flood

ಕೃಷ್ಣ, ಭೀಮ ನದಿ ಜಲಾಶಯಗಳ ಕ್ಷಣಕ್ಷಣದ ಮಾಹಿತಿ ವಿನಿಮಯಕ್ಕೆ ಕರ್ನಾಟಕ, ಮಹಾರಾಷ್ಟ್ರ ಒಪ್ಪಿಗೆ; ನೀರು ಹಂಚಿಕೆಗೆ ಸಮ್ಮತಿ!
ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳು ಕ್ಷಣಕ್ಷಣದ ಮಾಹಿತಿ, ಮಳೆಯ ಪ್ರಮಾಣ, ಜಲಾಶಯಗಳಿಂದ ನೀರು ಬಿಡುವ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ನಿರ್ಧರಿಸಿದವು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಕರ್ನಾಟಕದ ಮೇಲೆ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಏಕೆ: ಸಿದ್ದರಾಮಯ್ಯ
ಇಡೀ ರಾಜ್ಯ ಇನ್ನೂ ನೆರೆ ಪ್ರವಾಹದಿಂದ ಪುನಶ್ಚೇತನಗೊಳ್ಳಬೇಕಾದರೆ ಸರ್ಕಾರ ಮಾತ್ರ ನಿಗಮ, ಮಂಡಳಿಗಳಿಗೆ ನೇಮಕಾತಿ ಮಾಡಿಕೊಳ್ಳುವುದರಲ್ಲಿ, ಅನಗತ್ಯ ಖರ್ಚು ಮಾಡುವುದರಲ್ಲಿ ನಿರತವಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಕರಾಳ ಶುಕ್ರವಾರದ ಮಳೆ, ಪ್ರವಾಹಕ್ಕೆ ಕೊಚ್ಚಿ ಹೋದ ಬೆಂಗಳೂರಿನ 'ಸ್ಮಾರ್ಟ್ ಸಿಟಿ' ಇಮೇಜ್
ಸ್ಮಾರ್ಟ್ ಸಿಟಿ ಇಮೇಜ್ ಬೆಂಗಳೂರಿನಿಂದ ನೀರಿನಲ್ಲಿ ಕೊಚ್ಚಿ ಹೋಗಿದೆ ಎನಿಸುತ್ತಿದೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಸತತ ಮಳೆಯಿಂದ ಬೆಂಗಳೂರಿನ ಹಲವು ಭಾಗಗಳು ತೀವ್ರ ಮಟ್ಟದಲ್ಲಿ ಹಾನಿಯಾಗಿದ್ದು ಐಟಿ ಸಿಟಿ ಎಂಬ ಕೀರ್ತಿಗೆ ಭಾಜನವಾಗಿದ್ದ ಬೆಂಗಳೂರಿನ ನಿಜರೂಪ ದರ್ಶನವಾಗುತ್ತಿದೆ.

ಒತ್ತುವರಿ ತೆರವು, ಒಳಚರಂಡಿ ನಿರ್ವಹಣೆ ಮಾಡದಿರುವುದೇ ಪ್ರವಾಹ ಅವ್ಯವಸ್ಥೆಗೆ ಕಾರಣ: ಬೆಂಗಳೂರು ನಿವಾಸಿಗಳ ಆರೋಪ
ಮೊನ್ನೆ ಶುಕ್ರವಾರ ಸುರಿದ ಭಾರೀ ಮಳೆಗೆ ದಕ್ಷಿಣ ಬೆಂಗಳೂರು ನಲುಗಿ ಹೋಗಿದೆ. ಅನೇಕ ಮನೆಗಳಿಗೆ ನೀರು ನುಗ್ಗಿ ಪ್ರವಾಹ ಉಂಟಾಗಿದೆ, ಅಲ್ಲಲ್ಲಿ ವಾಹನಗಳಿಗೆ ಹಾನಿಯಾಗಿದೆ. ಚರಂಡಿ ವ್ಯವಸ್ಥೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಜನರು ಆರೋಪಿಸುತ್ತಿದ್ದಾರೆ.

