನಗಳು ಸಮೀಪಿಸುತ್ತಿದ್ದಂತೆಯೇ ನಗರದಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಶನಿವಾರ ಕೂಡ ನಗರದ ಅನೇಕ ಕಡೆ ಧಾರಾಕಾರ ಮಳೆ ಸುರಿದಿದೆ. ಪರಿಣಾಮ ರಸ್ತೆಗಳು ಜಲಾವೃತಗೊಂಡು ಜನರು ಪರದಾಡುವಂತಹ ಪರಿಸ್ಥಿತಿ ಎದುರಾಗಿತ್ತು.

ಬಾಂಗ್ಲಾದೇಶದಲ್ಲಿ ಪ್ರವಾಹ: ಸಾವಿನ ಸಂಖ್ಯೆ 251 ಕ್ಕೆ ಏರಿಕೆ
ಭಾರೀ ಮಳೆಯಿಂದ ಉಂಟಾಗಿರುವ ಪ್ರವಾಹಗಳಿಂದಾಗಿ ಬಾಂಗ್ಲಾದೇಶದ ಕೆಲ ಭಾಗಗಳಲ್ಲಿ ಒಟ್ಟು 251 ಜನರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಸರ್ಕಾರದ ವರದಿಯಲ್ಲಿ ತಿಳಿಸಲಾಗಿದೆ.

ಮಹಾಮಳೆಗೆ ಮಧ್ಯಪ್ರದೇಶ ತತ್ತರ: 14 ಮಂದಿ ಬಲಿ, ಹೊಸದಾಗಿ ನಿರ್ಮಿಸಿದ್ದ ಸೇತುವೆ ಕೊಚ್ಚಿ ಹೋಯ್ತು!
ಮಹಾಮಳೆಗೆ ಮಧ್ಯಪ್ರದೇಶ ಅಕ್ಷರಶಃ ತತ್ತರಿದ್ದು 14 ಮಂದಿ ಬಲಿಯಾಗಿದ್ದಾರೆ. ಇನ್ನು ಹೊಸದಾಗಿ ನಿರ್ಮಿಸಿದ್ದ ಸೇತುವೆ ಸಹ ಕೊಚ್ಚಿ ಹೋಗಿದೆ.

ಜಿಲ್ಲಾವಾರು ವಿಶೇಷ ಕಾರ್ಯಪಡೆ ರಚಿಸಿ ನೆರೆ ಪರಿಸ್ಥಿತಿ ನಿಭಾಯಿಸಿ: ಎಚ್.ಡಿ. ಕುಮಾರಸ್ವಾಮಿ
ಮುಂಗಾರು ಮಳೆಗೆ ನಲುಗಿರುವ ರಾಜ್ಯದ ಜನತೆ ಮತ್ತು ಜಾನುವಾರುಗಳ ರಕ್ಷಣೆಗೆ ಸಮರೋಪಾದಿಯಲ್ಲಿ ಸ್ಪಂದಿಸುವ ಪರಿಹಾರ ಕಾಮಗಾರಿಗಳನ್ನು ಅನುಷ್ಠಾನ ಮಾಡುವಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

ನೆರೆ ಪರಿಹಾರ ಕಾರ್ಯಗಳಿಗೆ 2ನೇ ಕಂತಿನಲ್ಲಿ ರೂ.669 ಕೋಟಿ ಬಿಡುಗಡೆ ಮಾಡಿದ ಕೇಂದ್ರ!
ಭೀಕರ ಪ್ರವಾಹಕ್ಕೆ ಸಿಲುಕಿ ಸಂಕಷ್ಟದಲ್ಲಿರುವ ರಾಜ್ಯಕ್ಕೆ ಕೇಂದ್ರ ಸರ್ಕಾರ ಎರಡನೇ ಕಂತಿನಲ್ಲಿ ರೂ.669 ಕೋಟಿ ಪರಿಹಾರ ಬಿಡುಗಡೆ ಮಾಡಿದೆ.

ಸಿದ್ದರಾಮಯ್ಯ ಪಾದಯಾತ್ರೆ ಪ್ಲ್ಯಾನ್: ರಾಜ್ಯವ್ಯಾಪಿ ಚರ್ಚೆಗೆ ಗ್ರಾಸ!
ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿರುವುದನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಮತ್ತೊಂದು ಪಾದಯಾತ್ರೆ ನಡೆಸಲಿದೆ ಎನ್ನುವ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಚರ್ಚೆ ಬಿಜೆಪಿಗರಲ್ಲೂ ಸಾಕಷ್ಟು ಕುತೂಹಲ ಮೂಡಿಸಿದೆ.

ನೆರೆ, ಅತಿವೃಷ್ಟಿಯಿಂದ ರಾಜ್ಯದಲ್ಲಿ ಆರ್ಥಿಕ ದುಷ್ಪರಿಣಾಮ- ಯಡಿಯೂರಪ್ಪ
ಯುಎನ್‍ಐ) ಪ್ರಸಕ್ತ ದೇಶದ ಜಿ.ಡಿ.ಪಿ ದರ ಶೇಕಡಾ 5ರಷ್ಟಿದ್ದು, ರಾಜ್ಯದ್ದು ಈ ಮೊದಲು ಜಿಎಸ್‍ಡಿಪಿ ಶೇಕಡಾ 9.6ರಷ್ಟಿತ್ತು. ಆದರೆ ನೆರೆ ಮತ್ತಿತರ ಕಾರಣಗಳಿಂದಾಗಿ ಕರ್ನಾಟಕದ ಆರ್ಥಿಕ ಪರಿಸ್ಥಿತಿಯ ಮೇಲೆ ದುಷ್ಪರಿಣಾಮ ಉಂಟಾಗಲಿದ್ದು, ರಾಜ್ಯದ ಆರ್ಥಿಕ ಬೆಳವಣಿಗೆಯು ಕುಂಠಿತವಾಗುವ ಸಾಧ್ಯತೆ ಇದೆ ಎಂದು.....

ಪ್ರವಾಹದ ನೀರ ಮಧ್ಯೆ ನಿಂತು ನೀರೆಯ ಚೆಲ್ಲಾಟ, ಜನರಿಗೆ ಸಂಕಟ!
ಮಹಾಮಳೆಗೆ ಬಿಹಾರ ಅಕ್ಷರಶಃ ನಲುಗಿದ್ದು ಈ ನಡುವೆ ಪ್ರವಾಹದ ನಡುವೆಯೂ ಎನ್ಐಎಫ್ಟಿ ವಿದ್ಯಾರ್ಥಿ, ಮಾಡೆಲ್ ಅದಿತಿ ಸಿಂಗ್ ಫೋಟೋಶೂಟ್ ಮಾಡಿಸಿ ನೆಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಜಲಾವೃತ ನಿವಾಸದಿಂದ ಬಿಹಾರದ ಡಿಸಿಎಂ ಸುಶೀಲ್ ಮೋದಿ, ಕುಟುಂಬ ಸದಸ್ಯರ ರಕ್ಷಣೆ
ಪ್ರವಾಹ ಪೀಡಿತ ಬಿಹಾರದ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಹಾಗೂ ಅವರ ಕುಟುಂಬ ಸದಸ್ಯರನ್ನು ಜಲಾವೃತ ನಿವಾಸದಿಂದ ರಕ್ಷಿಸಲಾಗಿದೆ.

