fine

ಅಪಾಯಕಾರಿ ಚಾಲನೆ: ರಾಬರ್ಟ್ ವಾದ್ರಾ ಕಾರಿಗೆ ದಂಡ ಹಾಕಿದ ಪೊಲೀಸರು!
ದೆಹಲಿಯ ಸುಖ್ ದೇವ್ ವಿಹಾರ್ ಪ್ರದೇಶದಲ್ಲಿರುವ ತಮ್ಮ ಕಚೇರಿಗೆ ಭದ್ರತಾ ಸಿಬ್ಬಂದಿ ಜೊತೆಗೆ ಹೋಗುತ್ತಿದ್ದ ವೇಳೆ ಅಪಾಯಕಾರಿಯಾಗಿ ನಿರ್ಲಕ್ಷ್ಯ ಚಾಲನೆ ಮಾಡಿದ್ದ ಆರೋಪದ ಮೇಲೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ ಉದ್ಯಮಿ ರಾಬರ್ಟ್ ವಾದ್ರಾ ಅವರ ವಾಹನಕ್ಕೆ ಪೊಲೀಸರು ದಂಡ ಹಾಕಿದ್ದಾರೆ.

ಲಾಕ್ಡೌನ್ ನಿಯಮ ಉಲ್ಲಂಘನೆ: ಬೆಂಗಳೂರು ಪೊಲೀಸರಿಂದ 3 ದಿನದಲ್ಲಿ 10 ಲಕ್ಷ ರೂ. ದಂಡ ಸಂಗ್ರಹ!
ನಗರದಲ್ಲಿ ಅನ್'ಲಾಕ್ ಪ್ರಕ್ರಿಯೆ ಹಂತ ಹಂತವಾಗಿ ಆರಂಭವಾಗುತ್ತಿದ್ದು, ಈ ನಡುವಲ್ಲೇ ನಗರ ಪೊಲೀಸರು ಲಾಕ್ಡೌನ್ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಇದರಂತೆ ಕೇವಲ ಮೂರು ದಿನಗಳಲ್ಲಿ 10 ಲಕ್ಷ ದಂಡವನ್ನು ವಸೂಲಿ ಮಾಡಿದ್ದಾರೆ.

ಕೋವಿಡ್ ನಿಯಮ ಉಲ್ಲಂಘನೆ: ಧಾರವಾಡ ಪಾಲಿಕೆಯಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗೆ 10 ಸಾವಿರ ರೂ. ದಂಡ
ಕೋವಿಡ್ ನಿಯಮ ಉಲ್ಲಂಘನೆ ಆರೋಪದ ಮೇಲೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ 10 ಸಾವಿರ ರೂಪಾಯಿ ದಂಡ ವಿಧಿಸಿದೆ.

ಸಾಮೂಹಿಕ ಲಸಿಕೆ ಪ್ರಶ್ನಿಸಿದ್ದ ನಿವೃತ್ತ ಸೇನಾಧಿಕಾರಿಗೆ ರೂ.50 ಸಾವಿರ ದಂಡ ವಿಧಿಸಿದ ಹೈಕೋರ್ಟ್
ಕ್ಲಿನಿಕಲ್ ಟ್ರಯಲ್ ಪೂರ್ಣಗೊಳಿಸದೆ ಕೊರೋನಾ ಲಸಿಕೆ ನೀಡುತ್ತಿರುವುದನ್ನು ಸ್ಥಗಿತಗೊಳಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್, ಅರ್ಜಿದಾರರಿಗೆ ರೂ.50 ಸಾವಿರ ದಂಡ ವಿಧಿಸಿ ಆದೇಶಿಸಿದೆ.