ಮಹಾರಾಷ್ಟ್ರ ಗಡಿಯಲ್ಲಿ ವಲಸೆ ಕಾರ್ಮಿಕರ ದಟ್ಟಣೆ; ಕೊರೋನಾ ಸೋಂಕು ಹೆಚ್ಚುವ ಭೀತಿ!
ಸುಗ್ಗಿ ಕಾಲ ಹತ್ತಿರ ಬಂದಿದ್ದು, ಪ್ರತಿವರ್ಷ ಕಬ್ಬಿನ ಕಟಾವು ಅಕ್ಟೋಬರ್ ತಿಂಗಳಿನಲ್ಲಿ ಆರಂಭಗೊಳ್ಳಲಿದೆ. ಪ್ರತೀವರ್ಷ ಕಬ್ಬು ಕಡಿಯಲು ಮಹಾರಾಷ್ಟ್ರದ ಕುಶಲ ಕಾರ್ಮಿಕರು ರಾಜ್ಯಕ್ಕೆ ಧಾವಿಸುತ್ತಿದ್ದರು. ಆದರೆ, ಈ ಬಾರಿ ಕೊರೋನಾ ಭೀತಿ ಎದುರಾಗಿದೆ.

ಭಾರೀ ಮಳೆ-ಪ್ರವಾಹದಿಂದ ತತ್ತರಿಸಿರುವ ತೆಲಂಗಾಣಕ್ಕೆ 15 ಕೋಟಿ ರು. ನೆರವು: ಅರವಿಂದ್ ಕೇಜ್ರಿವಾಲ್
ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ತೆಲಂಗಾಣ ಜನ ಜೀವನ ಈಗಾಗಲೇ ಕೊರೋನಾದಿಂದಾಗಿ ಆರ್ಥಿಕವಾಗಿ ತತ್ತರಿಸಿರುವ ತೆಲಂಗಾಣಕ್ಕೆ ಈ ನೆರೆ ಸ್ಥಿತಿ ಗಾಯದ ಮೇಲೆ ಬರೆ ಎಳೆದಂತಾಗಿದೆ.

ವೈಮಾನಿಕ ಸಮೀಕ್ಷೆ ನಂತರ ಹೆಚ್ಚಿನ ನೆರವಿಗಾಗಿ ಪ್ರಧಾನಿ ಮೋದಿಗೆ ಮನವಿ: ಸಿಎಂ ಯಡಿಯೂರಪ್ಪ
ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ಹೆಚ್ಚಿನ ನೆರವಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಳಿ ಮನವಿ ಮಾಡಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಅತಿವೃಷ್ಟಿಯಿಂದ ರೂ.3000 ಕೋಟಿ ನಷ್ಟ: ಕಂದಾಯ ಸಚಿವ ಆರ್.ಅಶೋಕ್
ನಾಲ್ಕೈದು ದಿನದ ವರದಿ ಪ್ರಕಾರ ರಾಜ್ಯದಲ್ಲಿ ಮಳೆಯಿಂದಾಗಿ ಸುಮಾರು ರೂ.3000 ಕೋಟಿ ಹಾನಿಯಾಗಿದೆ. 10 ಜನ, ನೂರಕ್ಕೂ ಹೆಚ್ಚು ಜಾನುವಾರು ಮೃತಪಟ್ಟಿದ್ದು, 8 ಸಾವಿರ ಜನ ಪರಿಹಾರ ಕೇಂದ್ರದಲ್ಲಿದ್ದಾರೆಂದು ಕಂದಾಯ ಸಚಿವ ಆರ್.ಅಶೋಕ ಹೇಳಿದ್ದಾರೆ.

ವಿಜಯಪುರ: ಪ್ರವಾಹ ಸಂಕಷ್ಟಕ್ಕೆ ಸಿಲುಕ್ಕಿದ್ದ 400 ಕುಟಂಬಗಳನ್ನು ಸ್ಥಳಾಂತರಿಸಿದ ಎನ್'ಡಿಆರ್'ಎಫ್ ಪಡೆ
ವಿಜಯಪುರ ಜಿಲ್ಲೆಯ ಇಂಡಿ ಹಾಗೂ ಸಿಂದಗಿ ತಾಲೂಕುಗಳಲ್ಲಿ ಪ್ರವಾಹ ಗಂಭೀರ ಸ್ವರೂಪ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಪರಿಣಾಮ ಭೀಮ ನದಿ ತೀರ ಪ್ರದೇಶಗಳಲ್ಲಿದ್ದ 400ಕ್ಕೂ ಹೆಚ್ಚು ಕುಟುಂಬಗಳನ್ನು ಸುರಕ್ಷಿತ ಪ್ರದೇಸಕ್ಕೆ ಸ್ಥಳಾಂತರಿಸಲಾಗಿದೆ.

