Farmer

ಭೂ ವಿವಾದ ಬಗೆಹರಿಸದಿದ್ದರೆ ವಿಷ ಸೇವನೆ: ಸಚಿವರ ಸಮ್ಮುಖದಲ್ಲೇ ವಿಷದ ಬಾಟಲಿ ತೋರಿಸಿ ರೈತ ಆತ್ಮಹತ್ಯೆ ಬೆದರಿಕೆ
ಸಭೆ ಮುಗಿದು ಸಚಿವರು ಹೊರಬಂದ ವೇಳೆ ಮುದ್ದಕುರ್ಕಿಯ ನಿವಾಸಿ ಅಂಜನಪ್ಪ (55) ಎಂಬ ರೈತ, ಭೂ ವಿವಾದ ಸಮಸ್ಯೆ ಬಗೆಹರಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಪರಿಹಾರವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಿಕ್ಕಮಗಳೂರು: ಕಾಡಾನೆ ದಾಳಿಯಿಂದ ಬೆಳೆ ನಷ್ಟ; ಪರಿಹಾರಕ್ಕೆ ಲಂಚ ಕೇಳಿದ ಅರಣ್ಯ ಅಧಿಕಾರಿ; ವಿಡಿಯೋ ವೈರಲ್
ಅರಣ್ಯ ಇಲಾಖೆ ಕಾರ್ಯವಿಧಾನದ ಪ್ರಕಾರ, ಅಧಿಕಾರಿಗಳು ಕಾಡು ಪ್ರಾಣಿಗಳಿಂದ ಬೆಳೆ ಹಾನಿಗೊಳಗಾದ ಸ್ಥಳಗಳಿಗೆ ಭೇಟಿ ನೀಡಿ ಮೌಲ್ಯಮಾಪನ ವರದಿಯನ್ನು ಸಿದ್ಧಪಡಿಸಬೇಕು. ಅದರ ಆಧಾರದ ಮೇಲೆ ಸರ್ಕಾರ ಪರಿಹಾರ ಬಿಡುಗಡೆ ಮಾಡುತ್ತದೆ.

30 ಸಾವಿರ ಚದರ ಅಡಿ ಜಾಗದಲ್ಲಿ ಬರೋಬ್ಬರೀ 42 ಬಗೆಯ ಗೋಧಿ ಬೆಳೆದು ಮಾದರಿಯಾದ ಹುಬ್ಬಳ್ಳಿ ರೈತ!
ಎರಡನೇ ಬಾರಿಗೆ ಇಷ್ಟೊಂದು ವಿಧದ ಗೋಧಿಯನ್ನು ಬೆಳೆಯುತ್ತಿದ್ದಾರೆ. ಕಳೆದ ವರ್ಷವೂ ಇದೇ ರೀತಿಯ ಪ್ರಯೋಗ ಮಾಡಿದ್ದರು, ಆದರೆ ಇಳುವರಿ ತೃಪ್ತಿಕರವಾಗಿರಲಿಲ್ಲ.

ವಿಜಯನಗರ: ಮನೆ ಕಟ್ಟಲು ಅನುಮತಿ ನೀಡಿಲ್ಲ ಎಂದು ನೊಂದು ರೈತ ಆತ್ಮಹತ್ಯೆಗೆ ಯತ್ನ
ಮನೆ ನಿರ್ಮಾಣಕ್ಕೆ ಇ-ಸ್ವತ್ತು ಹಾಗೂ ಪರವಾನಗಿ ನೀಡುವಂತೆ ಹಲವಾರು ಬಾರಿ ಅರ್ಜಿ ಸಲ್ಲಿಸಿದ್ದರೂ ಅನುಮತಿ ನೀಡಲಾಗಿಲ್ಲವೆಂದು ರೈತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಅಧಿಕಾರಿಗಳಿಗೆ ಲಂಚ ಕೊಡಲು ನನ್ನ ಬಳಿ ಹಣವಿಲ್ಲ, ಈ ಮೂಲಂಗಿಯನ್ನೇ ಕೊಡುತ್ತೇನೆ': ಮೈಕ್ ಮೂಲಕ ಘೋಷಣೆ ಮಾಡಿದ ರೈತ! Video
ಲೋಕಾಯುಕ್ತರು ಕಾಮಗಾರಿ ಆರಂಭಿಸುವಂತೆ ಸೂಚನೆ ನೀಡಿದ್ದರೂ ಕಳೆದ ಎರಡು ವರ್ಷಗಳಿಂದ ಅಧಿಕಾರಿಗಳು ರಸ್ತೆ ಯೋಜನೆಯನ್ನು ವಿಳಂಬ ಮಾಡುತ್ತಿದ್ದಾರೆ ಎಂದು ಪ್ರಸನ್ನ ಕುಮಾರ್ ಆರೋಪಿಸಿದ್ದಾರೆ.