ರೈಲ್ವೆ ಪ್ಲಾಟ್ ಫಾರ್ಮ್ ನಲ್ಲಿ, ರೈಲಿನಲ್ಲಿ ಸಂಚರಿಸುವಾಗ ಮಾಸ್ಕ್ ಧರಿಸದಿದ್ದರೆ 500 ರೂ. ವರೆಗೆ ದಂಡ: ಇಲಾಖೆ ಎಚ್ಚರಿಕೆ
ಕೊರೋನಾ ಸೋಂಕು ನಿಯಂತ್ರಣಕ್ಕೆ ಭಾರತೀಯ ರೈಲ್ವೆ ಇಲಾಖೆ ಕೂಡ ಹಲವು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ಹೆಲ್ಮೆಟ್ ಇಲ್ಲದೇ ಮೊಬೈಲ್ ನಲ್ಲಿ ಮಾತನಾಡಿಕೊಂಡು ಮೂವರ ಸವಾರಿ: ಮಹಿಳಾ ಪೇದೆಗಳಿಗೆ ಬಿತ್ತು ದಂಡ!
ಹೆಲ್ಮಟ್ ಧರಿಸದೇ ಮೊಬೈಲ್ ನಲ್ಲಿ ಮಾತನಾಡಿಕೊಂಡು ತ್ರಿಬಲ್ ರೈಡಿಂಗ್ ಹೋಗುತ್ತಿದ್ದ ಮೂವರು ಮಹಿಳಾ ಪೇದೆಗಳಿಗೆ 3,300 ರು ದಂಡ ವಿಧಿಸಲಾಗಿದೆ.

ದಂಡ ಪಾವತಿಸಿದ ನಂತರ ಶಶಿಕಲಾ ಸಂಬಂಧಿ ಸುಧಾಕರನ್ ಬಿಡುಗಡೆ: ಕೋರ್ಟ್ ಆದೇಶ
ಎಐಡಿಎಂಕೆ ಉಚ್ಚಾಟಿತ ನಾಯಕಿ ವಿ.ಕೆ ಶಶಿಕಲಾ ಅವರ ಸೋದರ ಸಂಬಂಧಿ ವಿಎನ್ ಸುಧಾಕರನ್ ಅವರ ಜೈಲುವಾಸ ಅವಧಿ ಪೂರ್ಣಗೊಂಡಿದ್ದು ಯಾವುದೇ ಸಮಯದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಮೈಸೂರು: ಹಿಂದುಳಿದ ವರ್ಗದವರ ಹೇರ್ ಕಟ್ಟಿಂಗ್ ಮಾಡಿದ್ದಕ್ಕೆ ಕ್ಷೌರಿಕನ ಕುಟುಂಬಕ್ಕೆ ಬಹಿಷ್ಕಾರ, 50 ಸಾವಿರ ರೂ. ದಂಡ!
ಹಿಂದುಳಿದ ವರ್ಗಕ್ಕೆ ಸೇರಿದವರ ತಲೆಕೂದಲು ಕತ್ತರಿಸಿದ್ದಕ್ಕೆ ಸಲೂನ್ ನ ಮಾಲಿಕನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿ ಗ್ರಾಮದ ಮುಖ್ಯಸ್ಥರು 50 ಸಾವಿರ ರೂಪಾಯಿ ದಂಡ ಕಟ್ಟುವಂತೆ ಒತ್ತಾಯಿಸಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹಲ್ಲಾರೆ ಗ್ರಾಮದಲ್ಲಿ ನಡೆದಿದೆ.

ರಾಜಸ್ಥಾನದಲ್ಲಿ ಪಟಾಕಿ ಬಳಸಿದರೆ 2 ಸಾವಿರ ದಂಡ!
ರಾಜಸ್ಥಾನದಲ್ಲಿ ಪಟಾಕಿ ಬಳಸುವವರ ವಿರುದ್ಧ 2 ಸಾವಿರ ರೂಪಾಯಿ ದಂಡವನ್ನು ವಿಧಿಸಲಾಗುತ್ತಿದೆ. ಯಾವುದೇ ಅಂಗಡಿ ಮಾಲೀಕರು ಪಟಾಕಿ ಮಾರಾಟ ಮಾಡುವುದು ಕಂಡುಬಂದಲ್ಲಿ 10 ಸಾವಿರ, ಯಾರಾದರೂ ಪಟಾಕಿ ಬಳಸುವುದು ಕಂಡುಬಂದಲ್ಲಿ 2 ಸಾವಿರ ದಂಡವನ್ನು ವಿಧಿಸುವುದಾಗಿ ರಾಜಸ್ಥಾನ ಸರ್ಕಾರ ಸೂಚನೆ ನೀಡಿದೆ.