ಕೊಡಗು: ಗದ್ದೆಗೆ ಹೋಗುತ್ತಿದ್ದ ವೇಳೆ ಏಕಾಏಕಿ ಹುಲಿ ದಾಳಿ; ಹಸು ಸಾವು, ರೈತ ಪಾರು
ಪೊನ್ನಂಪೇಟೆ ವಲಯ ಅರಣ್ಯ ಅಧಿಕಾರಿ ಗಂಗಾಧರ್ ಮತ್ತು ಗ್ರಾಮಕ್ಕೆ ಭೇಟಿ ನೀಡಿದ ಇತರ ಅಧಿಕಾರಿಗಳು ಹುಲಿ ದಾಳಿಯಲ್ಲಿ ಹಸು ಸಾವನ್ನಪ್ಪಿರುವುದನ್ನು ದೃಢಪಡಿಸಿದ್ದಾರೆ. ಇದೇ ವೇಳೆ ಹುಲಿ ಸೆರೆಗೆ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.

ದಾವಣಗೆರೆ: ತಾಳೆ ಬೆಳೆ ರಕ್ಷಿಸಲು ಹೋಗಿ ರೈತ ಸಜೀವದಹನ
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಕುರುವ ಗ್ರಾಮದ ಈಶ್ವರಪ್ಪ ಮೃತ ರೈತರಾಗಿದ್ದಾರೆ.

ರೈತರಿಗೆ ಸಿಹಿಸುದ್ದಿ ನೀಡಿದ ರಾಜ್ಯ ಸರ್ಕಾರ; ಮೆಕ್ಕೆಜೋಳ ಖರೀದಿ ಮಿತಿ 50 ಕ್ವಿಂಟಾಲ್‌ಗೆ ಹೆಚ್ಚಳ
FRUITS ಸಾಫ್ಟ್‌ವೇರ್‌ನಲ್ಲಿ ದಾಖಲಾಗಿರುವ ರೈತರ ಭೂಮಿಯ ವಿಸ್ತೀರ್ಣದ ಆಧಾರದ ಮೇಲೆ, ಪ್ರತಿ ರೈತನಿಂದ 50 ಕ್ವಿಂಟಾಲ್‌ಗಳವರೆಗೆ ಮೆಕ್ಕೆಜೋಳವನ್ನು ಖರೀದಿಸಬಹುದು.

ಕೃಷಿ ಮೇಳದಿಂದ ವಾಪಸ್ಸಾಗುತ್ತಿದ್ದ ರೈತನಿಗೆ ಮಚ್ಚು ತೋರಿಸಿ ಬೆದರಿಕೆ; 100 ರೂಪಾಯಿ ದೋಚಿದ ಮೂವರು!
ಈ ಘಟನೆಯನ್ನು ಮತ್ತೊಬ್ಬ ದಾರಿಹೋಕ ರೆಕಾರ್ಡ್ ಮಾಡುತ್ತಿರುವುದನ್ನು ಗಮನಿಸಿದ ಆರೋಪಿಗಳಲ್ಲಿ ಒಬ್ಬಾತ ಆತನ ಕಡೆಗೆ ಮಚ್ಚನ್ನು ಬೀಸಿದ್ದಾನೆ. ಸದ್ಯ ದಾರಿಹೋಕ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾನೆ.

